- ಶಿವಮೊಗ್ಗ: ಕೊನೆಗೂ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಯ್ಡ್ (Pre Paid) ಆಟೋ ವ್ಯವಸ್ಥೆ ಜಾರಿಗೆ ಬಂದಿದೆ. ಯದ್ವ ತದ್ವ ಹಣ ವಸೂಲಿ ಮಾಡುತ್ತಿದ್ದ ಕೆಲವು ಆಟೋ ಚಾಲಕರಿಗೆ ಮೂಗು ದಾರ ಬಿದ್ದಂತಾಗಿದೆ. ಪೊಲೀಸರ ಈ ಕ್ರಮದಿಂದಾಗಿ ಸದ್ಯ ನಾಗರಿಕರು ನಿರಾಳ ವಾಗಿದ್ದಾರೆ.

ಪ್ರೀ ಪೇಯ್ಡ್ ಆಟೋ ವ್ಯವಸ್ಥೆಗೆ ಬಹು ವರ್ಷದಿಂದ ಬೇಡಿಕೆ ಇತ್ತು. ಈಗ ಈ ವ್ಯವಸ್ಥೆ ಜಾರಿಗೆ ಬಂದಿದ್ದು ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಪ್ರಯಾಣಿಕರು ಸೀದ ಈ ಕೌಂಟರ್‌ಗಳತ್ತ ಆಗಮಿಸಿ ರಶೀದಿ ಪಡೆದು ಖುಷಿಯಿಂದ ಆಟೋ ಹತ್ತುತ್ತಿದ್ದಾರೆ.
ಹೇಗಿದೆ ಪ್ರೀ ಆಟೋ ವ್ಯವಸ್ಥೆ?
ರೈಲ್ವೆ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ತೆರಳಲು ಆಟೋ ಚಾಲಕರು ನಿಗದಿಗಿಂತಲು ಹೆಚ್ಚು ಹಣ ಪಡೆಯುತ್ತಿದ್ದರು. ಲಗೇಜು, ಕುಟುಂಬ ಸಹಿತ ಬಂದವರು, ತುರ್ತು ತೆರಳಬೇಕಿರುವವರು ಅನಿವಾರ್ಯವಾಗಿ ದುಬಾರಿ ಹಣ ಕೊಟ್ಟು ಆಟೋ ಹತ್ತುವಂತಾಗಿತ್ತು. ಹಾಗಾಗಿಯೆ ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಮಾಡುವಂತೆ ಬಹು ವರ್ಷದಿಂದ ಸಾರ್ಜನಿಕರು ಬೇಡಿಕೆ ಇಡುತ್ತಿದ್ದರು.
- ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡು ಬದಿಯಲ್ಲಿ ಪ್ರೀ ಪೇಯ್ಡ್ ಆಟೋ ಕೌಂಟರ್ ಆರಂಭಿಸಲಾಗಿದೆ. ಪ್ರಯಾಣಿಕರು ರೈಲು ಇಳಿದು ಈ ಕೌಂಟರ್‌ಗಳಿಗೆ ತೆರಳಿ ರಶೀದಿ ಪಡೆಯಬಹುದು.
ಸದ್ಯ ರಶೀದಿ ನೀಡಲು ಹೋಂ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರು ಪ್ರೀ ಪೇಯ್ಡ್ ಕೌಂಟರ್‌ಗೆ ತೆರಳಿ ತಾವು ತೆರಳಬೇಕಿರುವ ಸ್ಥಳದ ಹೆಸರು ತಿಳಿಸಬೇಕು.
ಹೋಂ ಗಾರ್ಡ್ ಸಿಬ್ಬಂದಿ ರಶೀದಿ ನೀಡಲಿದ್ದಾರೆ. ಅದರಲ್ಲಿ ನಿಗದಿತ ಮೊತ್ತ ಮುದ್ರಿತವಾಗಿರಲಿದೆ. ಆಟೋ ಇಳಿಯುವಾಗ ಅಷ್ಟು ಮೊತ್ತವನ್ನು ನೀಡಬೇಕು. ಆಟೋ ಚಾಲಕರು ನಿಗದಿಗಿಂತಲು ಹೆಚ್ಚು ಹಣ ಕೇಳಿದರೆ ಕಂಟ್ರೋಲ್ ರೂಂ ನಂಬರ್‌ಗೆ ಕರೆ ಮಾಡಬಹುದಾಗಿದೆ.
ಈ ಮೊದಲು ರೈಲ್ವೆ ನಿಲ್ದಾಣದ ಮುಂಭಾಗ ಯದ್ವತದ್ವ ಆಟೋ ನಿಲ್ಲಿಸಿ ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಲಾಗುತ್ತಿತ್ತು. ಈಗ ಅದೆಲ್ಲಕ್ಕದಕ್ಕು ಬ್ರೇಕ್ ಬಿದ್ದಿದೆ. ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಜಾರಿಗೊಳಿಸಿ ಮನಸೋಯಿಚ್ಛೆ ಹಣ ವಸೂಲಿಗು ಪೊಲೀಸರು ಬ್ರೇಕ್ ಹಾಕಿದ್ದಾರೆ.
ಇದೇ ರೀತಿಯೆ ಶಿವಮೊಗ್ಗದ ಕೆ.ಎಸ್. ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಇರುವ ಬಸ್ ನಿಲ್ದಾದ ಎದುರು ಇರುವ ಆಟೋ ನಿಲ್ದಾಣ ಸಮಸ್ಯೆ ಇದರ ಹೊರತಾಗಿ ಇಲ್ಲ ಇಲ್ಲೂ ಪ್ರೀ ಪೇಯ್ಡ್ ಕೌಂಟರ್ ತೆರಯಬೇಕು ಇಲ್ಲೂ ಸಹಾ ರಾತ್ರಿ ಸಮಯದಲ್ಲಿ ಬರುವ ಪ್ರಯಾಣಿಕರಿಂದ ಆಟೊ ಚಾಲಕರ ಮನೋಸ್ಸೋ ಇಚ್ಚೆ ಹಣ ಪಿಕುತ್ತಿದ್ದಾರೆ ಅದರಲ್ಲೂ ಬೆಳಗಿನ ಜಾವ ಇವರು ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದರೆ ಮುಂದೆ ಹೊಗಿ ಆಟೊ ಹತ್ತಲು ಬಿಡುವುದಿಲ್ಲ ಜಗಳಕ್ಕೆ ಇಳಿಯುತ್ತಾರೆ ಪ್ರಯಾಣಿಕರು ಕುಟುಂಬದ ಹೆಂಡತಿ ಮಕ್ಕಳು ಎದುರು ಜಗಳವೇಕೆ ಎಂದು ಕೇಳಿದಷ್ಟು ಹಣ ನೀಡಿ ಹೋಗುತ್ತಾರೆ ಅದರಲ್ಲೂ ವಯಸ್ಸುದವರ ಮೇಲು ಆಟೋದವರ ದಬ್ಬಾಳಿಕೆ ಜಗಳ ಸಕಾಷ್ಟು ಸಾಲ ಅದರು ಜಿಲ್ಲಾ ಡಳಿತದ ಗಮನಕ್ಕೂ ತಂದರು ಕ್ರಮವಯಿಸಿಲ್ಲ ಎಂಬುದು ಆರೋಪವಾಗಿದೆ ಇನ್ನಾದರು ಇಲ್ಲಿ ಪ್ರೀ ಪೇಯ್ಡ್ ಕೌಂಟರ್ ತೆರಯಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
 






