ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಭಾರತಕ್ಕೆ ಮಣಿದ ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ.!

On: February 3, 2026 10:51 PM
Follow Us:
---Advertisement---

ದೆಹಲಿ: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುತ್ತಿದೆ, ಕೃಷಿ ಮತ್ತು  ಹೈನುಗಾರಿಕೆ ವಲಯಗಳ ಹಿತಾಸಕ್ತಿಯನ್ನು ಒಪ್ಪಂದದ ಪರಿಣಾಮದಿಂದ ರಕ್ಷಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್  ಗೋಯಲ್ ಸ್ಪಷ್ಟಪಡಿಸಿದರು.

ಭಾರತದಿಂದ ಆಮದಾಗುವ ಸರಕುಗಳ ಮೇಲಿನ ಸುಂಕ ಶೇಕಡ 50ರಷ್ಟು ಇದ್ದಿದ್ದನ್ನು ಶೇ 18ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ನಂತರದಲ್ಲಿ ಗೋಯಲ್ ಪತ್ರಿಕಾಗೋಷ್ಠಿ ನಡೆಸಿದರು.

ಅಮೆರಿಕ ಮತ್ತು ಭಾರತ ಜಂಟಿ ಹೇಳಿಕೆಯೊಂದನ್ನು ಶೀಘ್ರವೇ ಹೊರಡಿಸಲಿವೆ, ಅದು ಒಪ್ಪಂದದ ವಿವರಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಚೌಕಟ್ಟು ಎರಡೂ ದೇಶಗಳು ಅಂತಿಮಗೊಳಿಸಿವೆ.

ವ್ಯಾಪಾರ ಒಪ್ಪಂದವು ದೇಶದ ಜನರಿಗೆ ಭಾರಿ “ಅವಕಾಶಗಳನ್ನು ಒದಗಿಸಲಿದೆ ಎಂದು ಗೋಯಲ್ ಬರವಸೆ ನೀಡಿದರು.

‘ಒಪ್ಪಂದವು ಸೂಕ್ಷ್ಮ ವಲಯಗಳ ಹಿತವನ್ನು ರಕ್ಷಿಸಲಿದೆ, ಕೃಷಿ ಹಾಗೂ ಹೈನುಗಾರಿಕೆ ವಲಯಗಳ ಹಿತವನ್ನು ಪೂರ್ಣವಾಗಿ ಕಾಯಲಿದೆ’ ಎಂದು ಹೇಳಿದರು.

ಭಾರತದಲ್ಲಿ ಕಾರ್ಮಿಕರ ಭಾಗೀದಾರಿಕೆಯು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಜವಳಿ, ಪ್ಲಾಸ್ಟಿಕ್, ಉಡುಪು, ಮನೆಗಳ ಅಲಂಕಾರದಲ್ಲಿ ಬಳಸುವ ಉತ್ಪನ್ನಗಳು, ಚರ್ಮೋದ್ಯಮ ಮತ್ತು ಪಾದರಕ್ಷೆ, ಹವಳ ಮತ್ತು ಆಭರಣ, ಸಾವಯವ ರಾಸಾಯನಿಕಗಳು, ರಬ್ಬರ್ ಉತ್ಪನ್ನಗಳು, ಯಂತ್ರೋಪಕರಣಗಳು, ವಿಮಾನ ತಯಾರಿಕೆ ವಲಯಗಳಿಗೆ ಒಪ್ಪಂದವು ದೊಡ್ಡ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು.

ಈ ವಲಯದ ಬಹುತೇಕ ಉತ್ಪನ್ನಗಳಿಗೆ ಅಮೆರಿಕ ಈಗ ವಿಧಿಸುತ್ತಿರುವ ಆಮದು ಸುಂಕ ಶೇ 50ರಷ್ಟು ಅದು ಶೇ 18ಕ್ಕೆ ಇಳಿಕೆ ಆಗಲಿದೆ.

ಒಪ್ಪಂದವು ಭಾರತದ ಬೆಳವಣಿಗೆಗೆ ಶಕ್ತಿ ನೀಡಲು ಅಗತ್ಯವಿರುವ ವಿಶ್ವದರ್ಜೆಯ ತಂತ್ರಜ್ಞಾನವನ್ನು ಪಡೆಯಲು ಕೂಡ ಅವಕಾಶ ಮಾಡಿಕೊಡಲಿದೆ.

ಭಾರತವು ಅಮೆರಿಕದ ಜೊತೆ ಬಹಳ ಉತ್ತಮವಾದ ಒಪ್ಪಂದ ಮಾಡಿಕೊಳ್ಳುತ್ತಿದೆ, ಇದು ಭಾರತದ ಜೊತೆ ಸ್ಪರ್ಧೆಯಲ್ಲಿರುವ ಇತರ ದೇಶಗಳು ಮಾಡಿಕೊಂಡಿರುವ ಒಪ್ಪಂದಕ್ಕಿಂತ ಉತ್ತಮವಾಗಿದೆ ಎಂದರು.

ಅಮೆರಿಕದ ಜೊತೆಗಿನ ಒಪ್ಪಂದದ ಕುರಿತಾಗಿ ಹೆಚ್ಚಿನ ಮಾಹಿತಿ ನೀಡದ ಗೋಯಲ್ ಅವರು, ‘ಒಪ್ಪಂದವು ಅಂತಿಮ ಹಂತದಲ್ಲಿದೆ’ ಎಂದು ತಿಳಿಸಿದರು.

ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಭಾರತದ ಸರಕುಗಳ ಮೇಲೆ ವಿಧಿಸಿರುವ ಶೇ 25ರಷ್ಟು ಹೆಚ್ಚುವರಿ ಶುಲ್ಕನ್ನು ಕೈಬಿಡಲು ಅಮೆರಿಕ ಒಪ್ಪಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೆ, ಪ್ರತಿಸುಂಕದ ರೂಪದಲ್ಲಿ ವಿಧಿಸಿದ್ದ ಶೇ 25ರಷ್ಟು ಸುಂಕವನ್ನು ಶೇ 18ಕ್ಕೆ ತಗ್ಗಿಸಲು ಒಪ್ಪಿದೆ ಎಂದು ಗೊತ್ತಾಗಿದೆ.

‘ಹೀಗಾಗಿ ಭಾರತದ ಸರಕುಗಳ ಮೇಲಿನ ಸುಂಕದ ಒಟ್ಟು ಪ್ರಮಾಣ ಶೇ 18ರಷ್ಟಾಗಲಿದೆ’ ಎಂದು ಮೂಲವೊಂದು ಮಾಹಿತಿ ನೀಡಿದೆ.

ಚರ್ಮದ ಉತ್ಪನ್ನಗಳು ಮತ್ತು ಪಾದರಕ್ಷೆ, ಸಿಗಡಿ ಸೇರಿದಂತೆ ವಿವಿಧ ಸಮುದ್ರ ಉತ್ಪನ್ನಗಳು, ರಾಸಾಯನಿಕ, ಪ್ಲಾಸ್ಟಿಕ್, ರಬ್ಬರ್, ಗೃಹ ಅಲಂಕಾರ ಉತ್ಪನ್ನಗಳು ಹಾಗೂ ನೆಲಹಾಸುಗಳು, ಯಂತ್ರೋಪಕರಣಗಳು, ಆಯ್ದ ಕೃಷಿ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆಯನ್ನು ಶೇ 18ರಷ್ಟು ಸುಂಕದೊಂದಿಗೆ ಪ್ರವೇಶಿಸಬಹುದು.

‘ಈ ಉತ್ಪನ್ನಗಳು ನಮ್ಮ ಪ್ರತಿಸ್ಪರ್ಧಿ ದೇಶಗಳ ಉತ್ಪನ್ನಗಳಿಗಿಂತ ಕಡಿಮೆ ಸುಂಕದೊಂದಿಗೆ  ಮಾರುಕಟ್ಟೆ ಪ್ರವೇಶಿಸುತ್ತವೆ. ಇದರಿಂದಾಗಿ ತಿರುಪ್ಪರು (ಉಡುಪು), ಸೂರತ್‌ನಂತಹ (ಹವಳ ಮತ್ತು ಆಭರಣ) ಕ್ಲಸ್ಟರ್‌ಗಳು ಮತ್ತೆ ಲಾಭ ಮಾಡಿಕೊಳ್ಳಬಹುದು’ ಎಂದು ಅಧಿಕಾರಿಯೊಬ್ಬರು  ಹೇಳಿದ್ದಾರೆ.

Sathish munchemane

Join WhatsApp

Join Now

 

Read More