ಸಿಮ್ಸ್ ಸಂಸ್ಥೆಯ ಮಕ್ಕಳ ವಿಭಾಗಕ್ಕೆ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್ ಐ ಸಿ ಯು ಘಟಕ ಸ್ಥಾಪಿಸುವ ಕುರಿತು ಸಂಸದ ರಾಘವೇಂದ್ರ ಸುದ್ದಿಗೋಷ್ಠಿ.
ಬಿ.ವೈ ರಾಘವೇಂದ್ರ ಅವರ ಕೋರಿಕೆಯಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇವರ ನಿಧಿಯಲ್ಲಿ ರೂ.5. ಕೋಟಿಗಳು ಮಂಜೂರಾಗಿದೆ ನವಜಾತ ಶಿಶುಗಳ ಆರೈಕೆಗೆ ಈ 30 ಬೆಡ್ ಹಾಸಿಗೆ ನಿರ್ಮಿಸಲಾಗಿದೆ.
ಈ ಹಿಂದೆ ಬಿಎಸ್ ವೈ ಸಿಎಂ ಆಗಿದ್ದಾಗ ಎನ್ ಐಸಿಯು ಘಟಕ ಆಕಸ್ಮಿಕ ಬೆಂಕಿ ಹತ್ತಿಕೊಂಡು ಭಸ್ಮವಾಗಿತ್ತು. ಅಲ್ಲಿ ಮಕ್ಕಳನ್ನ ಈ ಅವಘಢವನ್ನ ತಪ್ಪಿಸಲಾಗಿತ್ತು. ಹೊರ ಜಿಲ್ಲೆಯಿಂದ ರೋಗಿಗಳು ಆಗಮಿಸುತ್ತಿದ್ದು ಈ ಎನ್ಐಸಿಯು ಬೆಡ್ ಹೆಚ್ಚಿಸಲು ನನಗೆ ಹೆಚ್ಚಿನ ಬೇಡಿಕೆಯನ್ನ ಆಸ್ಪತ್ರೆಯ ಅಧಿಕಾರಿಗಳು ಮನವರಿಕೆ ಮಾಡಿದ್ದರು ಅದ್ದರಿಂದ ಕೇಂದ್ರ ಹಣಕಾಸಿನ ಮಂತ್ರಿಗಳಿಗೆ ಅನುದಾನದ 5 ಕೋಟಿ ಹಣ ಕೊಡಿ ಎಂದು ಕೇಳಿಕೋಂಡಿದ್ದು ಅನುದಾನ ಬಿಡುಗಡೆ ಮಾಡಿದ್ದಾರೆ.
ಸಿಎಸ್ಆರ್ ಫಂಡ್ನಲ್ಲಿ ಹಲವು ಯೋಜನೆ
ಆರ್ ಡಿಪಿಆರ್ ಗೆ ಟೆಂಡರ್ ಕರೆಯಲಾಗಿದೆ. ಇನ್ಫ್ರಾಸ್ಟ್ರಕ್ಚರ್ ಗೆ 60 ಲಕ್ಷ ಕೊಟ್ಟಿದ್ದಾರೆ. ಉಳಿದ ಇನ್ ಸ್ಟ್ರುಮೆಂಟ್ಸ್ ಗೆ 4.4 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಸೂಕ್ಷ್ಮವಾದ ಕ್ಷೇತ್ರ ಎಂದು ಪರಿಗಣಿಸಿ ಕೆಂದ್ರ ಸಚಿವರಿಗೆ ಮನವರಿಕೆಯಾಗಿ ಹಣ ಬಿಡುಗಡೆ ಮಾಡಿದ್ದಾರೆ.
ಶಾರದ ಅಂಧರ ವಿಕಾಸ ಕೇಂದ್ರ ಶಾಲೆಗೆ ಸಿಎಸ್ಆರ್ ಫಂಡ್ ನಲ್ಲಿ ಓ.ಎನ್.ಜಿ.ಸಿ. ಸೋಲಾರ್ ಇನ್ ಸ್ಟ್ರುಮೆಂಟ್ಸ್ ನೀಡಲು ಕೇಂದ್ರ ಸರ್ಕಾರ ಅನುದಾನ ನೀಡಲಿದೆ. ಒ.ಎನ್. ಜಿಸಿ ಅಡಿಯಲ್ಲಿ ಒಂದು ಸಾವಿರ ಗ್ರಾಮಗಳಿಗೆ ಸೋಲಾರ್ ಲೈಟ್ಸ್ ಗಳನ್ನ ಅಳವಡಿಸಲಾಗುತ್ತದೆ ಇದರ ಅಡಿಯಲ್ಲಿ ಮತ್ತೊಂದು ಯೋಜನೆ ಅಡಿ 600 ಹೊಲಿಗೆ ಮಿಷಿನ್ ಬೈಂದೂರಿನಲ್ಲಿ ಉಚಿತವಾಗಿ ನೀಡಲಾಗುತ್ತದೆ.
ರಾಜ್ಯದಲ್ಲಿ ಸ್ವಚ್ಛದಲ್ಲಿ ಮೆಗ್ಗಾನ್ ನಂಬರ್ ಒನ್ ಇದೆ. 1800 ಸಿಬ್ಬಂದಿಗಳು ಮತ್ತು ವೈದ್ಯರು ಇದ್ದಾರೆ. ಸೇವೆಯಲ್ಲೂ ನಂಬರ್ ಒನ್ ಬೇಕಿದೆ ಇದಕ್ಕೆ ಏನು ಮಾಡಬಹುದು ಯೋಚಿಸಬೇಕಿದೆ
ಮಹಿಳೆಯರ ಗರ್ಭಕಂಠದ ಕ್ಯಾನ್ಸರ್ ಗೆ ಲಸಿಕೆ ನೀಡಲಾಗುತ್ತಿದೆ. ಶಾಲೆಗೆ ಹೋಗಿ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಾಗುತ್ತಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿದೆ ಕ್ರಿಟಿಕಲ್ ಕೇರ್ ಕ್ಲೀನಿಕ್ ಕಾಮಗಾರಿ ಆರಂಭವಾಗಿದೆ ಎಂದರು.
ಮತ್ತೊಂದು ಜಿಲ್ಲಾ ಆಸ್ಪತ್ರೆಯನ್ನ ಜೈಲು ಆವರಣದಲ್ಲಿ ಅಥವಾ ಆಲ್ಕೊಳ್ದ ಅರಣ್ಯ ಇಲಾಖೆಯ ಫಾರೆಸ್ಟ್ ಡಿಪೋದಲ್ಲಿ ಜಾಗವಿದೆ ಅಲ್ಲಿ ಇನ್ನೊಂದು ಹೊಸ ಜಿಲ್ಲಾ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತ ಯೋಚಿಸಬಹುದಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಗೀತಾ, ಡಿಹೆಚ್‌ಓ ಡಾ.ನಟರಾಜ್, ಸಿಮ್ಸ್ ಸಿಎಓ ಉಮಾ ಸದಾಶಿವ ಹಿಂದಿನ ಸಲಹಾ ಸಮಿತಿಯ ದಿವಕಾರ್ ಶೆಟ್ಟಿ, ರಾಜೇಶ್ ಕಾಮತ್, ದಿಶಾಕಮಿಟಿ ಭದ್ರಪುರ ಗಿರೀಶ್ ಇತರರು ಇದ್ದರು.





