ಗ್ಯಾಂಗ್ ಕೈವಾಡವಿಲ್ಲ; ವೈಯಕ್ತಿಕ ಕಾರಣದ ಶಂಕೆ — ಇಬ್ಬರು, ಮೂವರಿಂದ ಹಲ್ಲೆ ನಡೆದಿರುವ ಸಾಧ್ಯತೆ
ಶಿವಮೊಗ್ಗ: ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸೀಗೆಹಟ್ಟಿ ಮೂಲದ ಕುಳ್ಳಿ ಕಿರಣ್ (32) ಕೊಲೆಯಾಗಿದ್ದು, ಪ್ರಕರಣದ ಹಿಂದೆ ಯಾವುದೇ ಗ್ಯಾಂಗ್ ಅಥವಾ ಸಂಘಟಿತ ಗುಂಪಿನ ಕೈವಾಡವಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇತ್ತೀಚೆಗೆ ನಡೆದಿದ್ದ ಜಗಳಕ್ಕೆ ಸಂಬಂಧಿಸಿದಂತೆ ಹೊಸಕೊಪ್ಪದ ಯುವಕನೊಬ್ಬ ಹಾಗೂ ಕಿರಣ್ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ. ಈ ಸಂಬಂಧ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆಸಿ ಮಾತುಕತೆ ನಡೆಸಿ, ಸಂಧಾನದ ಮೂಲಕ ಕಳುಹಿಸಲಾಗಿತ್ತು ಅದಾಗಲೇ ಸರಿಯಾದ ತನಿಖೆ ಮಾಡಿ ಇಬ್ಬರೂ ಮೇಲೂ ಪ್ರಕರಣ ದಾಖಾಲಿಸದ್ದರೆ ಕೋಲೆ ಅಗಿತ್ತಿರಲಿಲ್ಲ ಎಂಬ ಚಚೆ೯ ಸವ೯ಜನಿಕರಲ್ಲಿ ನಡೆಯುತ್ತಿದೆ ಈ ಪ್ರಕರಣ ಸಲುವಾಗಿ ಈಷ್ಟರಲ್ಲೆ ಬಡ್ತಿಗೆ ರೆಡಿಯಾಗಿದ್ದ ಪೋಲಿಸ್ ಅಧಿಕಾರಿಗೆ ಕುತ್ತು ಎನ್ನುತ್ತಿದೆ ಬಲ್ಲಮೂಲಗಳ ಮಾಹಿತಿ.!?
ಪ್ರಾಥಮಿಕ ಮಾಹಿತಿಯಂತೆ, ಕಿರಣ್ ರಾಮೀನಕೊಪ್ಪಕ್ಕೆ ವ್ಯಕ್ತಿಯೊಬ್ಬರ ತೋಟವನ್ನು ನೋಡಲು ತೆರಳಿದ್ದ ವೇಳೆ ಯಾರೋ ಅವರಿಗೆ ಫೋನ್ ಮಾಡಿದ್ದರು ಎನ್ನಲಾಗಿದೆ. ಬಳಿಕ ಫೋನ್‌ನಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲೇ ಹಲ್ಲೆ ನಡೆದಿರುವ ಸಾಧ್ಯತೆ ಇದೆ.
ಕೊಲೆ ಕೃತ್ಯದಲ್ಲಿ ಒಂದರಿಂದ ಮೂವರು ಮಂದಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಗ್ಯಾಂಗ್ ಅಥವಾ ಸಂಘಟಿತ ಗುಂಪಿನ ಕೈವಾಡದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ವೈಯಕ್ತಿಕ ಕಾರಣವೇ ಪ್ರಮುಖ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಪ್ರಕರಣದ ಸಂಪೂರ್ಣ ಚಿತ್ರಣ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.






