ರೂಮ್ ಬಾಗಿಲು ತೆರೆದ ಪೊಲೀಸರಿಗೆ ಎದುರಾದದ್ದು ಶಾಕ್… ಲೈಟ್ ಆಫ್, ತಳ್ಳಾಟ, ಚಾಕು ಪ್ರದರ್ಶನ… ಬಳಿಕ ಸ್ಕೋಡಾ ಕಾರಿನಲ್ಲಿ ಎಸ್ಕೇಪ್!
ಕುಂಸಿ ಪೋಲಿಸ್ ಲಾಡ್ಜ ಕಾರ್ಯಾಚರಣೆಯಲ್ಲಿ ಪತ್ತೆ ಯಾಗಿರುವುದು ಪೇಪರ್ ಸ್ಪ್ರೆ ಮತ್ತು ಉದ್ದನೆಯ ಚಾಕು ಸ್ವಲ್ಪ ಮಿಸ್ ಆಗಿದ್ದರು ಪೊಲೀಸರ ಜೀವಕ್ಕೆ ಅಪಾಯವಿತ್ತು ಕಾಯ೯ಚರಣೆಯಲ್ಲಿ ಇದದ್ದು ಒಬ್ಬರೇ ಪೇದೆ ಇಬ್ಬರು ಮಹೀಳಾ ಪೋಲಿಸ್ ಮೋದಲೆ ಗಾಂಜಾ ನಷಾದಲ್ಲಿ ತೆಲುತ್ತಿದ್ದ ನಾಲ್ಕು ನಶೆ ಗಿರಾಕಿಗಳು,!
ಚೋರಡಿಯ ಸಿಗಂದೂರೇಶ್ವರಿ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಕೆಲ ಯುವಕರು ತಂಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಮಾಹಿತಿ ಆಧರಿಸಿ ಕುಂಸಿ ಪೊಲೀಸ್ ಠಾಣೆಯ ಪೊಲೀಸರು ಲಾಡ್ಜ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಲ್ಲಿ ಪೊಲೀಸರೇ ಕ್ಷಣಕಾಲ ಬೆಚ್ಚಿಬೀಳುವಂತಹ ಘಟನೆ ನಡೆದಿದೆ.
ಪೊಲೀಸರು ರೂಮ್ ಬಾಗಿಲು ತೆರೆದು ಒಳಗೆ ಪ್ರವೇಶಿಸಿ ಅಲ್ಲಿದ್ದವರ ಗುರುತಿನ ಚೀಟಿ ಕೇಳಿದ್ದಾರೆ. ಆಗ ಪರಿಸ್ಥಿತಿ ಏಕಾಏಕಿ ಬದಲಾಗಿದೆ ಎನ್ನಲಾಗಿದೆ. ಆರೋಪಿಗಳ ಪೈಕಿ ಒಬ್ಬ ಚಾಕು ತೆಗೆದು ಪೊಲೀಸರನ್ನು ಬೆದರಿಸಿದ್ದಾನೆ.
ಅಷ್ಟೇ ಅಲ್ಲ, ಲೈಟ್ ಆಫ್ ಮಾಡಿ ಗೊಂದಲ ಸೃಷ್ಟಿಸಿ ಪೊಲೀಸರನ್ನು ತಳ್ಳಿ ಅಲ್ಲಿಂದಪರಾರಿಯಾಗಿದ್ದಾನೆ.ರೂಮ್‌ನಿಂದ ಹೊರಬಂದಿದ್ದರೂ ಪೊಲೀಸರ ಕೈಗೆ ಸಿಗುತ್ತಾರೆ ಎಂಬ ಆತಂಕ ಆರೋಪಿಗಳಲ್ಲಿತ್ತೋ ಏನೋ. ಲಾಡ್ಜ್‌ನಿಂದ ಹೊರಗೆ ಬಂದ ನಾಲ್ಕು ಜನ ಸ್ಕೋಡಾ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ವೇಳೆ ಕುಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಪಾರ್ವತಿ ಭಾಯಿ, ಸಿಎಚ್‌ಸಿ ಪ್ರಕಾಶ್ ಹಾಗೂ ಡಬ್ಲ್ಯುಎಚ್‌ಸಿ ಆಸ್ಮಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಪೊಲೀಸರನ್ನೇ ತಳ್ಳಿ, ಚಾಕು ತೋರಿಸಿ ಪರಾರಿಯಾದ ಆರೋಪಿಗಳು ಎಲ್ಲಿಗೆ ಹೋದರು? ಇದೇ ಪ್ರಶ್ನೆ ಈಗ ಪೊಲೀಸರ ಮುಂದಿರುವ ದೊಡ್ಡ ಸವಾಲು.
ಘಟನೆ ಬಳಿಕ ಪೊಲೀಸರು ತಕ್ಷಣವೇ ವಿವಿಧ ಮಾರ್ಗಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಆಯನೂರು–ಶಿವಮೊಗ್ಗ ರಸ್ತೆ, ಹಣಗೆರೆಕಟ್ಟೆ ರಸ್ತೆ ಹಾಗೂ ಸವಳಂಗ ರಸ್ತೆ ಸೇರಿದಂತೆ ಹಲವು ಮಾರ್ಗಗಳಲ್ಲಿ ವಾಹನ ತಪಾಸಣೆ ಮತ್ತು ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ. ಆದರೆ ಸದ್ಯಕ್ಕೆ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ.
ಈ ಪ್ರಕರಣವನ್ನು ಕುಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಪಾರ್ವತಿ ಭಾಯಿ ಅವರು ದಾಖಲಿಸಿರುವ ಸುಮುಟೋ ಪ್ರಕರಣದ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.
ಇದರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಯುವಕರನ್ನು ಲಾಡ್ಜ್‌ನಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದ್ದ ಚೋರಡಿಯ ವ್ಯಕ್ತಿಯೊಬ್ಬನನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ ಅದರೆ ಅವನು ಸಹಾ ಎಸ್ಕೇಪ್ ಆಗಿದ್ದಾನೆ ಲಾಡ್ಜ್‌ನಲ್ಲಿ ಈ ಯುವಕರು ಯಾವ ಉದ್ದೇಶಕ್ಕಾಗಿ ತಂಗಿದ್ದರು? ಅವರು ಎಲ್ಲಿಂದ ಬಂದಿದ್ದರು? ಅವರ ಹಿನ್ನೆಲೆ ಏನು? ಲಾಡ್ಜ್‌ಗೆ ಬಂದದ್ದು ಏಕೆ? ಮತ್ತು ಪೊಲೀಸರನ್ನು ಕಂಡ ತಕ್ಷಣ ಚಾಕು ತೋರಿಸಿ ಪರಾರಿಯಾಗಲು ಕಾರಣವೇನು?
ಲಾಡ್ಜ್‌ಗಳು ಹಾಗೂ ವಸತಿ ಕೇಂದ್ರಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೂ ಇದೀಗ ಸಾರ್ವಜನಿಕರ ಗಮನ ಹರಿದಿದೆ. ಹೊರವಲಯಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಸಂಚಾರದ ಬಗ್ಗೆ ಸ್ಥಳೀಯರಲ್ಲಿ ಚರ್ಚೆ ಆರಂಭವಾಗಿದೆ.
ಪೊಲೀಸರಿಗೇ ಚಾಕು ತೋರಿಸಿ ನಾಲವರು ಪರಾರಿಯಾಗಿರುವುದು ಸಾಮಾನ್ಯ ಘಟನೆ ಅಲ್ಲ. ಆರೋಪಿಗಳು ಸಿಕ್ಕಿಬಿದ್ದ ನಂತರವೇ ಈ ಘಟನೆಯ ಹಿಂದಿರುವ ನಿಜವಾದ ಕಥೆ ಹೊರಬರಲಿದೆ.
ಸದ್ಯಕ್ಕೆ ಪೊಲೀಸರ ತನಿಖೆ ಮುಂದುವರಿದಿದ್ದು, ಎನ್.ಡಿ.ಪಿ.ಎಸ್ ಕೇಸ್ ದಖಾಲಗಿದ್ದು, ಪರಾರಿಯಾಗಿರುವ ಐವರ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ಶೋಧ ನಡೆಸಲಾಗುತ್ತಿದೆ.





