ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕುವೆಂಪು ವಿವಿ UUCMS ಅಂಕ ಬದಲಾವಣೆ ಆರೋಪ: ಅನೂಷ ‘ಒಬ್ಬರ ಕೈವಾಡವೇ!?’ ‎

On: September 14, 2026 2:32 PM
Follow Us:
---Advertisement---

ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅಕ್ರಮದ ಶಂಕೆ; UUCMS ಆಡಳಿತ, ಉಪನ್ಯಾಸಕರ ಪಾತ್ರದ ಮೇಲೂ ಸಮಗ್ರ ತನಿಖೆಗೆ ಆಗ್ರಹ

ಶಿವಮೊಗ್ಗ/ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯದ UUCMS (Unified University & College Management System) ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಹಾಗೂ ಅಂಕಗಳಲ್ಲಿ ಅಕ್ರಮವಾಗಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದಲ್ಲಿ UUCMS ಅಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಿರುವ ಕು.ಅನುಷಾ ಅವರ ವಿರುದ್ಧ ಆರೋಪ ಕೇಳಿಬಂದಿದ್ದರೂ, ಇಂತಹ ಬದಲಾವಣೆ ಒಬ್ಬರೇ ಮಾಡಿದ್ದಾರೆಯೇ ಅಥವಾ ಕಾಲೇಜಿನ ಕೆಲ ಉಪನ್ಯಾಸಕರು ಸೇರಿದಂತೆ ಇತರರ ಸಹಕಾರವೂ ಇದೆಯೇ ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಪಿರ್ಯಾದುದಾರ ಪ್ರೊ. ಆರ್. ತಿಮ್ಮರಾಯಪ್ಪ ಅವರು ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗ/ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನಾಂಕ 07-09-2026ರಂದು ಮಾನ್ಯ ಕುಲಸಚಿವರು (ಆಡಳಿತ) ನೀಡಿದ ನಿರ್ದೇಶನದ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ದೂರಿನ ವಿವರಗಳಲ್ಲಿ ತಿಳಿಸಲಾಗಿದೆ.

ದೂರಿನ ಪ್ರಕಾರ, UUCMS ಅಡ್ಮಿನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕು. ಅನುಷಾ ಅವರು ಕೆಲವು ವಿದ್ಯಾರ್ಥಿಗಳಿಗೆ ಹಣದ ಆಮಿಷವೊಡ್ಡಿ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿಷಯಗಳನ್ನು ಪಾಸ್ ಮಾಡಿಸುವುದಾಗಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಂದು ವಿಷಯ ಪಾಸ್ ಮಾಡಲು ₹10,000 ಹಾಗೂ ಐದು ವಿಷಯಗಳಿಗೆ ₹50,000 ಪಡೆಯಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ. ಈ ಆರೋಪಗಳು ತನಿಖೆಯಿಂದ ದೃಢಪಡಬೇಕಿದೆ.

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಶಿವಮೊಗ್ಗದ PES Institute of Advanced Management Studies ಕಾಲೇಜಿನ ಬಿ.ಎಸ್ಸಿ 5ನೇ ಸೆಮಿಸ್ಟರ್ ವಿದ್ಯಾರ್ಥಿಯೊಬ್ಬರ ಫಲಿತಾಂಶವನ್ನು ಪರಿಶೀಲಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ನವೆಂಬರ್/ಡಿಸೆಂಬರ್ 2025ರ ನಿಯಮಿತ ಪರೀಕ್ಷೆಯಲ್ಲಿ ವಿದ್ಯಾರ್ಥಿಯು Real Analysis-II and Complex Analysis ಹಾಗೂ Advanced Algebra and Vector Calculus ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು ಎನ್ನಲಾಗಿದೆ.

ಆದರೆ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸದಿದ್ದರೂ, ನಂತರ UUCMS ಪೋರ್ಟಲ್‌ನಲ್ಲಿ ಇದೇ ವಿಷಯಗಳಲ್ಲಿ ವಿದ್ಯಾರ್ಥಿ ಉತ್ತೀರ್ಣನಾಗಿರುವ ಫಲಿತಾಂಶ ಪ್ರಕಟವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಕ್ಕಿಂತ ಗಂಭೀರವಾಗಿ, ಪಿರ್ಯಾದುದಾರರ ಪೂರ್ವಾನುಮತಿ ಪಡೆಯದೆ ಅಥವಾ ಅವರ ಗಮನಕ್ಕೆ ತರದೆ, ಅವರ DSC (Digital Signature Certificate) ಕೀಯ One Day Password ಬಳಸಿಕೊಂಡು ಫಲಿತಾಂಶದ ಅಂಕಗಳನ್ನು ಬದಲಾಯಿಸಲಾಗಿದೆ ಎಂಬ ಶಂಕೆಯನ್ನೂ ದೂರಿನಲ್ಲಿ ವ್ಯಕ್ತಪಡಿಸಲಾಗಿದೆ.

‘ಅನುಷಾ ಮಾತ್ರವೇ ಹೊಣೆಗಾರರೇ?’ ಎಂಬ ಪ್ರಶ್ನೆ.!?

ಈ ಪ್ರಕರಣದಲ್ಲಿ ತನಿಖೆ ಕೇವಲ UUCMS ಅಡ್ಮಿನ್ ಹಂತಕ್ಕೆ ಸೀಮಿತವಾಗಬಾರದು ಎಂಬ ಒತ್ತಾಯ ಕೇಳಿಬರುತ್ತಿದೆ. ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಕಾಲೇಜಿನ ಉಪನ್ಯಾಸಕರು, ಮಧ್ಯವರ್ತಿಗಳು, ಹೊರಗುತ್ತಿಗೆ ಸಿಬ್ಬಂದಿ ಅಥವಾ ಇತರ ಯಾವುದೇ ವ್ಯಕ್ತಿಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪರಿಶೀಲಿಸಬೇಕು.

ವಿದ್ಯಾರ್ಥಿಯ ಫಲಿತಾಂಶದಲ್ಲಿ ಬದಲಾವಣೆ ಮಾಡಲು ಯಾರಿಂದ ಸೂಚನೆ ಬಂದಿತು? ಹಣದ ವ್ಯವಹಾರ ನಡೆದಿದೆಯೇ? ನಡೆದಿದ್ದರೆ ಯಾರ ಖಾತೆಗೆ ಅಥವಾ ಯಾರ ಮೂಲಕ ಹಣ ವರ್ಗಾವಣೆಯಾಗಿದೆ? UUCMSನಲ್ಲಿ ಬದಲಾವಣೆ ಮಾಡಿದ ಸಮಯ, IP address, login history, audit trail, DSC ಬಳಕೆಯ ದಾಖಲೆಗಳು ಹಾಗೂ OTP/Password ಬಳಕೆಯ ವಿವರಗಳು ಏನು ಹೇಳುತ್ತವೆ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.

ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೆ ಒಳಗಾಗುವಂತಹ ಆರೋಪಗಳು ಎದುರಾದಾಗ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮಕ್ಕೆ ಒಳಪಡಿಸುವುದು ಅಗತ್ಯ. ಇಲ್ಲವಾದರೆ ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದು ಪದವಿ ಪಡೆಯುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಮತ್ತು ವಿಶ್ವವಿದ್ಯಾಲಯದ ಪ್ರತಿಷ್ಠೆ ಎರಡೂ ಹಾನಿಗೊಳಗಾಗುವ ಆತಂಕವಿದೆ.

ಕುವೆಂಪು ವಿಶ್ವವಿದ್ಯಾಲಯದ UUCMS ಫಲಿತಾಂಶ ಅಕ್ರಮದ ಆರೋಪ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಲು

ಶಿವಮೊಗ್ಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹೆಮಂತ್ ಅವರ ಆಡಳಿತಾತ್ಮಕ ಕ್ರಮವೂ ಪ್ರಮುಖ ಕಾರಣವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಭ್ರಷ್ಟಾಚಾರ ಹಾಗೂ ಅಕ್ರಮಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಅಧಿಕಾರಿಗಳ ಪ್ರಯತ್ನಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ.

ಆದ್ದರಿಂದ ಪ್ರಕರಣದ ನಿಷ್ಪಕ್ಷಪಾತ ಹಾಗೂ ತಾಂತ್ರಿಕ ತನಿಖೆ ನಡೆಸಿ, UUCMSನಲ್ಲಿ ನಡೆದಿರುವ ಎಲ್ಲ ಫಲಿತಾಂಶ ಬದಲಾವಣೆಗಳನ್ನೂ ಪರಿಶೀಲಿಸಬೇಕು. ಯಾವುದೇ ಅಕ್ರಮ ಸಾಬೀತಾದಲ್ಲಿ, ಅದರ ಹಿಂದೆ ಇರುವ ಸಂಪೂರ್ಣ ಜಾಲವನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ವಿದ್ಯಾರ್ಥಿಗಳು ಹಾಗೂ ಪೋಷಕರ ಆಗ್ರಹವಾಗಿದೆ.

Sathish munchemane

Join WhatsApp

Join Now

 

Read More

Leave a Comment