ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಪಾವಗಡದಲ್ಲಿ ಮತೆ ನಕ್ಸಲ್ ಚಟುವಟಿಕೆ?

On: September 11, 2026 3:21 PM
Follow Us:
---Advertisement---

ಪೀಪಲ್ಸ್ ವಾ‌ರ್ ಜನಶಕ್ತಿ ಪಾರ್ಟಿ ಕಾಮ್ಮೇಡ್ ದೇವನ್ನ ದಳಂ ಹೆಸರಲ್ಲಿ ₹5 ಲಕ್ಷಕ್ಕೆ ಬೇಡಿಕೆ ಪತ್ರ

ಪಾವಗಡ: ಗಡಿಭಾಗದಲ್ಲಿ ನಿಷ್ಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಕಾರ್ಯಾಚರಣೆ ಆರಂಭಿಸಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ ಗಂಗಸಾಗರದ ರೈತರೊಬ್ಬರಿಗೆ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ (ಪಿಡಬ್‌ಲ್ಯೂಜಿ) ಕಾಮ್ರಡ್ ದೇವನ್ನ ದಳಂ ಹೆಸರಿನಲ್ಲಿ 5 ಲಕ್ಷ ಬೇಡಿಕೆಯಿಟ್ಟ ಪತ್ರವನ್ನು ತೋಟದ ಗೇಟ್‌ಗೆ ಅಂಟಿಸಿ ಪರಾರಿ ಆಗಿದ್ದಾರೆ.

ತೆಲುಗಿನಲ್ಲಿ ಬರೆದ ಪತ್ರದಲ್ಲಿ ಏನಿದೆ?:

ಪತ್ರದಲ್ಲಿ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ, ದೇವನ್ನ ದಳಂ ಆಂಧ್ರ ಪ್ರದೇಶ್ ಎಂಬ ವಿಳಾಸ ಇದೆ. ಈ ಪತ್ರದಲ್ಲಿ ತಾಲೂ ಕಿನ ‘ಗಂಗಸಾಗರದ ವಾಸಿಯಾದ ಮುತ್ತ ಕುಂಟ್ಲ ಭೂಷಪ್ಪ ಅವರಿಗೆ ತ ರಿಗೆ ಕಾಮೇಡ್ ದೇವನ್ನ ಮಾಡುವ ನಮಸ್ಕಾರಗಳು. ಸ್ವಚ್ಛ ಸಮಾಜ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತಿದೆ. ಎಲ್ಲಿ ದೌರ್ಜನ್ಯ, ದಬ್ಬಾಳಿಕೆ ಹಾಗೂ ಬಡ ವರಮೇಲೆ ವಿನಾಕಾರಣ ದಾಳಿ ನಡೆಸಿದರೆ, ಅಲ್ಲಿಸಂಘಟನೆ ನಮ್ಮದೇ ಅದರೀತಿಯಲ್ಲಿ ಕಾರ್ಯನಿರ್ವಹಿಸಿ ಅನ್ಯಾಯ ಮತ್ತು ದೌರ್ಜನ್ಯಕ್ಕೆ ಒಳಗಾದ ಬಡ ಹಾಗೂ ಕಾರ್ಮಿಕರ ಪರ ಕೆಲಸ ಮಾಡಿ ರಕ್ಷಣೆ ಹಾಗೂ ನ್ಯಾಯ ಕಲ್ಪಿಸಲಾಗುತ್ತಿದೆ. ತಾಲೂಕಿನ ಗಂಗಸಾಗರದ ಸಮೀಪ ಪೊನ್ನಸಮುದ್ರ ಗ್ರಾಪಂ ವ್ಯಾಪ್ತಿಯ ಕನಿಕಲಬಂಡೆ ಗ್ರಾಮದಲ್ಲಿ ರಾಜಕೀಯ ಪಿತೂರಿಹಾಗೂದೌರ್ಜನ್ಯ ಹೆಚ್ಚಾಗುತ್ತಿದ್ದು, ಇದೇ ಗ್ರಾಮದ ಉಪ್ಪಾರ ವೆಂಕಟೇಶ್ ಮೇಲೆ ಗುಂಡಾಗಿರಿ ಹಾಗೂ ದೌರ್ಜನ್ಯ ನಡೆಯುತ್ತಿದ್ದು, ಅವರಿಗೆ ಹಿಂಸೆ ಕೊಡುತ್ತಿ ದ್ದಾರೆ. ಅವರ ನೋವಿಗೆ ಸ್ಪಂದಿಸಿ, ಕಾಮ್ರ ಡ್ ದೇವನ್ನ ದಳಂ ಪಾರ್ಟಿ ತಾಲೂಕಿಗೆ ಪ್ರವೇಶ ಮಾಡಿದ್ದು, ಕನಿಕಲಬಂಡೆ ಗ್ರಾಮದಲ್ಲಿದೌರ್ಜನ್ಯ ನಡೆಸುತ್ತಿರುವವ ಮಾಹಿತಿ ಸಂಗ್ರಹಿಸಲಾಗಿದೆ. ಶೀಘ್ರ ಅವರ ದೌರ್ಜನ್ಯ ಮಟ್ಟ ಹಾಕಲಿದ್ದೇವೆ. ಇದೇ ಗ್ರಾಮದ ಉಪ್ಪಾರ ವೆಂಕಟೇಶ್ ವಿರುದ್ಧ ಕೇಸುಗಳಿದ್ದು, ಹಣದ ಅಗತ್ಯವಿದೆ. ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು. ಹೀಗಾಗಿ ಸೆ.16ರೊಳಗೆ ವಕೀಲ ಸುಬ್ಬರಾಯಪ್ಪ ಅವ ರೊಂದಿಗೆ 5 ಲಕ್ಷ ಕಳುಹಿಸಿ ಕೊಡಬೇಕು.ನಿಮಗೆ ತೊಂದರೆ ಆದರೆ ನಿಮ್ಮ ಬೆಂಬಲ ವಾಗಿರುತ್ತೇವೆ. ಇಲ್ಲವಾದರೆ ಪರಿಣಾಮ ಎದುರಿಸಬೇಕಿದೆ. ಜತೆಗೆ ಈ ವಿಷಯ ಪೊಲೀಸರಿಗಾಗಲಿ ಅಥವಾ ಯಾರಿಗಾ ದರೂ ಹೇಳಿದರೆ ಅದರ ಮುಂದಿನ ಅನಾಹುತ ಎದುರಿಸಬೇಕಾಗಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ತೋಟದ ಬಳಿ ಹೋಗಿದ್ದ ವೇಳೆ ರೈತ ಮುತ್ತಕುಂಟ್ಲ ಭೂಷಪ್ಪ ಅವರಿಗೆ ಗೇಟ್‌ಗೆ ಅಂಟಿಸಿದ್ದ ಪತ್ರ ಸಿಕ್ಕಿದ್ದು, ನಿಜವಾಗಿಯೂ ಅದೇ ಸಂಘಟನೆಯ ಪತ್ರವೇ ಅಥವಾ ಅವರ ಹೆಸರಿನಲ್ಲಿ ಯಾರಾದರೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಪಾವಗಡಪೊಲೀಸ್‌ ಠಾಣೆಗೆ ದೂರುಸಲ್ಲಿದ್ದಾರೆ. ವಿಷಯಹೊರಬೀಳುತ್ತಿ ದ್ದಂತೆ ಕನಿಕಲಬಂಡೆ, ಗಂಗಸಾಗರ ಪೊನ್ನ ಸಮುದ್ರ, ಕೆಂಚಗಾನಹಳ್ಳಿ, ಅಚ್ಚಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.

ವರದಿ :ಕುಮಾರ ನಾಗಲಾಪುರ

Sathish munchemane

Join WhatsApp

Join Now

 

Read More

Leave a Comment