ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸಮಾಜದ ಬಗ್ಗೆ ಅಗೌರವ ಸಹಿಸುವುದಿಲ್ಲ: ವೀರಶೈವ-ಲಿಂಗಾಯತ ಮುಖಂಡರ ಖಡಕ್ ಎಚ್ಚರಿಕೆ.!?

On: January 18, 2026 1:56 AM
Follow Us:
---Advertisement---

ಶಿವಮೊಗ್ಗ :ವೀರಶೈವ–ಲಿಂಗಾಯತ ಸಮಾಜದ ಕುರಿತು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಾದಾತ್ಮಕ ಹೇಳಿಕೆಗಳು, ಕಾರ್ಯಕ್ರಮಗಳಲ್ಲಿ ವ್ಯಕ್ತವಾಗುತ್ತಿರುವ ಅಗೌರವದ ಮಾತುಗಳು ಹಾಗೂ ಸಮಾಜದ ಒಗ್ಗಟ್ಟಿಗೆ ಧಕ್ಕೆ ತರುವ ಪ್ರಯತ್ನಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಮಾಜದ ಹಿರಿಯರು, ಮುಖಂಡರು ಹಾಗೂ ಯುವ ನಾಯಕರು ಇಂದು ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಎಸ್.ಪಿ. ದಿನೇಶ್ ಅವರು, “ಇತ್ತೀಚೆಗೆ ಬಸವ ಸಂಸ್ಕೃತಿಯ ಹೆಸರಿನಲ್ಲಿ ನಡೆದ ಕೆಲ ಕಾರ್ಯಕ್ರಮಗಳಲ್ಲಿ ಕೆಲವು ಸ್ವಾಮೀಜಿಗಳು ಹಾಗೂ ಸಮಾಜದ ಕೆಲವರೇ ವಿರೋಧ ವ್ಯಕ್ತಪಡಿಸಿರುವುದು ನೋವು ತಂದಿದೆ. ಅದರಲ್ಲೂ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಬಗ್ಗೆ ಮಾತನಾಡಿರುವುದು ಸರಿಯಲ್ಲ” ಎಂದು ಆಕ್ಷೇಪಿಸಿದರು.

“ನಮ್ಮ ಸಮಾಜದಲ್ಲಿ ಯಡಿಯೂರಪ್ಪ, ಸಂಗಮೇಶ ಜ್ಯೋತಿ ಪ್ರಕಾಶ್, ರುದ್ರೆಗೌಡರು, ಆಯೂನುರು ಮಂಜುನಾಥ್, ಚಂದ್ರಶೇಖರಪ್ಪ ಸೇರಿದಂತೆ ಅನೇಕ ಹಿರಿಯರು,  ಹಾಗೂ ಮಠಾಧೀಶರು ಇದ್ದಾರೆ. ಇಂತಹ ವಿಚಾರಗಳಿಗೆ ಉತ್ತರ ನೀಡುವ ಶಕ್ತಿ ನಮ್ಮ ಸಮಾಜಕ್ಕಿದೆ” ಹಿಂದೆ ನಡೆದ ಒಂದು ಕಾರ್ಯಕ್ರಮದಲ್ಲಿ ವಳ ಪಂಗಡಗಳ ಬಗ್ಗೆ ಟಿಕಿಸಿದಾಗ ವಡ್ಡನಾಳ ರಾಜಣ್ಣ ಮೈಕ್ ಕಸಿದು ನೇರವಾಗಿ ಎಚ್ಚರಿಕೆ ನೀಡಿದ ಘಟನೆಗೆ ಅವರು ಉದಾಹರಣೆ ನೀಡಿ ಎಂದು ಅವರು ಸ್ಪಷ್ಟಪಡಿಸಿದ ಎದೇಗಾರಿಕೆ ಬಗ್ಗೆ ಸ್ಮರಿಸಿದರು.

ರಾಜಶೇಖರ್ ಹೆಚ್.ಕೆ ಮಾತನಾಡಿ   ನಾಳೆ ನಡೆಯುವ  ವಚನ ಗಾಯನ ಸ್ಪರ್ಧೆ ಕಾರ್ಯಕ್ರಮ ನೀಮಿತ ನಮ್ಮ ಸಮಾಜ ನಾಯಕರ  ಮನೆ ಮನೆ ಬೇಟಿ ಸಮಯದಲ್ಲಿ  ಕುವೆಂಪುರಂಗ ಮಂದಿರದ ಕಾರ್ಯಕ್ರಮದಲ್ಲಿ ಕೆ.ಎಸ್‌.ಈ ಅವರು ಮಾತು ಹಲವರು ಚರ್ಚೆಯ ಬಗ್ಗೆ ವಿಚಾರಿಸಿದರು ಅದರ ಬಗ್ಗೆ ಎಲ್ಲಾ ನಾಯಕರು ಖಂಡಿಸುವ ಬಗ್ಗೆ ನೀರ್ಣಯ ಬಗ್ಗೆ  ಸಭೆ ಕರೇಯಲು ಓಕ್ಕೂರಿಲಿನ ಅಭಿಮತ ವ್ಯಕ್ತಪಡಿಸಿದ ಸಲುವಾಗಿ ಈಂದಿನ ಈ ಸಭೆ ಎಂದರು.

ಸಭೆಯಲ್ಲಿ ಮಾತನಾಡಿದ ಡಿಚ್ಚಿ ಪ್ರಕಾಶ್, “ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ಅಥವಾ ರಾಜಕೀಯವಾಗಿ ಬೆಳೆಯಲಿ, ಆದರೆ ಸಮಾಜದ ಬಗ್ಗೆ ಅಗೌರವದ ಮಾತು ಬಂದಾಗ ಪ್ರತಿರೋಧಿಸುವ ಧೈರ್ಯ ಸಮಾಜದ ಪ್ರತಿಯೊಬ್ಬರಲ್ಲೂ ಬರಬೇಕು” ಎಂದರು. 

ಒ.ಬಿ.ಸಿ. ಮಾನ್ಯತೆ ಪ್ರಶ್ನೆಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

 “ನಮ್ಮ ಸಮಾಜದವರ ಫೋಟೋಗಳು ಪ್ಲೆಕ್ಸುಗಳು ಮತ್ತು ಆಹ್ವಾನ ಪತ್ರಿಕೆಯಲ್ಲಿ ಇದ್ದಾಗ ನೀವು ಯಾಕೆ ಸುಮ್ಮನಿದ್ದಿರಿ?” ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಸರ್ಕಾರದ ಮುಂದೆ ಒ.ಬಿ.ಸಿ. ಮಾನ್ಯತೆಗೆ ಒತ್ತಾಯಿಸಿದ್ದರೂ, ಇನ್ನೂ ವೀರಶೈವ–ಲಿಂಗಾಯತ ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಪೂರ್ಣ ಮಾನ್ಯತೆ ಸಿಗದಿರುವುದು ದುರಂತ ಎಂದು ಅಸಮಾಧಾನ ವ್ಯಕ್ತವಾಯಿತು.

ರುದ್ರೆಗೌಡರ ಸ್ಪಷ್ಟನೆ ಸಭೆಯಲ್ಲಿ ಮಾತನಾಡಿದ ರುದ್ರೆಗೌಡರು, “ನಮ್ಮ ಒಪ್ಪಿಗೆ ಇಲ್ಲದೇ ಪ್ಲೆಕ್ಸುಗಳಲ್ಲಿ ಫೋಟೋ ಹಾಕಿರುವುದು ತಪ್ಪು. ಶಿವಸಂಕಲ್ಪ ಕಾರ್ಯಕ್ರಮಕ್ಕೆ ಬರಲು ವಿಶ್ವಾಸ್ ಮತ್ತು ಮಹಾಲಿಂಗ ಶಾಸ್ತ್ರಿಗಳು ಮನೆಗೆ ಬಂದಾಗ ಸಹಜವಾಗಿ ಮಾತನಾಡಿದ್ದೇ ಹೊರತು ಒಪ್ಪಿಗೆ ನೀಡಿಲ್ಲ. ಪ್ಲೆಕ್ಸು ತೆಗೆಸುವಂತೆ ತಿಳಿಸಿದ್ದರೂ ತೆಗೆಸುವ  ಕ್ರಮವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈಶ್ವರಪ್ಪ ಅವರನ್ನು ವಿರೋಧಿಸುವವರು ಲಿಂಗಾಯತರು ಅಲ್ಲ ಎನ್ನುವ ಹೇಳಿಕೆ ತಪ್ಪು. ಧರ್ಮದಲ್ಲಿ ಜಾತಿ ಸೇರಿಸುವ ಅಗತ್ಯವಿಲ್ಲ” ಎಂದು ಅವರು ಹೇಳಿದರು.

ಹಿರಿಯ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ ಮಾತನಾಡಿ, ಶಿವಮೋಗ್ಗ ಇಷ್ಟು ಬೇಳೆಯಲು ನಾನು ಕಾರಣ ತುಂಗಾ ಡ್ಯಾಮನ ಹೈಟ್ ಎತ್ತರಕ್ಕೆ ಕಾರಣ ನಾನು,  ನನ್ನ ಹೆಂಡತಿ ನೇನಸಬೇಕು ಅವಳಿಗೆ ಕ್ಯಾನ್ಸರ್ ಇತ್ತು ಆದರು ನಾನು ಇರವಗಲೇ ಡ್ಯಾಮ್ ಪೋರ್ಣಗೋಳಿಸಲು ಹೇಳಿದಳು ಅದನ್ನು ಪೋರ್ಣಗೋಳಿಸಿದ್ದನೆ ಹಾಗಾಗಿ ಅದನ್ನು ನೇನಪಿಸುತ್ತೆನೆ. ಹಾಗು ಶಿವಮೊಗ್ಗದ ಜನತೆ ಹಾಗೂ ನಮ್ಮ ಸಮಾಜ ನೆನಸಬೇಕು ಬಸವಣ್ಣ ಪ್ರತಿಮೆ ತರಲು ನನ್ನ ಮಗ ಕಾರಣ ಈಶ್ವರಪ್ಪ ಆದರೆ ನನ್ನ ಮಗನಿಗೆ ಮಾತನಾಡಲು ಕಾರ್ಯಕ್ರಮದಲ್ಲಿ ಈಶ್ವರಪ್ಪ ಮೈಕ್ ನೀಡಲಿಲ್ಲ  ನಿಮ್ಮ ನಿಮ್ಮ ಧರ್ಮವನ್ನು ಕಾಪಡಿಕೋಳ್ಳಿ…

‎ಈಶ್ವರಪ್ಪ ಮೋದಲಸಲ ಗೆದ್ದಗಾ ಲಿಂಗಾಯತ ಅನ್ನುಕೊಂಡಿದ್ದರು ಆದರೂ ಮೆಚ್ಚ ಬೇಕು ವಿಭುತಿ  ಹೋಡೆದರೆ ಎಂತಾ ಮಳೆ ಬಂದರು ಹೋಗಲ್ಲ ಎಂದರು.

ಇತರೆ ಮುಖಂಡರ ಅಭಿಪ್ರಾಯ

ಡಾ. ದಿನೇಶ್ (ಡೆಂಟಲ್.)ಸಣ್ಣ ಸಣ್ಣ ಮೀನುಗಳ ಒಳ್ಳೆ ಪುಡ್ಡು ಹಾಕುತ್ತಾರೋ ಅಲ್ಲಿ ಹೋಗುವುದು ಸಹಜ ಹಾಗೆ ನಾವು ರಾಜಕೀಯ ನಾಯಕರು ನೀವು ಒಂದಗಾಬೇಕು ನೀವು  ಒಂದಾರೆ ನಾವು ನಮ್ಮ ಸಮಾಜದವರು ಒಟ್ಟಾಗಿ ಬರಲು ಸಾಧ್ಯ ಎಂದರು. 

ಹೆಚ್.ಸಿ. ಯೋಗೀಶ್ ಅವರು, “ಕೆ.ಎಸ್.ಇ. ಅವರ ಕಾರ್ಯಕ್ರಮಗಳಿಗೆ ಸಮಾಜದಿಂದ ದೇಣಿಗೆ ಹೋಗಿದೆ. ಮುಂದಿನ ನಡೆ ಬಗ್ಗೆ ನಾಯಕರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಹೇಳಿದರು.

ಆಯೂನುರು ಮಂಜುನಾಥ್. ಮಾತನಾಡಿ ಶಿವಸಂಕಲ್ಪದ ಇಬ್ಬರು ಸಭೆ ಮದ್ಯೆ ಅನಗತ್ಯ ಮಾತನಾಡಿ ಕೆ,ಎಸ್.ಈ. ಮನ್ನೆ ಕಾರ್ಯಕ್ರಮದಲ್ಲಿ ಲಿಂಗಾಯತರ ಬಗ್ಗೆ ಯಾವುದೇ  ಮಾತನಾಡಿಲ್ಲ ಎಂದು ಸಭೆಯಲ್ಲಿ ಗೋಂದಲದ ವತಾವಾರಣ ಸೃಷ್ಟಿಸಿದ್ದರು ಸಭೆಯಲ್ಲಿ ಗಲಾಟೆ ಮಾಡಿ ಅಂತಾ ಕಳಿಸಿದ್ದಿರಾ ಈವಕೆಲ್ಲಾ ಹೇದರಲ್ಲಾ ಎಂದರು  ಅದರೆ ಅದೆ ಸಭೆಯಲ್ಲಿ ಅವರು ಮಾತನಾಡಿದ ಆಡಿಯೋ ಮತ್ತು ವಿಡಿಯೋ ಪ್ರದರ್ಶಿಸಿ ಸ್ಪಷ್ಟ ಉತ್ತರ ನೀಡಿದರು ಹಾಗೆ ಕೆ.ಎಸ್.ಈ ಅವರು ಕುರಬ ಸಮಾಜದ ಸಂಘಟನೆ ಮಾಡಿ ಮಾತನಾಡಿದರೆ ನಾವು ಇವತ್ತು  ಮಾತನಾಡುವ ಸಂಭವ ಬರುತ್ತಿರಲಿಲ್ಲ ಇವರೆ ಸವೋಚ್ಚ ನಾಯಕ ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಯಾಗಿದ್ದಾಗ ಎನೂ ತೋಂದರೆ ನೀಡಿದ್ದಾರೆ ಎಂದು ನಮ್ಮ ಸಮಾಜಕ್ಕೆ ತಿಳಿದಿದೆ ಇವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಲಿಲ್ಲವಾ  ಅದು ರಾಜಕೀಯ ಈ ಸಮಯದಲ್ಲಿ ಬೇಡ ಎಂದರು

ಸಭೆಯ ಅಂತ್ಯದಲ್ಲಿ, ಸಮಾಜದ ಕುರಿತು ಅಗೌರವದ ಹೇಳಿಕೆಗಳು ಮುಂದುವರೆದರೆ ಸಂಘಟಿತವಾಗಿ ಪ್ರತಿಕ್ರಿಯೆ ನೀಡುವ ನಿರ್ಧಾರಕ್ಕೆ ಸಭೆ ಬಂದಿತು.

Sathish munchemane

Join WhatsApp

Join Now

 

Read More