ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

‎V-Guard ಸೋಲಾರ್ ಕ್ರಾಂತಿ: ಇಂಜಿನಿಯರ್–ಬಿಲ್ಡರ್ ಮೀಟ್‌ನಲ್ಲಿ ನವಶಕ್ತಿ ಪರಿಚಯ.! ‎

On: January 27, 2026 9:10 PM
Follow Us:
---Advertisement---

ಇಂಜಿನಿಯರ್–ಆರ್ಕಿಟೆಕ್ಟ್–ಬಿಲ್ಡರ್ ಮೀಟ್‌ಗೆ ಉತ್ತಮ ಪ್ರತಿಕ್ರಿಯೆ.

ಶಿವಮೊಗ್ಗ: ನಗರದ ಕೋಟೆ ರಸ್ತೆಯ ಗೋಪಾಲಯ್ಯ ಕಂಪೌಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ V-Guard ಚಾನಲ್ ಪಾರ್ಟನರ್ ಪ್ರೇಮಾ ಎಂಟರ್‌ಪ್ರೈಸಸ್ ವತಿಯಿಂದ ನಗರದ ರಾಯಲ್ ಆರ್ಕಿಡ್‌ನಲ್ಲಿ ಇಂಜಿನಿಯರ್‌, ಆರ್ಕಿಟೆಕ್ಟ್‌ ಹಾಗೂ ಬಿಲ್ಡರ್‌ಗಳಿಗಾಗಿ ವಿಶೇಷ ಮಾಹಿತಿ ಸಭೆ ಆಯೋಜಿಸಲಾಗಿತ್ತು, ಸಭೆಯಲ್ಲಿ ಸೋಲಾರ್ ಪಂಪ್ ಸೆಟ್‌, ಸೋಲಾರ್ ಯುಪಿಎಸ್‌, ಸೋಲಾರ್ ಉಪಕರಣಗಳು, ಸೋಲಾರ್ ವಾಟರ್ ಹೀಟರ್‌ ಹಾಗೂ ಸೋಲಾರ್ ಪವರ್ ಪ್ಲಾಂಟ್‌ಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು.

ಶಿವಮೊಗ್ಗದ ಹೆಸರಾಂತ ಶಾಂತಲ ಇಂಡಸ್ಟ್ರೀಸ್ ಗ್ರೂಪ್‌ನ ಮುಖ್ಯಸ್ಥ ಚಂದ್ರಶೇಖರ ಮಾತನಾಡಿ, V-Guard ಕಂಪನಿ ಭಾರತೀಯ ವಿದ್ಯುತ್ ಉಪಕರಣಗಳ ಮಾರುಕಟ್ಟೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಗುಣಮಟ್ಟ ಮತ್ತು ನಂಬಿಕೆಗೆ ಹೆಸರಾಗಿದೆ ಎಂದು ತಿಳಿಸಿದರು.

ಸೋಲಾರ್ ವ್ಯವಸ್ಥೆಯಿಂದ ವೆಚ್ಚ ಉಳಿತಾಯ ಬಗ್ಗೆ ಮಂಜುನಾಥ್ ಶೇಟ್ ಅವರು ನಮಗೆ ತಿಳಿಸಿ ಮನೆಯ ಮೇಲೆ ಅಳವಡಿಸಿದ ಸೋಲಾರ್ ಆನ್-ಗ್ರಿಡ್ ರೂಫ್‌ಟಾಪ್ ಸಿಸ್ಟಂ ಮೂಲಕ ಮೆಸ್ಕಾಂಗೆ ತಿಂಗಳಿಗೆ ಕಟ್ಟುತ್ತಿದ್ದ ₹8,000 ವಿದ್ಯುತ್ ಬಿಲ್ ಉಳಿಯುತ್ತಿದ್ದು, ವರ್ಷಕ್ಕೆ ಸುಮಾರು ₹96,000 ಉಳಿತಾಯವಾಗಿದೆ. ಜೊತೆಗೆ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದ ತಿಂಗಳಿಗೆ ₹500 ಆದಾಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.

ದೇಶದ ಕೈಗಾರಿಕೆಗಳು ಬೆನ್ನೆಲುಬು; ಅವುಗಳನ್ನು ಉಳಿಸುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿದೆ ಎಂದರು.

ರೈತರಿಗೆ ಸೋಲಾರ್ ಶಕ್ತಿ ಅಗತ್ಯ.

ರೈತ ನಾಯಕ ಹೆಚ್.ಎಂ. ಶರಣ ಮಾತನಾಡಿ, ಅಡಿಕೆ ತೋಟದಲ್ಲಿ ವಿದ್ಯುತ್ ಕೊರತೆ ಹಾಗೂ ದುಬಾರಿ ವೆಚ್ಚ ದೊಡ್ಡ ಸಮಸ್ಯೆಯಾಗಿತ್ತು. V-Guard ಮೂಲಕ 30–40 ಕಿಲೋವಾಟ್ ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡಿಸಿದ ನಂತರ ವಿದ್ಯುತ್ ಸಮಸ್ಯೆ ಹಾಗೂ ವೆಚ್ಚಕ್ಕೆ ಪರಿಹಾರ ದೊರೆತಿದೆ

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ರೈತರ ತೋಟಗಳಿಗೆ ಉಚಿತ ಸೋಲಾರ್ ಪ್ಯಾನಲ್ ನೀಡಬೇಕು ಹಾಗೂ ಯಾವುದೇ ತೆರಿಗೆ ವಿಧಿಸಬಾರದು ಎಂದು ಮನವಿ ಮಾಡಿದರು.

ಸ್ವದೇಶಿ ಕಂಪನಿ V-Guard ರಮೇಶ್ ಬಾಬು, ಜಿಲ್ಲಾ ಕೈಗಾರಿಕಾ ಸಂಘ ಖಾಜಂಚಿ, ಅವರು ಮಾತನಾಡಿ  ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ನೈಸರ್ಗಿಕ ಶಕ್ತಿಯಿಂದ ಸ್ವಾವಲಂಬನೆ ಸಾಧಿಸಬೇಕಿದೆ. V-Guard ದೇಶದಲ್ಲೇ ಗುಣಮಟ್ಟದಲ್ಲಿ ಹೆಸರು ಮಾಡಿರುವ ಶುದ್ಧ ಸ್ವದೇಶಿ ಕಂಪನಿ; ಇದು ವಿದೇಶಿ ಕಂಪನಿ ಎಂಬ ತಪ್ಪು ಕಲ್ಪನೆ ಬಗ್ಗೆ ಮಾಹಿತಿ ನೀಡಿದರು.

ಸೋಲಾರ್ ಪ್ರಾಜೆಕ್ಟ್ ಇನ್‌ಚಾರ್ಜ್ ಯೋಗೇಶ್ ಹಾಜರೆ ಮಾತನಾಡಿ, 1977ರಲ್ಲಿ ಕೊಚ್ಚಿಯಲ್ಲಿ ಕೊಚೌಸೆಫ್ ಚಿಟ್ಟಿಲಪಿಲ್ಲಿ ಸ್ಥಾಪಿಸಿದ V-Guard, ವೋಲ್ಟೇಜ್ ಸ್ಟೆಬಿಲೈಜರ್‌, ಕೇಬಲ್‌, ಪಂಪ್‌, ಗೀಸರ್‌, ಫ್ಯಾನ್‌, UPS ಹಾಗೂ ಸೋಲಾರ್ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.

V-Guard ಚಾನಲ್ ಪಾರ್ಟನರ್ ಮಂಜುನಾಥ್ ಶೇಟ್ ಮಾತನಾಡಿ, ಶಿವಮೊಗ್ಗದ ಎರಡು ವರ್ಷಗಳ ವ್ಯವಹಾರದಲ್ಲಿ ಇಂಜಿನಿಯರ್‌, ಆರ್ಕಿಟೆಕ್ಟ್‌, ಬಿಲ್ಡರ್‌ಗಳ ಬೆಂಬಲ ಅಪಾರವಾಗಿದೆ. ಮುಂದೆಯೂ ಇದೇ ಸಹಕಾರ ಮುಂದುವರಿಯಲಿ ಎಂದು ಆಶಿಸಿ ಸಹಕಾರಕ್ಕೆ ಧನ್ಯವಾದ ತೀಳಿಸಿದರು ಈ ಸಂದರ್ಭದಲ್ಲಿ ಸಹೋದ್ಯೋಗಿಗಳಾದ ಅನಿಲ್, ವಿನಯ್ ಕುಲಕರ್ಣಿ ಹಾಗೂ ಯೋಗೇಶ್ ಹಾಜರೆ ಅವರನ್ನು ಅಭಿನಂದಿಸಿದರು.

Sathish munchemane

Join WhatsApp

Join Now

 

Read More