ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ತಂಜಾವೂರು ಚನೈ, ಮಾದರಿ ಪಾರ್ಕಿಂಗ್ ಶಿವಮೊಗ್ಗದಲ್ಲಿ ಅವೈಜ್ಞಾನಿಕ ಮಲ್ಟಿ ಲೆವೆಲ್ ಪಾರ್ಕಿಂಗ್: ಜನತೆಯ ಆಕ್ರೋಶ.!

On: February 10, 2026 4:00 PM
Follow Us:
---Advertisement---

ತಮಿಳುನಾಡಿನ ತಂಜಾವೂರಿನಲ್ಲಿ ಕಡಿಮೆ ಸ್ಥಳದಲ್ಲಿ, ಸುಂದರ ವಿನ್ಯಾಸದಲ್ಲಿ, ವೈಜ್ಞಾನಿಕವಾಗಿ ನಿರ್ಮಿಸಲಾದ ಪಾರ್ಕ್-ಲೇಯರ್ (Multi Level) ಕಾರು ಪಾರ್ಕಿಂಗ್ ವ್ಯವಸ್ಥೆ ಇಂದು ಹಲವು ರಾಜ್ಯಗಳಿಗೆ ಮಾದರಿಯಾಗಿದೆ.

ಕಡಿಮೆ ಜಾಗ ಬಳಕೆ, ಸ್ಥಳ ಉಳಿತಾಯ, ಹಣ ಉಳಿತಾಯ ಮತ್ತು ವ್ಯವಸ್ಥಿತ ವಿನ್ಯಾಸದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲಾಗಿದೆ.

ಆದರೆ, ಇಂತಹ ಉತ್ತಮ ಮಾದರಿಗಳನ್ನು ಅನುಸರಿಸಬೇಕಾದ ಶಿವಮೊಗ್ಗ ನಗರದಲ್ಲಿ ಅಧಿಕಾರಿಗಳ ಅಸಮರ್ಥ ಯೋಜನೆಯಿಂದ ನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ತಿಯನ್ನು ಹಾಳುಮಾಡಿ, ಅವೈಜ್ಞಾನಿಕ ರೀತಿಯಲ್ಲಿ ಕಾರು ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆ ಮುಂಭಾಗ, ಬಿ.ಹೆಚ್. ರಸ್ತೆ ಪಕ್ಕದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗಿದೆ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ, 10 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ, ಮೂರು ಮಹಡಿಗಳಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ 172 ಕಾರುಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.

ಬಿ.ಹೆಚ್. ರಸ್ತೆ, ಗಾಂಧಿ ಬಜಾರ್ ಹಾಗೂ ನೆಹರು ರಸ್ತೆಯ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಶಿವಮೊಗ್ಗ ಜನತೆಯಲ್ಲಿ ಇತ್ತು. ಆದರೆ, ಇಲ್ಲಿ ವಿಧಿಸಿರುವ ಅತಿಯಾದ ಪಾರ್ಕಿಂಗ್ ಶುಲ್ಕ ಹಾಗೂ ಅಸೌಲಭ್ಯಕರ ವ್ಯವಸ್ಥೆ ಕಾರಣವಾಗಿ ನಾಗರಿಕರು ಈ ಪಾರ್ಕಿಂಗ್ ಕಟ್ಟಡದತ್ತ ಸುಳಿಯುವುದೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾದರಿಯಾಗಬೇಕಾದ ಶಿವಮೊಗ್ಗದಂತಹ ನಗರದಲ್ಲಿ ಇತರ ಮಹಾನಗರ ಪಾಲಿಕೆ ಸಂಕೀರ್ಣಗಳು ಪಾಳು ಬೀಳುತ್ತಿರುವುದು ಆತಂಕಕಾರಿ ಸಂಗತಿ. ಇದಕ್ಕೆ ಹೊಣೆಗಾರರಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರದ ಶಾಸಕರು, ಸಂಸದರು, ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಈ ವಿಷಯಕ್ಕೆ ಗಂಭೀರವಾಗಿ ಗಮನಹರಿಸಿ, ವೈಜ್ಞಾನಿಕ, ಜನೋಪಯೋಗಿ ಮತ್ತು ಜನಸ್ನೇಹಿ ಪಾರ್ಕಿಂಗ್ ವ್ಯವಸ್ಥೆ ರೂಪಿಸಬೇಕೆಂಬುದು ಶಿವಮೊಗ್ಗ ನಗರದ ಜನತೆಯ ಸ್ಪಷ್ಟ ಬೇಡಿಕೆಯಾಗಿದೆ.

Sathish munchemane

Join WhatsApp

Join Now

 

Read More