ಶಿವಮೊಗ್ಗ ನೀರು ಸರಬರಾಜು ಇಲಾಖೆಯ ನಿರ್ಲಕ್ಷ್ಯವೇ?
ಜನರ ತೆರಿಗೆ ಹಣಕ್ಕೆ ಹೊಣೆ ಯಾರು?
ಶಿವಮೊಗ್ಗ: ಜೂನ್, ಜೂಲೈ ತಿಂಗಳು ಎಂದರೆ ಮಳೆಗಾಲ. ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗುವುದು ಪ್ರತಿವರ್ಷದ ಸಹಜ ಪ್ರಕ್ರಿಯೆ. ಈ ಸಾಮಾನ್ಯ ಸಂಗತಿ ಶಾಲಾ ಮಕ್ಕಳಿಗೂ ಗೊತ್ತಿರುವಾಗ, ಶಿವಮೊಗ್ಗ ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆ ಇಂಜಿನಿಯರ್ ಜೀವನ್ ಗೆ ಮಾತ್ರ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ತೀವ್ರವಾಗಿ ಕೇಳಿಬರುತ್ತಿದೆ.
ಮಾಹಿತಿ ಪ್ರಕಾರ, ನಗರಕ್ಕೆ ಕುಡಿಯುವ ನೀರು ಪೂರೈಸುವ ಲಕ್ಷ ಲಕ್ಷ ರೂಪಾಯಿ ಮೌಲ್ಯದ ನೀರು ಎತ್ತುವ ಮೋಟಾರುಗಳು ನದಿಯ ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿವೆ ಎಂಬ ಆರೋಪ ಕೇಳಿಬಂದಿದೆ.
ಇದು ಕೇವಲ ತಾಂತ್ರಿಕ ದೋಷವಲ್ಲ; ಅಧಿಕಾರಿ ಜೀವನ್ ನಿರ್ಲಕ್ಷ್ಯದಿಂದ ಸಾರ್ವಜನಿಕರ ತೆರಿಗೆ ಹಣಕ್ಕೆ ಉಂಟಾದ ಭಾರೀ ನಷ್ಟ ಎಂಬ ಆರೋಪಕ್ಕೆ ಕಾರಣವಾಗುತ್ತದೆ.
ಒಬ್ಬ ಸಾಮಾನ್ಯ ನಾಗರಿಕ ಏಕಮುಖ (One Way) ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಸಾವಿರಾರು ರೂಪಾಯಿ ದಂಡ ವಿಧಿಸುವ ಸರ್ಕಾರ, ಲಕ್ಷ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಗಳು ನಿರ್ಲಕ್ಷ್ಯದಿಂದ ಹಾನಿಗೊಳಗಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ? ಅಥವಾ ಈ ಪ್ರಕರಣದಲ್ಲೂ ಯಾರನ್ನೂ ಹೊಣೆಗಾರರನ್ನಾಗಿ ಮಾಡದೆ ಕಡತ ಮುಚ್ಚಲಾಗುತ್ತದೆಯೇ? ಎಂಬ ಚಚೆ೯ ಸಾರ್ವಜನಿಕವಾಗಿ ನಡೆಯುತ್ತಿದೆ.
ಮಳೆಗಾಲ ಆರಂಭಕ್ಕೂ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ? ಕೆವಲ ಎರಡು ಮೋಟರ್ ಮೆಲ್ ಎತ್ತಿ ಒಣಗಲು ಇಟ್ಟಿದ್ದಾರೆ ಅಂತೆ ಇನ್ನೆರೆಡು ಮೋಟಾರ್ ನೀರಿನಲ್ಲಿಯೆ ಉಳಿದಿವೆ ನದಿಯಿಂದ ನೀರು ಎತ್ತಿ ಕ್ಯಾಲಿಫೋರ್ನಿಯಾಕ್ಕೆ ಹರಿಸಿ ಶೂದ್ದಿ ಕರಿಸಿ ನಗರದ ಟ್ಯಾಂಕ್ ಗೆ ನೀರು ಸರಬರಾಜು ಮಾಡಲಾಗುತ್ತದೆ ಆದರೆ ನೀರಿನ ಮಟ್ಟ ಏರಿಕೆಯಾಗುವ ಬಗ್ಗೆ ಮುಂಚಿತ ಮಾಹಿತಿ ಇರಲಿಲ್ಲವೇ? ಮೋಟಾರುಗಳನ್ನು ಸುರಕ್ಷಿತಗೊಳಿಸಲು ವಿಫಲರಾದವರು ಯಾರು? ಇದರಿಂದ ನಗರಕ್ಕೆ ಕುಡಿಯುವ ನೀರಿನ ಪೂರೈಕೆಗೆ ಉಂಟಾದ ತೊಂದರೆಗೆ ಹೊಣೆ ಯಾರು?
ನಗರದ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಈ ವಿಷಯದ ಬಗ್ಗೆ ತಕ್ಷಣ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು. ಹಾನಿಯ ನಿಖರ ಪ್ರಮಾಣ, ಅದರ ಆರ್ಥಿಕ ಮೌಲ್ಯ, ಹೊಣೆಗಾರ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮ ಹಾಗೂ ಭವಿಷ್ಯದಲ್ಲಿ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಕೈಗೊಳ್ಳುವ ಶಾಶ್ವತ ಕ್ರಮಗಳ ಬಗ್ಗೆ ಬಹಿರಂಗ ಮಾಹಿತಿ ನೀಡಬೇಕೆಂದು ಶಿವಮೊಗ್ಗದ ನಾಗರಿಕರು ಒತ್ತಾಯಿಸಿದ್ದಾರೆ.
24×7 ನೀರು ಶಿವಮೊಗ್ಗಕ್ಕೆ ಹರಿಸುವಂತೆ ಕೋಟಿ ಕೋಟಿ ಪ್ರಾಜೆಕ್ಟ್ ಶೂರು ಮಾಡಿ ಸರಿಯಾಗಿ ಬರುತ್ತಿದ್ದ ಪೈಪ್ ಕಟ್ ಮಾಡಿ 24×7 ಎಂಬ ಬೂತ ನಗರಕ್ಕೆ ಯಾವಾಗ ವಕ್ಕರಿಸಿತೋ ಆಗಿನಿಂದ ನಗರದ ಜನತೆ ಹಿಡಿ ಶಾಪ ಹಾಕ ತೊಡಗಿದ್ದಾರೆ.
ಸಾರ್ವಜನಿಕರ ತೆರಿಗೆ ಹಣವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ನಿರ್ಲಕ್ಷ್ಯ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರ ವಿಶ್ವಾಸಕ್ಕೆ ಧಕ್ಕೆ ಉಂಟಾಗುವುದು ಅನಿವಾರ್ಯ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಖಾಲಿಸಿ ಉನ್ನತ ತನಿಖೆ ಮಾಡಿಸಿ ತಕ್ಷಣವೇ ಅಧಿಕಾರಿಗಳನ್ನು ಅಮಾನತು ಪಡಿಸಬೇಕು ಎನ್ನುವುದು ಶಿವಮೊಗ್ಗ ಜನತೆಯ ಆಗ್ರಹವಾಗಿದೆ.






