ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಮಲೆನಾಡು ಮುದ್ರಕರ ಸಂಘಕ್ಕೆ ಹೊಸ ನಾಯಕತ್ವ: ಗಣೇಶ್ ಬೀಳಗಿ ಅವಿರೋಧ ಆಯ್ಕೆ – ಸಮಸ್ಯೆಗಳ ಪರಿಹಾರಕ್ಕೆ ಭರವಸೆ.!

On: April 26, 2026 4:41 PM
Follow Us:
---Advertisement---

ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಬೀಳಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಸದಸ್ಯರ ಏಕಮತದಿಂದ ನಡೆದ ಈ ಆಯ್ಕೆ, ಸಂಘಟನೆಯ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಹೆಜ್ಜೆಯಾಗಿದೆ.

ಪ್ರಸ್ತುತ ಮುದ್ರಣ ಕ್ಷೇತ್ರವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ಪ್ರಿಂಟಿಂಗ್ ದರವನ್ನು ಹೆಚ್ಚಿಸಲು ಸಾಧ್ಯವಾಗದೆ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕಡಿಮೆ ಬೆಲೆಯಲ್ಲಿ ಸೇವೆ ನೀಡುವ ಸ್ಪರ್ಧೆಯಿಂದ ಲಾಭಾಂಶ ಕುಂಠಿತವಾಗಿದ್ದು, ಕಾರ್ಮಿಕರ ಸಮಸ್ಯೆಗಳೂ ಹೆಚ್ಚಾಗಿವೆ. ಶಿವಮೊಗ್ಗದಲ್ಲಿ ಹಲವು ಯೂನಿಯನ್‌ಗಳು ಕಾರ್ಯನಿರ್ವಹಿಸುತ್ತಿದ್ದು  ಒಗ್ಗೂಡಿ ಕಾಯ೯ ನಿರ್ವಹಿಸಿ ಶಿವಮೊಗ್ಗಕ್ಕೆ ಮಾದರಿ ಯಾಗಿದ್ದಾರೆ.

ಅದರೆ ಎಲ್ಲ ಮುದ್ರಣ ಮಾಲೀಕರ ಅಭಿಪ್ರಾಯ ಒಂದೇ ರೀತಿಯಲ್ಲಿ ಇರದೆ ಗೊಂದಲ ಉಂಟಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಗಣೇಶ್ ಬೀಳಗಿ ಅವರ ಅನುಭವ ಸಂಘಕ್ಕೆ ಬಲವಾಗಲಿದೆ ಎನ್ನಲಾಗುತ್ತಿದೆ.

ಅವರು ಜಿಲ್ಲಾ ಕುರುಬ ಸಮಾಜದ ಕಾರ್ಯದರ್ಶಿಯಾಗಿಯೂ, “ಕ್ರಾಂತಿ ಕಿಡಿ” ಕನ್ನಡ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದು, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ.

ಕೋವಿಡ್ ಮಹಾಮಾರಿಯ ಸಮಯದಲ್ಲಿ ಬಡವರಿಗೆ ಸ್ವಂತ ವೆಚ್ಚದಲ್ಲಿ ನೆರವು ನೀಡಿರುವುದು ಅವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ.

ಅವರ ನಾಯಕತ್ವದಲ್ಲಿ ಮುದ್ರಣ ಮಾಲೀಕರ ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ದೊರಕಲಿ ಶಿವಮೊಗ್ಗದಲ್ಲಿ ಮುದ್ರಣ ಮಾಲೀಕರ ಸಮುದಾಯ ಭವನ

ನಿಮಿ೯ಸಿ ಬಡ ಕಾರ್ಮಿಕಮರಿಗೆ ನೇರವಾಗಲಿ  ಹಾಗೂ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾಡ೯ ಕೋಡಿಸುವ ಕಾಯ೯ ಶಿಗ್ರಾವಾಗಿ ಅಗಲಿ, ಶಿವಮೊಗ್ಗದ್ದಲಿ ಸಂಘ ಉದ್ಘಾಟನೆಯಾಗಿ ಸುಮಾರು 25 ವರ್ಷ ದಿಂದ ಅಗದ ಕೆಲಸವನ್ನು  ಗಣೇಶ್ ಬೀಳಗಿ ಮಾಡಲಿ ಎಂಬುದು ಸದಸ್ಯರ ಆಶಯವಾಗಿದೆ.

Sathish munchemane

Join WhatsApp

Join Now

 

Read More