ಇಂದು ವಕೀಲರ ಸಂಘ ಹೈಕೋರ್ಟ್ ಸಂಚಾರಿ ಪೀಠಕ್ಕಾಗಿ ಶಿವಮೊಗ್ಗ ಕೋರ್ಟ್ ಆವರಣದಲ್ಲಿ ನಡೆಸುತ್ತಿ ರುವ 3ನೇ ಹಂತದ ಹೋರಾಟಕೆ ಬೆಂಬಲಿಸಿ ಅಖಿಲ ಬಾಗರದಿರುವ ಲಿಂಗಾಯತ ಮಹಾಸಭಾ ನಡೆಸಿದ ಹೋರಾಟದಲ್ಲಿ ಸಂಸದರು ಪಾಲ್ಗೊಂಡು ಮಾತನಾಡಿ ಸಂಚಾರಿ ಪೀಠ ಶಿವಮೊಗ್ಗಕ್ಕೆ ತರಲು ಕೇಂದ್ರದ ಕಾನೂನು ಸಚಿವರು, ಮುಖ್ಯ ನ್ಯಾಯಾದೀಶರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ನಿಟ್ಟಿನಲ್ಲಿ ದೆಹಲಿಗೆ ನಿಯೋಗ ಹೋಗೋಣ ಎಂದು ವಕೀಲರ ಸಂಘಕ್ಕೆ ಸಂಸದರು ತಿಳಿಸಿದರು.
ಸಂಚಾರಿ ಪೀಠ ಮಂಗಳೂರನ್ನು ಕೇಂದ್ರವಾಗಿರಿಸಿ ಕರಾವಳಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಿಸುವ
ಪ್ರಯತ್ನ ನಡೆಯುತ್ತಿದೆ. ಈ ನೂತನ ಪೀಠ ಸ್ಥಾಪನೆಯಾದರೂ ಸಮಸ್ಯೆ ಯಿಲ್ಲ. ಶಿವಮೊಗ್ಗ ಜಿಲ್ಲೆ ಮಾತ್ರ ಮಂಗಳೂರು ಪೀಠದ ವ್ಯಾಪ್ತಿಗೆ ಸೇರಬಾರದು. ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ನೀಡಿದರೆ ಸಂತೋಷ, ಇಲ್ಲವೇ ಹಿಂದಿನಂತೆ ಬೆಂಗಳೂರಿನಲ್ಲೇ ನಮ್ಮ ಹೈಕೋರ್ಟ್ ವ್ಯವಹಾರ ಇರಲಿ. ಬೆಂಗಳೂರಿ ಗಾದರೆ ರೈಲು ಸೇರಿದಂತೆ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಘಾಟಿ ರಸ್ತೆಯ ಮಂಗಳೂರಿಗೆ ಹೋಗುವುದು ಕಷ್ಟ, ಇದನ್ನು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಬೆ ಸಂಚಾರಿ ಪೀಠ ಸ್ಥಾಪಿಸುವ ಸಮಿತಿಗೆ ಮನದಟ್ಟು ಮಾಡಿಕೊಡಬೇಕು ಎಂದು ಬಿವೈಆರ್ ಹೇಳಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಉಚ್ಚ ನ್ಯಾಯಾಲಯದ ಪೀಠ ಅಥವಾ ಸಂಚಾರಿ ಪೀಠವನ್ನು ಮಧ್ಯ ಕರ್ನಾಟಕ ಭಾಗವಾದ ಶಿವಮೊಗ್ಗಕ್ಕೆ ಕೊಡಬೇಕು ಎಂದು ವಕೀಲರ ಸಂಘ ನಡೆಸುತ್ತಿರುವ ಈ ಮುಷ್ಕರಕ್ಕೆ ಮಹಾಸಭಾ ಸಂಪೂರ್ಣ ಬೆಂಬಲ ನೀಡುತ್ತದೆ. ಭೌಗೋಳಿಕ ದೂರವನ್ನು ಪರಿಗಣಿಸಿದರೆ ಶಿವಮೊಗ್ಗ,
ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಮಧ್ಯ ಕರ್ನಾಟಕದ ಉಚ್ಚ ನ್ಯಾಯಾಲಯ ಪೀಠ ಅಥವಾ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಬೇಕೆಂಬ ಈ ಭಾಗದ ಬೇಡಿಕೆಗೆ ಸಂಪೂರ್ಣ ಬೆಂಬಲಿ ಸುತ್ತೇವೆ ಎಂದರು. ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ, ಹಿರಿಯ ವಕೀಲರಾದ ಬಸಪ್ಪಗೌಡ್ರು, ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ರಾಜಶೇಖರ್, ಮಲ್ಲಿಕಾರ್ಜುನಸ್ವಾಮಿ ಅವಿನಾಶ್, ಪರಮೇಶ್ ಸೊಮನಾಥ್ ಅರುಣ್, ಸಚಿನ್ ಪೂಜರ್, ಅವಿನಾಶ್ ಮತ್ತಿತರರಿದ್ದರು.