ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

‎ಸಿ.ಎಸ್. ಷಡಾಕ್ಷರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ? ಶಿವಮೊಗ್ಗದಲ್ಲಿ ಬಿಸಿ ಬಿಸಿ ಚರ್ಚೆ.!?

On: July 21, 2026 9:15 PM
Follow Us:
---Advertisement---

ಶಿವಮೊಗ್ಗ ರಾಜಕೀಯ ವಲಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಚರ್ಚೆ ಜೋರಾಗಿದೆ. ಅವರ ರಾಜಕೀಯ ಭವಿಷ್ಯದ ಬಗ್ಗೆ ಅಭಿಮಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಅವರ ಬೆಂಬಲಿಗರ ಅಭಿಪ್ರಾಯದಂತೆ, ಕಡಿಮೆ ಅವಧಿಯಲ್ಲೇ ಜನಸಾಮಾನ್ಯರೊಂದಿಗೆ ಬೆರೆತು, ಯಾವುದೇ ಜಾತಿ-ಮತದ ಭೇದವಿಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಗುಣದಿಂದ ಷಡಾಕ್ಷರಿ ಅವರು ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅಧಿಕಾರವಿರಲಿ ಅಥವಾ ಇರದಿರಲಿ, ತಮ್ಮನ್ನು ಸಂಪರ್ಕಿಸುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವರ ಕಾರ್ಯಶೈಲಿಯೇ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿದೆ ಎಂದು ಹಲವು ಅಭಿಮಾನಿಗಳು ಹೇಳುತ್ತಾರೆ.

ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ವಿಚಾರವನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಷಡಾಕ್ಷರಿ ಅವರು, ಆ ನೆನಪಿಗಾಗಿ ಶಿವಮೊಗ್ಗದಲ್ಲಿ ಶಿವಕುಮಾರ ಸ್ವಾಮೀಜಿ ವಿದ್ಯಾರ್ಥಿ ನಿಲಯ ನಿರ್ಮಿಸಿ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಕಾರ್ಯದಲ್ಲಿ ತೊಡಗಿರುವುದು ನಮ್ಮ ಮಲೆನಾಡಿನ ಅತಿ  ಶ್ರೀಮಂತ ಕುಟುಂಬದವರು ಯಾರು ಮಾಡಿದ ಉದಾಹರಣೆ ಇಲ್ಲ ಅನ್ನುತ್ತಾರೆ  ಅದು ಸತ್ಯವು ಹೌದು ಇದೇ ಕಾರಣಗಳಿಂದ ಇಂತಹ ಸಮಾಜಮುಖಿ ನಾಯಕರು ರಾಜ್ಯ ರಾಜಕೀಯಕ್ಕೆ ಅಗತ್ಯ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಆದರೆ ಈ ಕುರಿತು ಸ್ವತಃ ಸಿ.ಎಸ್. ಷಡಾಕ್ಷರಿ ಅವರು ಸ್ಪಷ್ಟವಾಗಿ ಯಾವುದೇ ರಾಜಕೀಯ ಘೋಷಣೆ ಮಾಡಿಲ್ಲ. ಈ ಹಿಂದೆ ವಿವಿಧ ಸಂದರ್ಭಗಳಲ್ಲಿ ಮಾತನಾಡಿರುವ ಅವರು, “ನಾನು ಶಾಸಕನಾದರೆ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತನಾಗುತ್ತೇನೆ. ಆದರೆ ಈಗ ರಾಜ್ಯದ ವಿವಿಧ ಭಾಗಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶ ದೇವರು ಕೊಟ್ಟಿದ್ದಾನೆ. ಅದರಲ್ಲಿ ನನಗೆ ತೃಪ್ತಿ ಇದೆ. ಮುಂದೇನು ಆಗಬೇಕು ಎಂಬುದನ್ನು ಕಾಲ ಮತ್ತು ದೇವರ ಇಚ್ಛೆ ನಿರ್ಧರಿಸುತ್ತದೆ” ಎಂದು ಹೇಳಿರುವುದು ಗಮನಾರ್ಹ.

ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಅಧಿಕೃತ ಉತ್ತರ ಇಲ್ಲ. ಆದರೆ ಶಿವಮೊಗ್ಗ ರಾಜಕೀಯದಲ್ಲಿ ಈ ಕುರಿತು ಚರ್ಚೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸತ್ಯ.

Sathish munchemane

Join WhatsApp

Join Now

 

Read More

Leave a Comment