ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಮಹಾಸಮಾವೇಶ
ಜರ್ಮನಿಯ ಎರ್ಲಾಂಗೆನ್ ನಗರದಲ್ಲಿ ಮೇ 16ರಂದು ಬಸವ ಸಮಿತಿ ಯುರೋಪ್ ವತಿಯಿಂದ ಎರಡನೇ ಬಸವ ಜಯಂತಿ ಸಮಾವೇಶ ಅದ್ಧೂರಿಯಾಗಿ ನಡೆಯಲಿದೆ.
ಈ ಸಮಾವೇಶಕ್ಕೆ ಭಾರತದ ಜರ್ಮನಿ ರಾಯಭಾರಿಯಾಗಿರುವ Ajit Vinayak Gupte ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವ ಕೇಂದ್ರ, ಶಿವಮೊಗ್ಗದ ಪೂಜ್ಯ Dr. Basava Marulasiddha Swamiji ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನ ನೀಡಲಿದ್ದಾರೆ. ಬಸವ ತತ್ವ, ಸಮಾನತೆ, ಮಾನವೀಯ ಮೌಲ್ಯಗಳು ಹಾಗೂ ವಿಶ್ವಶಾಂತಿಯ ಸಂದೇಶವನ್ನು ಸ್ವಾಮೀಜಿಗಳು ತಮ್ಮ ಉಪನ್ಯಾಸದಲ್ಲಿ ಪ್ರಸ್ತುತಪಡಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಮಾವೇಶದಲ್ಲಿ ಇಂಡಾಲಜಿಸ್ಟ್ ಹಾಗೂ ದಕ್ಷಿಣ ಏಷ್ಯಾ ಅಧ್ಯಯನಗಳ ಪ್ರಾಧ್ಯಾಪಕರಾದ Robert J. Zydenbos, ವಿಶ್ವ ಹಿಂದೂ ಪರಿಷತ್ ಯುರೋಪ್ ಪ್ರತಿನಿಧಿ Rahul Narayan ಹಾಗೂ ಐಸಿರಿ ಫೌಂಡೇಶನ್ ಅಧ್ಯಕ್ಷ Rohan Bhargavapuri ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎರ್ಲಾಂಗೆನ್‌ನ Gemeindezentrum Frauenaurach ಸಭಾಂಗಣದಲ್ಲಿ ಬೆಳಗ್ಗೆ 9:30ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಯುರೋಪಿನ ವಿವಿಧ ದೇಶಗಳಿಂದ ಬಸವಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.






