ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ದೇವಸ್ಥಾನ ನಿರ್ಮಾಣಕ್ಕೆ ‎ರಾಜಕಾರಣಿಗಳ ಹಣ ಬೇಡ.!?

On: April 25, 2026 9:21 AM
Follow Us:
---Advertisement---

ದೇವಸ್ಥಾನಗಳ ನಿರ್ಮಾಣಕ್ಕೆ ಭಕ್ತರಿಂದ ಸಂಗ್ರಹವಾಗುವ ದೇಣಿಗೆ ಮಾತ್ರ ಬಳಸಬೇಕು ಎಂದು  ಸಿರಿಗೆರೆ ತರಳಬಾಳುಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಯಡೇಹಳ್ಳಿಯಲ್ಲಿ ಶುಕ್ರವಾರ ಶ್ರೀ ಕರಿಬಸವೇಶ್ವರ ದೇವಸ್ಥಾನ, ಶ್ರೀ ಮೈಲೇಮಲ್ಲಮ್ಮ, ಗಣಪತಿ, ಶಿವಲಿಂಗ ಶಿಲಾವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ  ಹಾಗೂ ಕಳಸಾರೋಹಣ ಪ್ರಯುಕ್ತ ನಡೆಯುತ್ತಿರುವ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ.

ದೇವಸ್ಥಾನ ನಿರ್ಮಾಣಕ್ಕೆ ರಾಜಕಾರಣಿಗಳ ಹಣ ಬೇಡ,

ದೇವಸ್ಥಾನಗಳ ನಿರ್ಮಾಣಕ್ಕೆ ರಾಜಕಾರಣಿಗಳಿಂದ ಹಣ ಸಂಗ್ರಹಿಸಬಾರದು.  

ವಂತಿಗೆ ಸಂಗ್ರಹಕ್ಕೆ ರಾಜಕಾರಣಿಗಳ ಮೊರೆ ಹೋಗುವುದು ತಪ್ಪಬೇಕು.  ನೀರಾವರಿ ಸೇರಿದಂತೆ ಕೆರೆಕಟ್ಟೆ ನಿರ್ಮಾಣಕ್ಕೆ ರಾಜಕಾರಣಿಗಳ ಅನುದಾನ ಸದ್ಬಳಕೆಯಾಗಬೇಕು ಎಂದು ಪ್ರಕಟಿಸಿದರು.  

ವಸ್ತುಗಳನ್ನು ಕೊಳ್ಳುವಾಗ ಚೌಕಾಸಿ ಮಾಡುವವರು ಜಾತ್ರಾ ಮಹೋತ್ಸವಗಳ ಹರಾಜಿನಲ್ಲಿ ದೇವರ ವಸ್ತುಗಳನ್ನು ಕೊಳ್ಳುವಾಗ ಪೈಪೋಟಿ  ಮಾಡು ತ್ತಾರೆ.  ಬ್ಯಾಂಕ್‌ಗಳಸಾಲಪಾವತಿ ಮಾಡುವಲ್ಲಿ ವಿಳಂಬಮಾಡಿದರೂ ಹರಾಜಿನ ಹಣವನ್ನು ಸಕಾಲದಲ್ಲಿ ಪಾವತಿ ಮಾಡಲಾಗುತ್ತದೆ.

ಕೌಟುಂಬಿಕ ಜೀವನದಲ್ಲಿ ಧರ್ಮವನ್ನು ಕಾಣುತ್ತಿದ್ದಾರೆ.

ಹೆಣ್ಣು ಮಕ್ಕಳ ಬೆಳವಣಿಗೆಯಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಆಸ್ತಿಗಾಗಿಕೇಸ್ದಾಖಲಿಸುತ್ತಿದ್ದಾರೆ.  

ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲಿದೆ ತಪ್ಪು.  ಆಸ್ತಿ ವಿಚಾರದ ಪ್ರಕರಣಗಳಿಂದ ಸದಭಿರುಚಿ ಕೌಟುಂಬಿಕ ಜೀವನಕ್ಕೆ ಹಿನ್ನಡೆಯಾಗುತ್ತಿದೆ.  

ಧರ್ಮ ತತ್ವಗಳಿಗೆ ಅನುಗಣವಾಗಿ ನಡೆದುಕೊಳ್ಳಬೇಕು.  ಪಾಲಕರ ವಿರುದ್ಧ ಪ್ರಕರಣ ದಾಖಲಿಸುವುದು ರಾಕ್ಷಸಿ ಪ್ರವೃತ್ತಿ.  ಉನ್ನತ ವ್ಯಾಸಂಗ ಮಾಡಿ ವಿದೇಶ ಸೇರುತ್ತಿರುವ ಮಕ್ಕಳು ಪಾಲಕರನ್ನು ಮರೆಯುತ್ತಿದ್ದಾರೆ ಒಳ್ಳೆಯ ಬೆಳವಣಿಗೆಯಲ್ಲಿ ಎಂದು ಹೇಳಿದರು.

ಕೆರೆಗಳ ನಿರ್ಮಾಣ ಅವಶ್ಯ

ಗ್ರಾಮಗಳಲ್ಲಿ ಸಾಮರಸ್ಯದ ಬದುಕಿಗೆ ಹಿನ್ನಡೆ ಆಗಬಾರದು.  ಗ್ರಾಮದಅಭಿವೃದ್ಧಿಗೆಸಹಕರಿಸುವವರನ್ನು ಸ್ಥಳೀಯರು ಮರೆಯುವುದಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ಈ ಬಾರಿ ಮಳೆಕಡಿಮೆಯಾಗುವುದರಿಂದ ಭದ್ರ ನಾಲೆ ನೀರು ನಿಲ್ಲಿಸಬೇಕೆನ್ನುವುದು ಕೆಲ ರೈತರು ಒತ್ತಡ ಹಾಕುತ್ತಿದ್ದಾರೆ.  3500 ಕ್ಯೂಸೆಕ್ಸ್ ನೀರನ್ನು ಹರಿಸಿದರೂ ನಾಲೆಯ ನೀರು ದಾವಣಗೆರೆ ಮಲೆಬೆನ್ನೂರಿನ ಕೊನೇ ಭಾಗಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಪ್ರತಿ ಹಳ್ಳಿಗಳಲ್ಲಿ ಕೆರೆಗಳ ನಿರ್ಮಾಣ ಮಾಡಿ ಅಂತರ್ಜಲ ವೃದ್ಧಿ ಮಾಡಬೇಕಾಗಿದೆ ಎಂದರು.

ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ಶಾಸಕ ಅಶೋಕ್ ನಾಯ್ಕ, ಗ್ರಾಮ ಮುಖಂಡ ಎಚ್.ಬಸಪ್ಪ, ನಂದಿಬಸಪ್ಪ, ರವಿಕುಮಾರ್,  ಶ್ರೀ ಕರಿಬಸವೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಯಡೇಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು

Sathish munchemane

Join WhatsApp

Join Now

 

Read More