ಶಿವಮೊಗ್ಗ ತಾಲ್ಲೂಕಿನ ಆಯೂನುರು ಇಟ್ಟಿಗೆಹಳ್ಳಿ ಗ್ರಾಮದ ರೈತ ಮಂಜುಳ ರಮೇಶ್ ಅವರಿಗೆ ಸೇರಿದ ಮೆಕ್ಕೆಜೋಳದ ರಾಶಿಯ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಡಿ.ವಾಲ್ ಕಟ್ಟಗಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಸಮಾರು 80 ಕ್ವಿಂಟಲ್ ಮೆಕ್ಕೆಜೋಳ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಘಟನೆಯ ವೇಳೆ ಪಕ್ಕದಲ್ಲಿದ್ದ ಇನ್ನಷ್ಟು ಮೆಕ್ಕೆಜೋಳದ ರಾಶಿಗೂ ಬೆಂಕಿ ತಗುಲುವ ಭೀತಿ ಉಂಟಾಗಿತ್ತು ಆದರೆ ತಕ್ಷಣವೇ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ರೈತರು ಒಗ್ಗಟ್ಟಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿ, ದೊಡ್ಡ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾದರು.
ಈ ಅಗ್ನಿ ಅವಘಡದಿಂದ ಬಡ ರೈತ ಮಂಜುಳ ರಮೇಶ್ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿದ್ದಾರೆ.
ಘಟನೆಗೆ ಟ್ರಾನ್ಸ್‌ಫಾರ್ಮರ್‌ನಿಂದ ಉಂಟಾದ ತಾಂತ್ರಿಕ ದೋಷವೇ ಕಾರಣವಾಗಿರುವುದರಿಂದ, ವಿಳಂಬ ಮಾಡದೇ ಸಂಬಂಧಪಟ್ಟ ಇಲಾಖೆ ರೈತನಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಇಟ್ಟಿಗೆಹಳ್ಳಿ ಗ್ರಾಮಸ್ಥರು ಹಾಗೂ ರೈತರು ಒತ್ತಾಯಿಸಿದ್ದಾರೆ.






