Sunday, 15 November 2026 — ಸಾತ್ವಿಕ ನುಡಿ

ಸಾತ್ವಿಕ ನುಡಿ

ಕನ್ನಡ ಸುದ್ದಿ ಅಂತರ್ಜಾಲ

ಹೊಸ ಸುದ್ದಿ
ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ
ಜಿಲ್ಲಾ ಸುದ್ದಿ

ಸಾಮಾಜಿಕ ಸಾಮರಸ್ಯಕ್ಕಾಗಿ ಸಂಘ ನೂರು ವರ್ಷಗಳಿಂದಲೂ ಕೆಲಸ ಮಾಡಿದ್ದರೂ ಇನ್ನೂ ಅಸ್ಪಶ್ಯತೆ ಹೋಗಿಲ್ಲ!

Sathish munchemane
ವರದಿ: Sathish munchemane ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 14 ವೀಕ್ಷಣೆಗಳು

ಮಾತೃ ಭಾಷೆಯಲ್ಲಿ ಎಲ್ಲರೂ ವ್ಯವಹರಿಸುವುದು, ಸ್ವದೇಶಿ ವಸ್ತುಗಳ ಬಳಕೆ ಮಾಡುವುದು ಕಡ್ಡಾಯ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿತಿಪ್ಪೇಸ್ವಾಮಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಉತ್ಸವದ ಅಂಗವಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಆಕರ್ಷಕ ಪಥಸಂಚಲನ ಬಳಿಕ ಅಲ್ಲಮ ಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸಭೆಯನ್ನುದ್ದೇಶಿಸಿ  ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ  ಅವರು ಮಾತನಾಡಿದರು.

ಸಂಘ ಕಳೆದ ನೂರು ವರ್ಷಗಳಿಂದ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು, ಮುಂದೆ ಇನ್ನಷ್ಟು ಕಾರ್ಯಕ್ಷೇತ್ರದ ವಿಸ್ತರಣೆ ಮಾಡಲು ಸ್ವಯಂ ಸೇವಕರು ಸಮಯ ನೀಡುವಂತೆ ಸಂಘದ ಕ್ಷೇತ್ರೀಯ ಕಾರ್ಯವಾಹ ನಾತಿಪ್ಪೇಸ್ವಾಮಿ ಕರೆ ನೀಡಿದರು.

ಸಾಮಾಜಿಕ ಸಾಮರಸ್ಯಕ್ಕಾಗಿ ಸಂಘ ನೂರು ವರ್ಷಗಳಿಂದಲೂ ಕೆಲಸ ಮಾಡಿದ್ದರೂ ಇನ್ನೂ ಅಸ್ಪಶ್ಯತೆ ಹೋಗಿಲ್ಲ. ಮನೆಗಳಲ್ಲಿ, ಮಂದಿರಗಳಲ್ಲಿ, ಸ್ಮಶಾನಗಳಲ್ಲಿ ಸಾಮರಸ್ಯ ತರಲು ಎಲ್ಲರೂ ಶ್ರಮಿಸಬೇಕಿದೆ. ದೇಶದ ಪ್ರಗತಿಗೆ ಪೂರಕವಾಗಿ ಮಾತೃ ಭಾಷೆಯಲ್ಲಿ ಎಲ್ಲರೂ ವ್ಯವಹರಿಸುವುದು, ಸ್ವದೇಶಿ ವಸ್ತುಗಳ ಬಳಕೆ ಮಾಡುವುದು ಕಡ್ಡಾಯ ಮಾಡಬೇಕೆಂದು ಹೇಳಿದರು.

ನಾಗರಿಕ ಸಂಹಿತೆ ಬೆಳೆಸಲು ಮುಂದಾಗಬೇಕಿದೆ. ಹಿರಿಯರಿಗೆ ಗೌರವ ನೀಡಬೇಕು. ಕಾನೂನು ಪಾಲನೆ ಕಟ್ಟುನಿಟ್ಟಾಗಿ ಮಾಡಬೇಕು. ಅದರಲ್ಲೂ ವಾಹನ ಚಾಲನೆ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಬೇಕು. ಪಂಚಪರಿವರ್ತನೆಗೆ ಎಲ್ಲರೂ ಗಮನ ನೀಡಬೇಕಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಪ್ರಾಂತದ ಎ ಮಂಡಲದಲ್ಲೂ ಹಿಂದು ಸಮಾವೇಶ ನಡೆಸಬೇಕು. ಜಿಲ್ಲಾ ಪ್ರಮುಖರನ್ನು ಸೇರಿಸಿ ಕಾರ್ಯಕ್ರಮ ಮಾಡಬೇಕಿದೆ. ತಾಲ್ಲೂಕು ಮಟ್ಟದಲ್ಲಿಯೂ ಜಾಗೃತಿ ಕಾರ್ಯಕ್ರಮ ಮಾಡಬೇಕಿದೆ ಎಂದರು.

ಸಂಘಕ್ಕೆ ನೂರು ವರ್ಷ ತುಂಬಿ ನೂರ ಒಂದನೆ ವರ್ಷಕ್ಕೆ ಕಾಲಿಟ್ಟಿದೆ. ಅನೇಕರು ನೂರು ವರ್ಷದಲ್ಲಿ ಸಂಘ ಏನು ಮಾಡಿದೆ ಎಂದು ಕೇಳುವವರಿದ್ದಾರೆ. ಇಂದು ಹಿಂದು ಸಮಾಜ ಜಾಗೃತವಾಗಿದೆ. ಹಿಂದೂ ಎಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ. ವಿಶ್ವಾಸ, ನಂಬಿಕೆಯನ್ನು ಹೆಚ್ಚಿಸುವಲ್ಲಿ ಸಂಘ ಕೆಲಸ ಮಾಡಿದೆ.

ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ ದೇಶಕ್ಕೆ ಇಬ್ಬರು ಪ್ರಧಾನ ಮಂತ್ರಿಗಳನ್ನು ನೀಡಿದೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳನ್ನು ನೀಡಿದೆ. ವನವಾಸಿಗಳನ್ನು ಸಂಘಟಿಸಿ ಅವರ ಏಳಿಗೆಗೆ ಶ್ರಮಿಸುತ್ತಿದೆ.

ವಿಕಲಚೇತನರಿಗೆ ಬೇಕಾದ ಸೌಲಭ್ಯಗಳನ್ನು ಕೊಡುತ್ತಿದೆ.ಹೀಗೆ ಅನೇಕಸ್ತರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂಘದ ಸಾಧನೆ ಎಂದರು.

ಹಿಂದು ಸಂಘಟಿತನಾಗಬಲ್ಲ. ಒಂದು ವಿಚಾರಕ್ಕಾಗಿ ಕೆಲಸ ಮಾಡಬಲ್ಲ ಎಂಬುದನ್ನು ತೋರಿಸಲಾಗಿದೆ.

ಸಂಘ ನೂರು ವರ್ಷದಲ್ಲಿ ಎರಡಾಗಿಲ್ಲ. ಸ್ವಯಂ ಸೇವಕರು ದೇಶ ಮೊದಲು ಎಂಬ ನಿಸ್ವಾರ್ಥ ಭಾವನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಪತ್ತು, ವಿಪತ್ತು, ಯುದ್ಧ ಬಂದಾಗ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ನಗರ, ಗ್ರಾಮ, ಗುಡ್ಡಗಾಡು  ಪ್ರದೇಶದಲ್ಲಿಯೂ ಕೂಡ ಗಣವೇಷ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ವೇದಿಕೆಯಲ್ಲಿ ಶಿವಮೊಗ್ಗ ವಿಭಾಗ ಸಂಘಚಾಲಕ ದಿನೇಶ್ ಭಾರತೀಪುರ, ಜಿ ಸಂಘಚಾಲಕ ಬಿ.ಎ. ರಂಗನಾಥ್, ನಗರ ಸಂಘಚಾಲಕ ಲೋಕೇಶ್ವರರಾವ್ ಕಾಳೆ, ಪ್ರಾಂತ ಘೋಷ್ ಪ್ರಮುಖ ಗಿರೀಶ್, ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ, ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ವಿಭಾಗ ಸಹ ಕಾರ್ಯವಾಹ ಮಧುಕರ, ವಿಭಾಗ ಪ್ರಚಾರಕ ಭರತ್‌ರಾಜ್, ಜಿಲ್ಲಾ ಕಾರ್ಯವಾಹ ಚೇತನ, ಜಿಲ್ಲಾ ಪ್ರಚಾರಕ ವೀರೇಶ್, ನಗರ ಕಾರ್ಯವಾಹ ವರುಣ್, ನಗರ ಸಹ ಕಾರ್ಯವಾಹ ಕಿರಣ್ ಕಾಂಬ್ಳೆ ಇದ್ದರು.

ರಾಜಕೀಯ ಪ್ರಮುಖರದ ಸಂಸದ ಬಿ ವೈ ರಾಘವೇಂದ್ರ.ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ.ಶಾಸಕ ಚೆನ್ನಿ. ಡಿಎಸ್ ಅರುಣ್. ಧನಂಜಯ್ ಸರ್ಜಿ. ಪ್ರಮುಖರಾದ ಸಿದ್ದ ರಾಮಣ್ಣ.ಗಿರೀಶ್ ಪಟೇಲ್.ಪಟ್ಟಾಭಿರಾಮ್. ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ಮುಖ್ಯ ಸಂಪಾದಕರು (Chief Editor) ✍️ 736 ಲೇಖನಗಳು

Sathish munchemane

Sathish munchemane ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment