ಶಿವಮೊಗ್ಗದ ಬಸವ ಕೇಂದ್ರ ವತಿಯಿಂದ ಬಸವ ಜಯಂತಿ 2026 ಅನ್ನು ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಮರುಳಸಿದ್ಧ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಬಸವ ಜಯಂತಿಯ ಅಂಗವಾಗಿ ಬಸವ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಪೂಜ್ಯ ಶ್ರೀಗಳು ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಶ್ರೀ ಮರುಳಸಿದ್ಧ ಸ್ವಾಮಿಗಳು, “ಎಲ್ಲಾ ದಾನಗಳಲ್ಲಿ ಪವಿತ್ರವಾದುದು ರಕ್ತದಾನ. ರಕ್ತದಾನ ಮಾಡುವುದರಿಂದ ದೇಹ, ಮನಸ್ಸು ಹಾಗೂ ಆರೋಗ್ಯ ಸದೃಢವಾಗುತ್ತದೆ. ಇದು ಅನೇಕ ಜನರ ಪ್ರಾಣ ಉಳಿಸುವ ಮಹತ್ವದ ಸೇವೆ,” ಎಂದು ತಿಳಿಸಿದರು.
ಅವರು 26ನೇ ಬಾರಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದರು.
ನಿರಂತರವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮಾನವೀಯತೆಯನ್ನು ಬೆಳೆಸಿ, ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹಾಗೂ ಮಹಾನಗರ ಪಾಲಿಕೆ ಕಾರ್ಮಿಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ರಕ್ತದಾನ ಶಿಬಿರವನ್ನು ಬಸವ ಕೇಂದ್ರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಕದಳಿ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಸವೇಶ್ವರ ವೀರಶೈವ ಲಿಂಗಾಯತ ಸೇವಾ ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ಬಳ್ಳಕೆರೆ ಸಂತೋಷ್, ಎಸ್.ಪಿ. ದಿನೇಶ್, ಎಚ್.ಸಿ. ಯೋಗೇಶ್, ರಾಜ್ಯಾಧ್ಯಕ್ಷರಾದ ಷಡಕ್ಷರಿ, ಡಾ. ಧನಂಜಯ ಸರ್ಜಿ, ಜಿ. ವಿಜಯಕುಮಾರ್, ಮಹಾಸಭಾ ಅಧ್ಯಕ್ಷ ರುದ್ರಮುನಿ ಸಜ್ಜನ್, ರಾಜಶೇಖರ್, ಮಲ್ಲಿಕಾರ್ಜುನ್ ಕಾನೂರ್, ಕೆ.ಆರ್. ಸೋಮನಾಥ್, ಬಸವ ಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ, ಚಂದ್ರಶೇಖರ್ ಹಾಲಸ್ವಾಮಿ, ಧರಣೇಂದ್ರ ದಿನಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಬಸವ ಕೇಂದ್ರದ ಭಕ್ತರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.






