ಅಂಬು ಅಲಿಯಾಸ್ ಅನಿಲ್ 5 ಸಹಚರರು ಲಾಕ್.!?
ನರಸಿಂಹ ಅಂಬುಗೆ ಮೊಬೈಲ್ ನಲ್ಲಿ ಹಾಕಿದ ಆವಾಜ್ ಗೆ ಒಂದುವರೆ ವಷ೯ ಕಾಯ್ದು ಕೊನೆಗೂ ಓಂದು ವಿಕೆಟ್ ಉರುಳಿಸಿದ ಅಂಬು ಅಂಡ್ ಗ್ಯಾಂಗ್ ಗಾಂಧಿಬಜಾರ್ ಹಾಗೂ ಲಷ್ಕರ್ ಮೊಹಲ್ಲಾ ನಡುವೆ ಇರುವ ಕರಿಯಮ್ಮ ದೇವಿ ರಸ್ತೆಯ ಮೂಲೆ ಮನೆಯೊಂದರಲ್ಲಿ ಅನಧಿಕೃತ ಜುಗಾರಿ ಇಸ್ಪೀಟ್ ಅಡ್ಡೆಗೆ, ನೈಂಟಿಗಳ ಎಣ್ಣೆ ಹೊಡೆದು ಇಸ್ಪೀಟ್ ನರಸಿಂಹ, ಎಲೆ ಹಾಕಲು ಬಂದಿದ್ದಾನೆ ಇನ್ನೇನು ಸೀಗೆಹಟ್ಟಿಯ ಅನಿಲ್ ಯಾನೆ ಅಂಬು ಕಾಣಿಸುತ್ತಾನೆ, ಎನ್ನುವ ತುಸು ಸುಳಿಯಿಲ್ಲದೆ, ಕೂತಿದ್ದವನಿಗೆ ಜವರಾಯನಾಗಿ ಅಂಬು ಕಾಣಿಸಿಕೊಂಡಿದ್ದಾನೆ, ಜೊತೆಯಲ್ಲಿದ್ದವರ ಕೈಯಲ್ಲಿದ್ದ ಲಾಂಗ್ಗಳ ಬೀಸೋ ಹೋಡೆತಕ್ಕೆ ಜೂಜು ಜುಗಾರಿಯಲ್ಲಿ ಕೂತಿದ್ದವರು ಪೇರಿ ಕೀಳುತ್ತಾರೆ, ಕಾಲು ಹಿಡಿದು ತಪ್ಪಾಯ್ತು, ಎಂದು ಜೀವವಿಡಿದು ಬೇಡಿಕೊಳ್ಳುತ್ತಿದ್ದರು ಎಂದು ಜುಗಾರಿಯಲ್ಲಿ ಕೂತಿದ್ದವರು ಸಾರ್ವಜನಿಕವಾಗಿ ಮಾತಾಡಿದ್ದರೆ, ಈ ಟೈಮ್ ಫಿಕ್ಸ್ ಮಾಡಿಕೊ೦ಡಿಯೇ ಬಂದವರು ಎರಡು ಕೈಗಳನ್ನು ಲ್ಯಾಪ್ಸ್ ಮಾಡಿದ್ದಾರೆ, ತಲೆಗೆ ಬಿದ್ದ ಮಚ್ಚಿನೇಟುಗಳು ಛಿದ್ರಗೊಳಿಸಿ, ನೆತ್ತರು ಚಿಮ್ಮಿಸಿದೆ, ಹೀಗೆ ಸಿಕ್ಕ, ಸಿಕ್ಕ ಕಡೆಯಲ್ಲ ಲಾಂಗ್ಗಳಿಂದ ಹಲ್ಲೆ ಮಾಡಿರುವ ಗುಂಪು, ಇಸ್ಪೀಟ್ ನರಸಿಂಹನ ಕೊನೆಗೆ ಅಧ್ಯಾಯ ಬರೆದಿದ್ದಾರೆ,
ಎಂದಿನಂತೆ ಸ್ವಲ್ಪವು ಸುಳಿವುಇಲ್ಲದೆ
ಇಸ್ಪೀಟ್ ಅಡ್ಡೆಯಲ್ಲಿ ಕೊಲೆಯಾಗಿ ಹೋಗಿದ್ದವನು ರೌಡಿ ಲೀಸ್ಟ್ನಲ್ಲಿದ್ದ ಇಸ್ಪೀಟ್ ನರಸಿಂಹ, ಶಿವಮೊಗ್ಗದ ಬಂಕ್ ಬಾಲು ಸಹಚರನಾಗಿದ್ದ, ಕ್ರೈಂಗಳ ದುಖಾನ್ ಮಾಡಿಕೊಂಡು ಎದುರು ಗ್ಯಾಂಗ್ಗಳ ವಿರುದ್ಧ ಎತ್ತಿಕಟ್ಟುವ ಚಾಳಿಯಲ್ಲಿದ್ದ ಇಸ್ಪೀಟ್ ನರಸಿಂಹ, ಸೀಗೆಹಟ್ಟಿಯ ಅಂಬು ಯಾನೆ ಅನಿಲ್ನನ್ನು ಮುಗಿಸಲು ಸ್ಕೆಚ್ ಕೂಡ ಹಾಕಿದ್ದ, ಎನ್ನಲಾಗಿದೆ ಅಲ್ಲದೆ ಹಂದಿ ಅಣ್ಣಿ ಮರ್ಡರ್ ಕೇಸಿನಲ್ಲಿರುವ ಕಾಡಾ ಕಾರ್ತಿಕನೊಂದಿಗೆ ಚರ್ಚೆಯು ನಡೆದಿತ್ತಂತೆ.?
ಈ ಭೂಗತ ಮಿಡ್ ನೈಟ್ ಮೀಟಿಂಗ್ಗಳು ನಡೆಯುತ್ತಿರುವ ಪಕ್ಕಾ ಮಾಹಿತಿಯ ಹಿನ್ನಲೆಯಲ್ಲಿ ಜೊತೆಯಲ್ಲಿದ್ದವನು, ಗುಂಪು ಬಿಟ್ಟು ಬೇರೆ ಗುಂಪು ಸೇರಿಕೊಂಡು ತನಗೆ ಸ್ಕೆಚ್ ಹಾಕಿಕೊಂಡು ಇಸ್ಪೀಟ್ ದಂಧೆಯಲ್ಲಿ ಕಾಸು ಮಾಡಿಕೊಂಡು ನನಗೇನು ಬಯವಿಲ್ಲ ಎಂಬ ಬ್ರಮೆಯಲ್ಲಿ ನರಸಿಂಹ ಓಡಾಡಿಕೊಂಡಿದ್ದನೆ, ಕಳೆದ ಒಂದು ವರುಷದಿಂದ ಶಿವಮೊಗ್ಗ ಬಿಟ್ಟು ಹೊರ ಊರಿನಲ್ಲಿದ್ದರು, ತನ್ನ ವಿರುದ್ಧ ಹಗೆಗಳಿಂದ ಮುಹೂರ್ತ ಇಡುತ್ತಿದ್ದಾನೆ ಎನ್ನುವುದೇ ನಿನ್ನೆಯ ಬೀಕರ ಹತ್ಯೆಗೆ ಕಾರಣವಾಗಿದೆ ಎನ್ನುವುದು ಹಲವು ಪಿಲ್ಡ್ ನಲ್ಲಿರುವ ಮೂಲಗಳಿಂದ ಮಾಹಿತಿ
ಅತೀವ ಹಲ್ಲೆಗೊಳಗಾಗಿನೆತ್ತರು ಬಸಿದುಕೊಂಡು ರಕ್ತದ ಮಡುವಿನಲ್ಲಿ ಬಿದ್ದ ರೀತಿಗೆ, ಇಡೀ ಭೂಗತ ಲೋಕವೇ ತಲ್ಲಣಿಸಿದೆ, ಅಸಲಿಗೆ ಕಳೆದ ತಿಂಗಳುಗಳಿಂದಲೇ ಈತನ ಮೇಲಿನ ಹಲ್ಲೆ ಮುನ್ಸೂಚನೆ ಇತ್ತು, ಆತನಿಗೆ ಕೂಡ ತಿಳಿಸಿದ್ದರು, ಆದರೂ ಆತನೇ ಹೆಣೆದುಕೊಂಡ ಸ್ಕೆಚ್ನಲ್ಲಿಯೇ ಇಂದು ಹತನಾಗಿದ್ದಾನೆ,
ನರಸಿಂಹನ ಕೊಲೆ ಪ್ರಕರಣದಲ್ಲಿ 5 ಆರೋಪಿಗಳು ಪೊಲೀಸರ ಬಲೆಗೆ. ನಗರದ ಗಾಂಧಿ ಬಜಾರ್ ವ್ಯಾಪ್ತಿಯ ಲಷ್ಕರ್ ಮೊಹಲ್ಲಾ ಸಮೀಪ ಶುಕ್ರವಾರ ಸಂಜೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೋಟೆ ಠಾಣೆಯ ಪೊಲೀಸರು ಕಾರ್ಯಾ, ಅಂಬು ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್ ಹಾಗೂ ಶಬರೀಶ್ ಎಂಬ 5 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ.





