ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

‎ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷರ ಪದಗ್ರಹಣ.!

On: February 23, 2026 1:16 PM
Follow Us:
---Advertisement---

ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷರ ಪದಗ್ರಹಣ – ಕನ್ನಿಕಾ ಸಖಿಯರ ಸಂಘ ಉದ್ಘಾಟನೆ.

ಶಿವಮೊಗ್ಗ: ಭಾನುವಾರ ಫೆಬ್ರವರಿ 22ರಂದು ಶ್ರೀ ಕನಕ ಪರಮೇಶ್ವರಿ ದೇವಸ್ಥಾನ, ವಿನಾಯಕನಗರ, ಶಿವಮೊಗ್ಗದಲ್ಲಿ ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ನೂತನ ಕನ್ನಿಕಾ ಸಖಿಯರ ಸಂಘದ ಉದ್ಘಾಟನಾ ಸಮಾರಂಭ ಭವ್ಯವಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಸಿ.ಆರ್. ಶ್ರೀನಿವಾಸ್ ವಹಿಸಿದ್ದರು. ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭೆಯ ಮಾಜಿ ಅಧ್ಯಕ್ಷರಾದ ಎಸ್.ಎನ್. ಶಬರೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಉಪಯುಕ್ತರು, ಬೆಂಗಳೂರು, ಶ್ರೀಯುತ ಸುನಿಲ್ ಕುಮಾರ್ ಟಿ.ಕೆ ಹಾಗೂ ಗೌರವ ಉಪಸ್ಥಿತರಾಗಿ ಶಿವಮೊಗ್ಗದ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಭಾಗವಹಿಸಿದ್ದರು.
ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಎನ್. ಶ್ರೀನಾಗ ಅವರು ಅಧಿಕಾರ ಸ್ವೀಕರಿಸಿದರು.

ನೂತನ ಕನ್ನಿಕಾ ಸಖಿಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಶ್ವೇತಾ ಸಂದೀಪ್ ಅಧಿಕಾರ ವಹಿಸಿಕೊಂಡರು.

ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಟಿ.ಆರ್. ಅಶ್ವತ್ ನಾರಾಯಣ್ ಶೆಟ್ಟಿ ಹಾಗೂ ಶಾರದಾ ಗೋಪಾಲ್ ಅವರು ಸಂಘದ ಬ್ಯಾನರ್ ಅನಾವರಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯುವಜನ ಮಹಾಸಭಾ ಬೆಂಗಳೂರು ಗಿರಿನಾಡು ವಿಭಾಗದ ಕಾರ್ಯದರ್ಶಿ ಡಿ.ಎಂ. ಅರ್ಜುನ್, ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಬೆಂಗಳೂರು ನಿರ್ದೇಶಕ ನಿತಿನ್ ಕಸಲ್ ಸೇರಿದಂತೆ ಅನೇಕ ಗಣ್ಯರು, ಪದಾಧಿಕಾರಿಗಳು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More