ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಉತ್ತರ ಕರ್ನಾಟಕದ ಹೆಮ್ಮೆಯ ಎಂ.ಆರ್.ಎನ್ (MRN) ಸೌಹಾರ್ದ ಕ್ರೆಡಿಟ್ ಸಹಕಾರಿಯ 71ನೇ ಶಾಖೆ ಆರಂಭಗೊಳ್ಳುತ್ತಿರುವುದು ವಿಶೇಷ ಗಮನ ಸೆಳೆಯುತ್ತಿದೆ. ಮುರಗೇಶ್ ಆರ್. ನಿರಾಣಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ತನ್ನದೇ ಗುರುತನ್ನು ಮೂಡಿಸಿಕೊಂಡಿರುವ ಈ ಸಂಸ್ಥೆ, ಇದೀಗ ಶಿವಮೊಗ್ಗದಲ್ಲಿಯೂ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ.
ಇದೇ ಶುಕ್ರವಾರ, 08-05-2026ರಂದು ಬೆಳಿಗ್ಗೆ 10.30ಕ್ಕೆ ಜೈಲ್ ರಸ್ತೆಯ ಸುಬಯ್ಯ ಆಸ್ಪತ್ರೆ ಸಮೀಪದ ಹೊಸಮನೆ ಐದನೇ ತಿರುವು, ವಾರ್ಡ್ 20ರಲ್ಲಿ ಶಾಖೆಯು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಈ ಶಾಖೆಯ ಆರಂಭದಿಂದ ಶಿವಮೊಗ್ಗ ನಗರದ ಜನತೆಗೆ ಸುಲಭ ಸಾಲ ಸೌಲಭ್ಯಗಳು ಹಾಗೂ ಆರ್ಥಿಕ ಸೇವೆಗಳು ಲಭ್ಯವಾಗಲಿವೆ ಎಂದು ನಿರೀಕ್ಷಿಸಲಾಗಿದೆ.
ಸಮಾಜ ಸೇವಕ ಮಂಗಳೇಶ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಈ ಸಹಕಾರಿ ಸಂಸ್ಥೆಯ ಸೇವೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮುರಗೇಶ್
ಆರ್. ನಿರಾಣಿ ಅವರ ಸೇವಾ ಮನೋಭಾವ ಮತ್ತು ರಾಜ್ಯಾದ್ಯಂತ ಸಹಕಾರಿ ಕ್ಷೇತ್ರದಲ್ಲಿ ತಂದುಕೊಟ್ಟ ಬೆಳವಣಿಗೆಗೆ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಶಿವಮೊಗ್ಗದಲ್ಲಿ ಈ ಹೊಸ ಶಾಖೆಯ ಆರಂಭ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.







