ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

‎ ‎ಕೋಟೆನಾಡಿನಲ್ಲಿ ಬಿ.ಎಸ್.ವೈ ಅಬ್ಬರ: ಸಹಸ್ರಾರು ಅಭಿಮಾನಿಗಳ ಮಧ್ಯೆ ಅದ್ಧೂರಿ ಪುರಪ್ರವೇಶ! ‎

On: May 8, 2026 9:15 PM
Follow Us:
---Advertisement---

ಚಿತ್ರದುರ್ಗ, ಮೇ 8: ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ “ಬಿ.ಎಸ್.ವೈ ಅಭಿಮಾನೋತ್ಸವ” ಬೃಹತ್ ಕಾರ್ಯಕ್ರಮದ ಅಂಗವಾಗಿ, ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಜನಪ್ರಿಯ ರೈತ ನಾಯಕ B. S. Yediyurappa ಅವರ ಅದ್ಧೂರಿ ಪುರಪ್ರವೇಶ ಕಾರ್ಯಕ್ರಮ ನಗರದಲ್ಲಿ ಭವ್ಯವಾಗಿ ಜರುಗಿತು.

ಕನಕವೃತ್ತದಿಂದ ಮದಕರಿ ವೃತ್ತದವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಸಹಸ್ರಾರು ಅಭಿಮಾನಿಗಳು ಪಾಲ್ಗೊಂಡು, ತಮ್ಮ ನೆಚ್ಚಿನ ನಾಯಕನಿಗೆ ಹೂಮಳೆಗರೆದು ಜಯಘೋಷಗಳೊಂದಿಗೆ ಆತ್ಮೀಯ ಸ್ವಾಗತ ಕೋರಿದರು.

ಐದು ದಶಕಗಳ ಕಾಲ ರಾಜ್ಯದ ಅಭಿವೃದ್ಧಿ ಹಾಗೂ ರೈತರ ಹಿತಕ್ಕಾಗಿ ಶ್ರಮಿಸಿದ ನಾಯಕನಿಗೆ ಚಿತ್ರದುರ್ಗದ ಜನತೆ ತೋರಿದ ಪ್ರೀತಿ ಮತ್ತು ಅಭಿಮಾನ ವಿಶೇಷವಾಗಿ ಗಮನಸೆಳೆಯಿತು.

ಈ ಐತಿಹಾಸಿಕ ಕ್ಷಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra, ವಿಧಾನಸಭೆಯ ಪ್ರತಿಪಕ್ಷ ನಾಯಕ

R. Ashoka, ವಿಧಾನ ಪರಿಷತ್ ವಿಪಕ್ಷ ನಾಯಕ Chalavadi Narayanaswamy, ಹಿರಿಯ ನಾಯಕ C. T. Ravi ಸೇರಿದಂತೆ ಹಲವಾರು ಮಾಜಿ ಸಚಿವರು, ಸಂಸದರು, ಶಾಸಕರು ಹಾಗೂ ಪಕ್ಷದ ಪ್ರಮುಖರು ಸಾಕ್ಷಿಯಾದರು.

ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಈ ಪುರಪ್ರವೇಶ ಮೆರವಣಿಗೆ ನಾಳೆಯ ಬೃಹತ್ “ಬಿ.ಎಸ್.ವೈ ಅಭಿಮಾನೋತ್ಸವ”ಕ್ಕೆ ಭರ್ಜರಿ ಮುನ್ನುಡಿ ಬರೆದಿದ್ದು, ಕೋಟೆನಾಡು ಸಂಪೂರ್ಣ ಹಬ್ಬದ ವಾತಾವರಣದಲ್ಲಿ ಮಿಂಚುತ್ತಿದೆ.

Sathish munchemane

Join WhatsApp

Join Now

 

Read More