ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ಶಾಸಕರ ಸಿಟಿ ರೌಂಡ್ಸ ನಗರದ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ.!?

On: April 21, 2026 12:01 PM
Follow Us:
---Advertisement---

ಪಾರ್ವತಮ್ಮ ಬಡಾವಣೆಯ ಯುಜಿಡಿ ಮತ್ತು ರಸ್ತೆ ಸಮಸ್ಯೆ ನಿವಾರಣೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಸ್ಥಳದಲ್ಲೇ ಸೂಚನೆ.

ಶಿವಮೊಗ್ಗ: ನಗರದ ಜನತೆಯ ದೈನಂದಿನ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪನವರು ಇಂದು ವಾರ್ಡ್ ನಂಬರ್ 01ರ ಪಾರ್ವತಮ್ಮ ಬಡಾವಣೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಡಾವಣೆಯಾದ್ಯಂತ ಸಂಚರಿಸಿದ ಶಾಸಕರು, ಸ್ಥಳೀಯ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು. ಮುಖ್ಯವಾಗಿ ಒಳಚರಂಡಿ (UGD) ವ್ಯವಸ್ಥೆಯಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಹಾಗೂ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ  ಸಾರ್ವಜನಿಕರಿಂದ ಮಾಹಿತಿ ಪಡೆದರು. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ ಅವರು, ಕಾಮಗಾರಿಗಳ ವಿಳಂಬಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೂಡಲೇ ದುರಸ್ತಿ ಕಾರ್ಯ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಚಂದ್ರಪ್ಪ, ರಾಜು, ಮಹಾನಗರ ಪಾಲಿಕೆಯ ಅಭಿಯಂತರರು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

ಐ.ಪಿ.ಎಲ್.ಕ್ರಿಕೆಟ್ ಟಿಕೆಟ್ ಬೇಡ ಎಂದುರಾಜ್ಯಕ್ಕೆ ಮಾದರಿಯಾದ ಚನ್ನಬಸಪ್ಪ ನವರು ಯಾವುದೇ ಕಾರಣಕ್ಕೂ ಸಮಯ ವ್ಯಥ೯ ಮಾಡದೆ ಬೆಳ ಬೆಳಗ್ಗೆ ಸಿಟಿ ರೌಂಡ್ಸ ಮಾಡಿ ಜನರ ಬವಣೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡುತ್ತಿರುವುದಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Sathish munchemane

Join WhatsApp

Join Now

 

Read More