ಬಳ್ಳಿಕೆರೆ ಸಂತೋಷ್ ಜನ್ಮದಿನದ ಅಂಗವಾಗಿ ಅವಿನಾಶ್ ಬಿದರೆ ನೇತೃತ್ವದಲ್ಲಿ ಅನ್ನಸಂತರ್ಪಣೆ
ಬಳ್ಳಿಕೆರೆ ಸಂತೋಷ್ ಅವರ ಜನ್ಮದಿನದ ಅಂಗವಾಗಿ ಅವರ ಆತ್ಮೀಯ ಸ್ನೇಹಿತ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ, ಹೊಟೆಲ್ ದೇಶಿಯ ದಶಿ೯ನಿ ಮಾಲಿಕರು ಅವಿನಾಶ್ ಬಿದರೆ ಅವರು ಶಿವಮೊಗ್ಗ ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಿ ಸುಮಾರು 600 ಮಂದಿಗೆ ಅನ್ನಸಂತರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬಿಳಕಿ ರಾಚೋಟೇಶ್ವರ ಸ್ವಾಮಿಗಳು ಉಪಸ್ಥಿತರಿದ್ದು, ಅನ್ನದಾಸೋಹಕ್ಕೆ ಶುಭ ಹಾರೈಸಿದರು. ಹುಟ್ಟುಹಬ್ಬವನ್ನು ಸಮಾಜಮುಖಿ ಸೇವೆಯ ಮೂಲಕ ಆಚರಿಸುವುದು ಇತರರಿಗೂ ಪ್ರೇರಣೆಯಾಗಲಿದೆ ಎಂಬ ಸಂದೇಶ ಈ ಕಾರ್ಯಕ್ರಮದ ಮೂಲಕ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಿಕೆರೆ ಸಂತೋಷ್, “ನನ್ನ ಜನ್ಮದಿನದ ಪ್ರಯುಕ್ತ ಗುಡ್ ಲಕ್ ಆರೋಗ್ಯ ಕೇಂದ್ರದಲ್ಲಿ ಸುಮಾರು 50 ಜನರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನವೀನ್ ವಾರದ್ ಅವರು ನಗರದ ಎನ್.ಡಿ.ವಿ. ಹಾಸ್ಟೆಲ್ ಹಿಂಭಾಗದಲ್ಲಿರುವ ಚೌಕಿಮಠದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ ನೆರವೇರಿಸಿದ್ದರು. ಬಳಿಕ ಸ್ಟೇಡಿಯಂ ಗೆಳೆಯರ ಬಳಗದ ಸ್ನೇಹಿತರು ಹಾಗೂ ಹಿತೈಷಿಗಳು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು,” ಎಂದರು.
“ನನ್ನ ಸ್ನೇಹಿತ ಎನ್ನುವುದಕ್ಕಿಂತಲೂ ತಮ್ಮನಂತಿರುವ ಅವಿನಾಶ್ ಬಿದರೆ ಅವರು ನನ್ನ ಜನ್ಮದಿನದ ಪ್ರಯುಕ್ತ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಅನ್ನದಾಸೋಹ ಏರ್ಪಡಿಸಿ ಸುಮಾರು 600 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅವರ ಈ ಸೇವೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಬೆಳಗ್ಗೆಯಿಂದಲೂ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ನನ್ನ ಎಲ್ಲ ಸ್ನೇಹಿತರು, ಬಳಗದವರು ಹಾಗೂ ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ,” ಎಂದು ಸಂತೋಷ್ ಹೇಳಿದರು.
ಕಾರ್ಯಕ್ರಮದಲ್ಲಿ ಅವಿನಾಶ್ ಬಿದರೆ, ಮಲ್ಲಿಕಾರ್ಜುನ ಸ್ವಾಮಿ, ಉಮಾಶಂಕರ, ದೀಪು, ಸತೀಶ್ ಕುಮಾರ್ ಶೆಟ್ಟಿ, ಸತ್ಯನಾರಾಯಣ, ಮುರಳಿ, ವೀರಣ್ಣ ಗೌಡ, ಚಂದ್ರಕಾಂತ್, ಲಿಂಗರಾಜು, ಮೋಹನ್, ಮಾಜಿ ಪಾಲಿಕೆ ಸದಸ್ಯ ಮೂರ್ತಿ, ಶಿವಲಿಂಗ, ಜಗದೀಶ್, ಹರೀಶ್ ಸೇರಿದಂತೆ ಹಲವು ಸ್ನೇಹಿತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.





