Friday, 13 November 2026 — ಸಾತ್ವಿಕ ನುಡಿ

ಸಾತ್ವಿಕ ನುಡಿ

ಕನ್ನಡ ಸುದ್ದಿ ಅಂತರ್ಜಾಲ

ಹೊಸ ಸುದ್ದಿ
ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ
ಇದೀಗ ಬಂದ ಸುದ್ದಿ

ಪುರ ಸಭೆ ಸದಸ್ಯ TO ಬಂಗಾಳ ಸಿಎಂ.!

Sathish munchemane
ವರದಿ: Sathish munchemane ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 14 ವೀಕ್ಷಣೆಗಳು

ಪುರ ಸಭೆ ಸದಸ್ಯರಾಗಿದ್ದ ಸುವೇಂದು ಅಧಿಕಾರಿ ಈಂದು ಬಂಗಾಳ ಸಿಎಂ ಅಗಿ ಪ್ರಮಾಣ ವಚನ ಸ್ವೀಕಾರ.

ಕಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಭೂಪಟದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ದಶಕಗಳ ಕಾಲದ ಎಡಪಂಥೀಯ ಮತ್ತು ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ತೆರೆ ಬಿದ್ದಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸ್ವಾತಂತ್ರ್ಯಾನಂತರ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದು ಇದೇ ಮೊದಲು.

ಅದ್ದೂರಿ ಪ್ರಮಾಣ ವಚನ ಸಮಾರಂಭ

ಕೋಲ್ಕತ್ತಾದ ರಾಜಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲರು ಸುವೇಂದು ಅಧಿಕಾರಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರಮಟ್ಟದ ಪ್ರಮುಖ ನಾಯಕರು ಉಪಸ್ಥಿತರಿದ್ದು, ನೂತನ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.

ಸುವೇಂದು ಅಧಿಕಾರಿ ಅವರ ರಾಜಕೀಯ ಹಾದಿ

ಒಂದೊಮ್ಮೆ ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ, ನಂತರ ಬಿಜೆಪಿಗೆ ಸೇರ್ಪಡೆಗೊಂಡು ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದರು. ನಂದಿಗ್ರಾಮದ ಹೋರಾಟದ ಮೂಲಕ ಮನೆಮಾತಾಗಿದ್ದ ಅವರು, ಇದೀಗ ಬಂಗಾಳದ ಅತ್ಯುನ್ನತ ಪೀಠವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ‘ಸೋನಾರ್ ಬಾಂಗ್ಲಾ’ (ಬಂಗಾರ ಬಂಗಾಳ) ಎಂಬ ಘೋಷಣೆಯೊಂದಿಗೆ ಬಿಜೆಪಿ ಈ ಬಾರಿ ಚುನಾವಣಾ ಕಣಕ್ಕಿಳಿದಿತ್ತು. ಉದ್ಯೋಗ ಸೃಷ್ಟಿ, ಮಹಿಳಾ ಸುರಕ್ಷತೆ ಮತ್ತು ಕೈಗಾರಿಕಾ ಕ್ರಾಂತಿಯ ಭರವಸೆಗಳು ಬಿಜೆಪಿಗೆ ಸ್ಪಷ್ಟ ಬಹುಮತ ತಂದುಕೊಟ್ಟಿವೆ. ಈ ಗೆಲುವು ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಿದ್ದು, ಪೂರ್ವ ಭಾರತದಲ್ಲಿ ಪಕ್ಷವು ಗಟ್ಟಿಯಾದ ನೆಲೆಯನ್ನು ಕಂಡುಕೊಂಡಂತಾಗಿದೆ.

ಸುವೇಂದು ಅವರ ಮೊದಲ ಭರವಸೆ

ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಇದು ರಾಜ್ಯದ ಜನಸಾಮಾನ್ಯರ ಗೆಲುವು. ನಮ್ಮ ಸರ್ಕಾರದ ಮೊದಲ ಆದ್ಯತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿದೆ” ಎಂದು ಘೋಷಿಸಿದರು. ಈ ಬದಲಾವಣೆಯು ಪಶ್ಚಿಮ ಬಂಗಾಳದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯಲ್ಲಿ ಎಂತಹ ಬದಲಾವಣೆ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಖ್ಯ ಸಂಪಾದಕರು (Chief Editor) ✍️ 736 ಲೇಖನಗಳು

Sathish munchemane

Sathish munchemane ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment