ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ರೈತರಿಗೆ ಸುರಕ್ಷಿತ ಕೃಷಿ ಮತ್ತು ಅಂತರ್ಜಲ ಸಂರಕ್ಷಣೆ ಕುರಿತು ಕಾರ್ಯಾಗಾರ.!

On: July 14, 2026 11:36 PM
Follow Us:
---Advertisement---

ಕೊನಗವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರೈತರಿಗೆ ಸುರಕ್ಷಿತ ಕೃಷಿ ಮತ್ತು ಅಂತರ್ಜಲ ಸಂರಕ್ಷಣೆ ಕುರಿತು ಕಾರ್ಯಾಗಾರ

ಹಾರನಹಳ್ಳಿ ಕೃಷಿ ಇಲಾಖೆ ಹಾಗೂ ಕೆರೆ ನೀರು ತುಂಬಿಸುವ ಹೋರಾಟಗಾರರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕೊನಗವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ “ಸುರಕ್ಷಿತ ಕೀಟನಾಶಕ ಬಳಕೆ, ಬೀಜ ಉಪಚಾರ ಹಾಗೂ ಕೊಳವೆಬಾವಿ ಅಂತರ್ಜಲ ಮರುಪೂರಣ” ಕುರಿತ ಜಾಗೃತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರೇಣು ನಾಯ್ಕ್ ಅವರು, ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅಂತರ್ಜಲ ಮಟ್ಟ, ಮಳೆನೀರು ಸಂಗ್ರಹಣೆಯ ಮಹತ್ವ ಹಾಗೂ ಕೊಳವೆಬಾವಿಗಳ ಮರುಪೂರಣ ವಿಧಾನಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ರೈತರು ತಮ್ಮ ಜಮೀನಿನಲ್ಲಿ ಅಳವಡಿಸಬಹುದಾದ ಮಳೆನೀರು ಮರುಪೂರಣ ವ್ಯವಸ್ಥೆಗಳ ಬಗ್ಗೆ ಪ್ರಾಯೋಗಿಕ ಸಲಹೆಗಳನ್ನು ನೀಡಿದರು. ಡೆಂಟಲ್ ಡಾ|| ಶಾಂತಕುಮಾರ್ ಅವರು ನೆರೆದಿದ್ದ ರೈತರಿಗೆ ವಿಡಿಯೋ ಪ್ರತಿಕ್ಷತೆ ಪ್ರದಶಿ೯ಸಿ ರೆಣು ಅವರಿಗೆ ಸಹಕರಿಸಿದರು.

ರೈತ ಎರೇಕೊಪ್ಪದ ನಾಗೇಂದ್ರಪ್ಪ ಅವರು ತಮ್ಮ ಅನುಭವ ಹಂಚಿಕೊಂಡು, “ನನ್ನ ತೋಟದಲ್ಲಿ 16 ಕೊಳವೆಬಾವಿಗಳನ್ನು ಕೊರೆಸಲು ಸುಮಾರು ₹25 ಲಕ್ಷ ವೆಚ್ಚ ಮಾಡಿದ್ದರೂ ನೀರು ಸಿಗದೆ ಸಂಕಷ್ಟ ಅನುಭವಿಸಿದ್ದೆ. ಬಳಿಕ ಕೊಳವೆಬಾವಿಗಳಿಗೆ ಮಳೆನೀರು ಮರುಪೂರಣ ವ್ಯವಸ್ಥೆ ಅಳವಡಿಸಿದ ಪರಿಣಾಮ, ಈಗ ಆರು ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ದೊರೆಯುತ್ತಿದ್ದು, ತೋಟದ ನೀರಾವರಿಗೆ ಅನುಕೂಲವಾಗಿದೆ” ಎಂದು ತಿಳಿಸಿದರು. ಅವರ ಅನುಭವ ರೈತರಲ್ಲಿ ಉತ್ತಮ ಸ್ಪಂದನೆ ಮೂಡಿಸಿತು.

ಹಾರನಹಳ್ಳಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಎ.ಓ. ಪ್ರತಿಮಾ ಅವರು ಸುರಕ್ಷಿತ ಕೀಟನಾಶಕ ಬಳಕೆ, ಬೀಜ ಉಪಚಾರದ ಅಗತ್ಯತೆ ಹಾಗೂ ಉತ್ತಮ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು. ಕೀಟನಾಶಕಗಳನ್ನು ಸಿಂಪಡಿಸುವ ವೇಳೆ ಬೆಳಗಿನ 8 ಘಂಟೆ ಹಾಗೂ ಮಾಧ್ಯನ 4 ಘಂಟೆ ಮೆಲೆ ಕೀಟನಾಶಕ ಸಿಂಪಡಣೆ ಮಾಡಬೇಕು ಅದರಿಂದ ಆಗುವ ಉಪಯೋಗದ ಬಗ್ಗೆ ತಿಳಿಸಿದರು, ಕೀಟನಾಶಕ ಸಿಂಪಡಣೆ ಮಾಡುವಾಗ ರೈತರು ಕಡ್ಡಾಯವಾಗಿ ಕೈಗವಸು, ಮಾಸ್ಕ್, ಕಣ್ಣಿನ ರಕ್ಷಕ ಕನ್ನಡಕ ಮತ್ತು ಸೂಕ್ತ ಸುರಕ್ಷತಾ ಉಡುಪು ಧರಿಸಬೇಕು. ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಕೀಟನಾಶಕ ಬಳಸಿ, ಅಂಗಡಿ ಅವರು ನೀಡಿದ ಕೀಟನಾಶಕ ಬಳಸ ಬೇಡಿ ತೋಟಗಾರಿಕ ಅಧಿಕಾರಿಗಳು ಹಾಗೂ ನಮ್ಮನ್ನು ರೋಗ ತಗುಲಿದ ಬೇಳೆಯ ಶಾಂಪಲ್ಸ ತೆಗೆದು ಕೋಂಡು ನೇರವಾಗಿ ಬೇಟಿ ಮಾಡಿ ಸಲಹೆ ಪಡಿಯಿರಿ ಕೇಲ ರೈತರು ಮೊಬೈಲ್ ನಲ್ಲಿ ಪೋಟೋ ಕಳಿಸಿ ಸಲಹೆ ಕೇಳುತ್ತಿರಾ ಆದರೆ ನೀವು ಕಳಿಸುವ ಪೋಟೋ ಜೂಮ್ ಮಾಡಿ ನೋಡಿದರು ಎನು ಕಾಣಿಸಲ್ಲ ಆರೀತಿ ಅಗುವುದು ಬೇಡ ನೇರ ಭೇಟಿಮಾಡಿ  ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸತೀಶ ಮುಂಚೆಮನೆ ಮಾತನಾಡಿ ಕೇರೆ ತುಂಬಿಸುವ ಯೋಜನೆ ಈಗಾಗಲೇ ಹಾರನಹಳ್ಳಿ ಹೋಬಳಿಯ ಎಲ್ಲಾ ಕೇರೆಗಳು ಗೌಡನಕೇರೆಯ ಎತಾನೀರವರಿಯ ಪಲನುಬವಿಗಾಳಗಿ ಕೆರೆ ತುಂಬಿಸುವ ಯೋಜನೆ ಫಲವಾಗಿ ನೀರು ತುಂಬುತ್ತಿವೆ ಆದರೆ ವಂಚಿತರಾದ ಹಳ್ಳಿಗಳಾದ  ಸೇವಲಾಲ್  ನಗರ, ಎರೇಕೊಪ್ಪ ಕೊನಗವಳ್ಳಿಯ ಕೇರೆಗಳು ಮಾತ್ರ ಹಾಗಾಗಿ ರೈತರಾದ  ನಾವು ಎಚ್ಚತ್ತು ಒಟ್ಟಾಗಿ ಹೋರಾಟ ಮಾಡಿ ಕೇರೆ ಗಳಿಗೆ ಪೈಪಲೈನ ಯೋಜನೆಗೆ ಮಾಡಿಸೊಣ ನಮ್ಮ ಕೇರೆ ನಮ್ಮ ನೀರು ನಮ್ಮ ಹಕ್ಕು ಪಡಿಯವಲ್ಲಿ ಒಂದಗೋಣ ಎಂದರು.  

ಸೇವಲಾಲ್ ನಗರ, ಕೊನಗವಳ್ಳಿ, ಎರೇಕೊಪ್ಪದ  ಹಲವು ರೈತರು ತಮ್ಮ ಅನುಭವಗಳು ಹಾಗೂ ಸಮಸ್ಯೆಗಳನ್ನು ಹಂಚಿಕೊಂಡು, ಅಂತರ್ಜಲ ಸಂರಕ್ಷಣೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದರು. ಇಂತಹ ಜಾಗೃತಿ ಕಾರ್ಯಕ್ರಮಗಳು ರೈತರಲ್ಲಿ ಅರಿವು ಹೆಚ್ಚಿಸಿ, ನೀರಿನ ಸಂರಕ್ಷಣೆ ಹಾಗೂ ಸುರಕ್ಷಿತ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಿವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

Sathish munchemane

Join WhatsApp

Join Now

 

Read More

Leave a Comment