ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕಸ ಹೊಡೆಯುವವರಿಗೆ, ಇಲ್ಲಿ ಅವಕಾಶ ಕೊಡಕಾಗುತ್ತಾ?

On: September 26, 2026 2:30 PM
Follow Us:
---Advertisement---

ಕಸ ಹೊಡೆಯುವವರಿಗೆ, ನೆಲಸಾರಿಸುವವರಿಗೆ ಕರೆದು ಇಲ್ಲಿ ಅವಕಾಶ ಕೊಡಕಾಗುತ್ತಾ?ಎಚ್ಎಸ್ ಸುಂದರೇಶ್

ಶಿವಮೊಗ್ಗದ ಕಾಂಗ್ರೆಸ್ ವಲಯದಲ್ಲಿನ ಆಂತರಿಕ ಕಲಹ- ಕಚ್ಚಾಟ ತಾರಕಕ್ಕೇರಿ, ಇಲ್ಲಿನ ಕಾಂಗ್ರೆಸ್ ಪಾಳೆಯದೊಳಗಿನ ಅಧಿಕಾರ ದಾಹ, ಸ್ಥಾನಮಾನಕ್ಕಾಗಿ ಕಾಲೆಳೆದಾಟವಂತೂ ಹಾದಿರಂಪ ಬೀದಿರಂಪವಾಗಿ ಹೋಗಿದೆ! ಪದಚ್ಯುತಗೊಂಡ ಕಾಂಗ್ರೆಸ್ನ ಮಾಜಿ ಜಿಲ್ಲಾಧ್ಯಕ್ಷ ಎಚ್ಎಸ್ ಸುಂದರೇಶ್ ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿಯನ್ನು ಕರೆದು, ತಮಗಾಗಿರುವ ಅನ್ಯಾಯ, ಪಕ್ಷದೊಳಗಿನ ಆಂತರಿಕ ಮುಸುಕಿನ ಗುದ್ದಾಟವನ್ನು ಖುಲ್ಲಮ್ ಖುಲ್ಲಾ ಮಾಡಿ ಹಾಕಿ,” ಪಕ್ಷದೊಳಗಿರುವ ಬಹುತೇಕರು ಸರಿಯಿಲ್ಲ, ಅವರುಗಳನ್ನೆಲ್ಲ ಒದ್ದು ಹೊರ ಹಾಕಬೇಕಿದೆ, ಆಯಾ ಸ್ಥಾನಮಾನಗಳಿಗೆ ಅರ್ಹತೆ ಇಲ್ಲದವರೆಲ್ಲ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ,  ನಿಷ್ಕ್ರಿಯನಾಗಿ ಕುಳಿತಿರುವ ಗ್ಯಾರೆಂಟಿಗಳ ವಿಭಾಗದ ಚಂದ್ರ ಭೂಪಾಲ್,ದಡ್ಡ ಆರ್. ಪ್ರಸನ್ನ ಕುಮಾರ್, ಮೊದಲಾದವರು ನಾಲಾಯಕ್ ಗಳಗಿದ್ದಾರೆ, ಪಕ್ಷದ ಕೋಟಿಗಟ್ಟಲೆ ಹಣವನ್ನು ಗೋಣಿ ಮಾಲತೇಶ ಹಾಗೂ ಗೇಟ್ ಚಂದ್ರ ಹೊತ್ತೊಯ್ದಿದ್ದಾರೆ, ಈತನನ್ನು ಹೊಡೆಯಲು ತಾನು ಅಟ್ಟಿಸಿಕೊಂಡು ಹೋಗಿದ್ದೆ… ಅಂತೆಲ್ಲಾ ಬಡಬಡಿಸುತ್ತಿರುವ ಹೆಚ್ ಎಸ್, ಸುಂದರೇಶ್, ಆಹ್ವಾನಿತ ಪತ್ರಕರ್ತರುಗಳು ಕೇಳುವ ಪ್ರಶ್ನೆಗೆ ಉತ್ತರಿಸುವ ರೀತಿಯೇ ವಿಚಿತ್ರವಾಗಿತ್ತು! ಇದರಿಂದ ರೇಗಿಹೋದ ಪತ್ರಕರ್ತರು ” ಹೀಗೇಕೆ ಮಾತನಾಡುತ್ತೀರಿ? ” ಎಂದು ಸಹಜವಾಗಿ ಗರಂ ಆದಾಗ, ಮೆತ್ತಗಾದ ಸುಂದರೇಶ್ ” ಬೇಜಾರಾಗಬೇಡಿ ನಾನು ಹಾಗಲ್ಲ ಹೇಳಿದ್ದು, ನಾನು ಮೊದಲು ಕ್ಷಮೆ ಕೇಳಿದ್ದೇನೆ, ಈಗಲೂ ಕ್ಷಮೆ ಕೇಳುತ್ತಿದ್ದೇನೆ, ಮಾತಿನ ಭರದಲ್ಲಿ ನಾನು ಬಳಸುವ ಪದಗಳು ವ್ಯತ್ಯಾಸವಾದಲ್ಲಿ ಕ್ಷಮಿಸಿ, ಯಾಕೆಂದರೆ ಅಯೋಡಿನ್ ಕಮ್ಮಿಯಾಗಿದೆ ಅಲ್ವಾ? ಎಂದು ನಸುನಕ್ಕು ಹೇಳುತ್ತಾರೆ! ” ನಿಮ್ಮನ್ನು ಇಷ್ಟರಲ್ಲೇ ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಇದೆಯಲ್ಲವೇ? ” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಾಧ್ಯತೆ ಇದೆ ಎಂದು ತಲೆಯಾಡಿಸುತ್ತಾರೆ.

” ಪಕ್ಷದಲ್ಲಿ ಗೆಲ್ಲೋ ರಿಗೆ ಕರೆದು ಅವಕಾಶ ಕೊಡ್ತೀವ್ರಿ, ಗೆಲ್ಲುವ ಕುದುರೆಗಳಿಗೆ ಯಾವಾಗಲೂ ಸ್ವಾಗತವಿದೆ, ಕೇವಲ ಚಿಕ್ಕ ಪುಟ್ಟ ಸ್ಥಾನಮಾನಗಳಿಗೆ ಹಂಬಲಿಸುವವರಿಗೆ, ಕಸ ಹೊಡೆಯುವವರಿಗೆ, ನೆಲಸಾರಿಸುವವರಿಗೆ ಕರೆದು ಇಲ್ಲಿ ಅವಕಾಶ ಕೊಡಕಾಗುತ್ತಾ? ” ಇದು ಎಚ್ಎಸ್ ಸುಂದರೇಶ್ ಉವಾಚ! ಹಾಗಾದರೆ ಕಸ ಗುಡಿಸುವವರು ನೆಲಸಾರಿಸುವವರೆಂದರೆ ಅಷ್ಟೊಂದು ನಿಕೃಷ್ಟವಾ ಇವರಿಗೆ? ಆ ಕಾಯಕ ಮಾಡುವವರು ಗೆಲ್ಲುವುದಿಲ್ಲ ಅಥವಾ ಗೆಲ್ಲಬಾರದು ಎಂದು ಅವರ ಮಾತಿನ ಅರ್ಥವೇ?… ಇಂಥವರು ಜನನಾಯಕರಾದರೆ ಗತಿ ಏನು ಪರಮಾತ್ಮಾ??

ಸುಂದರೇಶ್… ಹಾಗಾದರೆ ಮುಂದಿನ ದಿನಗಳಲ್ಲಿ ಶಿವಮೊಗ್ಗ ಕಾಂಗ್ರೆಸ್ ನಲ್ಲಿ ಅದೆಂತೆಂತಹ ವಿಲಕ್ಷಣ ವಿದ್ಯಮಾನಗಳು ಹೆಡೆಯುತ್ತಿ ನಿಲ್ಲಲಿವೆ? ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಶಿವಮೊಗ್ಗಕ್ಕೆ ಬಂದೊಡನೆ, ಕಾಂಗ್ರೆಸ್ ಪಾಳೆಯದೊಳಗಿನ ಅದೆಷ್ಟು ವಿಕೇಟ್ ಪತನವಾಗಲಿವೆ…!? Come on waite & see.

Sathish munchemane

Join WhatsApp

Join Now

 

Read More

Leave a Comment