Sunday, 15 November 2026 — ಸಾತ್ವಿಕ ನುಡಿ

ಸಾತ್ವಿಕ ನುಡಿ

ಕನ್ನಡ ಸುದ್ದಿ ಅಂತರ್ಜಾಲ

ಹೊಸ ಸುದ್ದಿ
ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ
ಅಪರಾಧ ಸುದ್ದಿ

ಧಾರವಾಡ ಜೈಲಲ್ಲಿ ಶಿವಮೊಗ್ಗ ಹರ್ಷಾ ಕೊಲೆ ಆರೋಪಿಗಳ ಪುಂಡಾಟ, ವಾರ್ಡನ್ ಮೇಲೆ ಭೀಕರ ಹಲ್ಲೆ, ಜೈಲರ್ ಕಠಿಣ ಶಿಕ್ಷೆ!

Sathish munchemane
ವರದಿ: Sathish munchemane ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 21 ವೀಕ್ಷಣೆಗಳು

ಧಾರವಾಡ: ಶಿವಮೊಗ್ಗದ ಪ್ರಸಿದ್ಧ ಬಜರಂಗದಳ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಧಾರವಾಡ ಕೇಂದ್ರ ಕಾರಾಗೃಹದಲ್ಲಿ (Dharwad Central Jail) ಜೈಲು ವಾರ್ಡನ್ ಮೇಲೆ ಭೀಕರ ಹಲ್ಲೆ ನಡೆಸುವ ಮೂಲಕ ಮತ್ತೆ ತಮ್ಮ ಪುಂಡಾಟಿಕೆಯನ್ನು ಪ್ರದರ್ಶಿಸಿದ್ದಾರೆ.

ಈ ಘಟನೆ ಕಾರಾಗೃಹದ ಆವರಣದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಹಲ್ಲೆ ನಡೆಸಿದ ಕೈದಿಗಳಿಗೆ ಜೈಲಾಧಿಕಾರಿಗಳು ತಕ್ಷಣವೇ ಕಠಿಣ ಪನಿಷಮೆಂಟ್ ನೀಡಿದ್ದಾರೆ.

ಸೆಲ್‌ನಿಂದ ಹೊರಗೆ ಬಿಡುವ ವಿಚಾರಕ್ಕೆ ಗಲಾಟೆ

ಕಳೆದ 2022 ರಲ್ಲಿ ಶಿವಮೊಗ್ಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಿಂದೂ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣದ ಎ-1 (A1) ಮತ್ತು ಎ-2 (A2) ಆರೋಪಿಗಳನ್ನು ಅಂದಿನಿಂದಲೇ ಸುರಕ್ಷತೆಯ ದೃಷ್ಟಿಯಿಂದ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಶನಿವಾರದಂದು ಜೈಲಿನ ಸೆಲ್‌ನಿಂದ (ಬ್ಯಾರಕ್) ಹೊರಗೆ ಬಿಡುವ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳು ಜೈಲು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಮಾತು ಮೀರಿದಾಗ ಉದ್ಧಟತನ ತೋರಿದ ಇಬ್ಬರು ಆರೋಪಿಗಳು, ಅಲ್ಲಿಯೇ ಕರ್ತವ್ಯದಲ್ಲಿದ್ದ ಜೈಲು ವಾರ್ಡನ್ ಕಿರಣ್ ಘೋರ್ಪಡೆ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡ ವಾರ್ಡನ್ ಕಿರಣ್ ಅವರನ್ನು ತಕ್ಷಣವೇ ಜೈಲಿನ ವೈದ್ಯಕೀಯ ವಿಭಾಗದಿಂದ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಪ್ರಸಿದ್ಧ ಎಸ್‌ಡಿಎಂ (SDM) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಬ್ ಅರ್ಬನ್ ಠಾಣೆಯಲ್ಲಿ ಕೇಸ್ ದಾಖಲು

ಜೈಲಿನೊಳಗೆ ಸರ್ಕಾರಿ ನೌಕರನ ಮೇಲೆ ನಡೆದಿರುವ ಈ ದಾಳಿಯನ್ನು ಜೈಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಕರ್ತವ್ಯನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ (Obstruction of Duty) ಆರೋಪದಡಿಯಲ್ಲಿ ಹರ್ಷಾ ಕೊಲೆ ಆರೋಪಿಗಳ ವಿರುದ್ಧ ಧಾರವಾಡದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಹೊಸ ಪ್ರಕರಣ ದಾಖಲಿಸಲಾಗಿದೆ.

ಕುಟುಂಬಸ್ಥರ ಭೇಟಿಗೆ ಒಂದು ತಿಂಗಳು ನಿಷೇಧ

ಜೈಲಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ವಾರ್ಡನ್ ಮೇಲೆ ಹಲ್ಲೆ ನಡೆಸಿದ ಕೈದಿಗಳಿಗೆ ಜೈಲರ್ ತಕ್ಷಣವೇ ಜಾರಿಗೆ ಬರುವಂತೆ ಕಠಿಣ ಶಿಕ್ಷೆ ಪ್ರಕಟಿಸಿದ್ದಾರೆ. ಮುಂದಿನ ಒಂದು ತಿಂಗಳ ಅವಧಿಗೆ ಯಾವುದೇ ಕುಟುಂಬದ ಸದಸ್ಯರು ಅಥವಾ ಬಂಧುಗಳು ಈ ಕೈದಿಗಳನ್ನು ಭೇಟಿ ಮಾಡದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.

ಶಿವಮೊಗ್ಗದಿಂದ ಬಂದಿದ್ದ ತಾಯಿ, ಪತ್ನಿ ಕಣ್ಣೀರು ಹಾಕುತ್ತಾ ವಾಪಸ್

ಜೈಲಾಧಿಕಾರಿಗಳು ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ, ಶಿವಮೊಗ್ಗದಿಂದ ಇಬ್ಬರು ಆರೋಪಿಗಳನ್ನು ನೋಡಲು ಅವರ ತಾಯಿ ಮತ್ತು ಪತ್ನಿಯರು ಧಾರವಾಡ ಜೈಲಿನ ಬಳಿಗೆ ಆಗಮಿಸಿದ್ದರು. ಆದರೆ ಕೈದಿಗಳ ಪುಂಡಾಟಿಕೆಯಿಂದ ಆಕ್ರೋಶಗೊಂಡಿದ್ದ ಜೈಲರ್, ನಿಯಮದ ಪ್ರಕಾರ ಮುಲಾಜಿಲ್ಲದೆ ಭೇಟಿಗೆ ಅವಕಾಶ ನಿರಾಕರಿಸಿದರು. ದೂರದ ಊರಿನಿಂದ ಬಂದಿದ್ದರೂ ಸಹ ಆರೋಪಿಗಳ ಕುಟುಂಬಸ್ಥರಿಗೆ ಒಳಗೆ ಹೋಗಲು ಅನುಮತಿ ಸಿಗದ ಕಾರಣ, ಎ1 ಮತ್ತು ಎ2 ಆರೋಪಿಗಳ ಪತ್ನಿ ಹಾಗೂ ತಾಯಿ ಜೈಲಿನ ಗೇಟ್‌ನಿಂದಲೇ ಕಣ್ಣೀರು ಹಾಕುತ್ತಾ ನಿರಾಸೆಯಿಂದ ಶಿವಮೊಗ್ಗಕ್ಕೆ ವಾಪಸ್ ಹೋಗಿದ್ದಾರೆ. ಈ ಘಟನೆಯು ಜೈಲಿನೊಳಗಿನ ಭದ್ರತೆ ಮತ್ತು ಕೈದಿಗಳ ವರ್ತನೆಯ ಕುರಿತು ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯ ಸಂಪಾದಕರು (Chief Editor) ✍️ 736 ಲೇಖನಗಳು

Sathish munchemane

Sathish munchemane ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment