ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಪ್ಲಾಸ್ಟಿಕ್‌ಗೆ ಗುಡ್‌ಬೈ: ಮಕ್ಕಳ ಕೈಗೆ 117 ಲೋಹದ ಬಾಟಲಿ.!?

On: September 10, 2026 1:39 PM
Follow Us:
---Advertisement---

ಶಿವಮೊಗ್ಗ ಜೆಸಿಐ ಶಿವಮೊಗ್ಗ ಮೆಟ್ರೋ ವತಿಯಿಂದ ಮಕ್ಕಳಲ್ಲಿ ಪರಿಸರ ಕಾಳಜಿ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜದ ಕಲ್ಪನೆಯನ್ನು ಬಾಲ್ಯದಿಂದಲೇ ಬೆಳೆಸುವ ಉದ್ದೇಶದಿಂದ ಜೆಸಿಐ ಶಿವಮೊಗ್ಗ ಮೆಟ್ರೋ ವತಿಯಿಂದ ‘777 ಜೆಸಿಐ ಸಪ್ತಾಹ’ದ ಮೊದಲ ದಿನ ‘Sustainability Sipping’ ವಿನೂತನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಇಂದಿನ ದಿನಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಮಣ್ಣಿನಲ್ಲಿ ಸುಲಭವಾಗಿ ಕರಗದೆ ದೀರ್ಘಕಾಲ ಉಳಿಯುವುದರಿಂದ ಮಣ್ಣು, ನೀರು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಒಟ್ಟು 117 ಲೋಹದ ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ದೀರ್ಘಕಾಲ ಬಳಸಬಹುದಾದ ಲೋಹದ ಬಾಟಲಿಗಳನ್ನು ಬಳಸುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡಲಾಯಿತು. ಇದರ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವುದರ ಜೊತೆಗೆ ಮರುಬಳಕೆಯ ಅಭ್ಯಾಸ ಬೆಳೆಸುವ ಸಂದೇಶ ನೀಡಲಾಯಿತು.

ಜೆಸಿಐ ಶಿವಮೊಗ್ಗ ಮೆಟ್ರೋ ಅಧ್ಯಕ್ಷ ಜೆ.ಸಿ. ಏಕಾಂತ ಪಿ. ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಅಭ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಪರಿಸರ ಜಾಗೃತಿ ಮನೆಯಿಂದಲೇ ಆರಂಭವಾದಾಗ ಮಾತ್ರ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ವಲಯ 24ರ ಜೋನ್ ಡೈರೆಕ್ಟರ್ (ಮ್ಯಾನೇಜ್‌ಮೆಂಟ್) ಜೆ.ಸಿ. ಪ್ರಮೋದ್ ಶಾಸ್ತ್ರಿ ಮಾರ್ಗದರ್ಶನ ನೀಡಿದರು. JC Little Lords ಶಾಲೆಯ ಹೆಡ್ ಮೇಡಂ ಜೆ.ಸಿ. ವಸುಮತಿ ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷೆ ಜೆ.ಸಿ. ವಸುಮತಿ, ಕಾರ್ಯಕ್ರಮ ನಿರ್ದೇಶಕಿ ಜೆ.ಸಿ. ಪ್ರಿಯಾ ಕೃಷ್ಣ, ಕಾರ್ಯದರ್ಶಿ ಜೆ.ಸಿ. ನವೀನ್ ವಾರದ್, ಉಪಾಧ್ಯಕ್ಷರಾದ ಜೆ.ಸಿ. ಸಂದೀಪ್, ಜೆ.ಸಿ. ಅವಿನಾಶ್ ಸೇರಿದಂತೆ ಜೆಸಿಐ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More

Leave a Comment