ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕನ್ನಡದಲ್ಲಿ ಬರೆದ “ಎದೆಯ ಹಣತೆ”  ಕೃತಿಯನ್ನು ಇಂಗ್ಲೀಷಿಗೆ ಅನುವಾದಿಸಿದ ಕಾರಣ ಅಂತರಾಷ್ಟ್ರೀಯ ಭೂಕರಪ್ರಶಸ್ತಿ.!

On: September 3, 2025 1:04 PM
Follow Us:
---Advertisement---

ದಸರಾ ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಹಬ್ಬ. ಇಲ್ಲಿ ನಂಬಿಕೆ, ನಡವಳಿಕೆ,ಸಂಪ್ರದಾಯ, ವೇಷಭೂಷಣ,ಪೂಜೆ ಎಲ್ಲವೂ ಇದೆ  ಹಿಂದೂ ಜೀವನ ಪದ್ಧತಿಯಲ್ಲಿರುವ ಬೇಧಗಳನ್ನು ಮರೆತು ಎಲ್ಲರೂ ದಸರಾ ಉತ್ಸವವನ್ನು ಮಾಡುತ್ತಾರೆ. ನಾಡ ಹಬ್ಬದ ವಿಷಯದಲ್ಲಿ ಸಹಿಷ್ಣುತೆ ಇದೆ. ಎಲ್ಲ ಕನ್ನಡಿಗರ ನಾಡಹಬ್ಬ ದಸರಾ.           ಆದರೆ ಆಚರಣೆಯಲ್ಲಿ ಅಸಹನೆ ಉಂಟಾಗಿದೆ. “ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ ” ಎಂದ ನಿಸಾರ್ ಅಹಮದ್ ಕನ್ನಡಪ್ರಜ್ಞೆ ಹೊಂದಿದವರು. ಈ ಹಿಂದೆ ಅರಿಶಿಣ,ಕುಂಕುಮ ಬಣ್ಣಗಳನ್ನು ವಿರೋಧಿಸಿ ಹಿಂದೂ ದೇವತೆಗಳ ಆಚರಣೆಯನ್ನು ಪ್ರಶ್ನಿಸಿದವರನ್ನು ಈ ಪವಿತ್ರ ಕಾರ್ಯಕ್ರಮದ ಉದ್ಘಾಟನೆಗೆ ಆಹ್ವಾನಿಸಿರುವುದು  ಯಾವ ನ್ಯಾಯ?            ಕನ್ನಡದಲ್ಲಿ ಬರೆದ “ಎದೆಯ ಹಣತೆ” ” ಕೃತಿಯನ್ನು ಇಂಗ್ಲೀಷಿಗೆ ಅನುವಾದಿಸಿದ ಕಾರಣ ಅಂತರಾಷ್ಟ್ರೀಯ ಭೂಕರ ಪ್ರಶಸ್ತಿ ಲಭಿಸಿತು. ಕಾರಣ ಭಾನು ಮುಷ್ತಾಕ್ ಅವರಿಗೆ ಉದ್ಘಾಟನಾ ಸಮಯದಲ್ಲಿ ಗೌರವ ಪೂರ್ವಕ ವಾಗಿ ಸನ್ಮಾನಿಸಿ, ಅನುವಾದಿಸಿದ ದೀಪಾ ಭಾಸ್ತಿ ಅವರಿಗೆ ಉದ್ಘಾಟನೆಯ ಅವಕಾಶ ಕೊಡುವುದು ಸೂಕ್ತ ಎನಿಸುವುದು.

ಹಿಂದೂಗಳ ಎದೆಯ ಹಣತೆ ದಸರೆಯ ಬೆಳಕಾಗಬೇಕು.—-           ಶ್ರೀ.ಚಿಕ್ಕಜೋಗಿಹಳ್ಳಿ ನಾಗರಾಜ ಕಲಾವಿದರು, ಲೇಖಕರು.ಹೊನ್ನಾಳಿ ಫೋನ್ ನಂಬರ್ 9449093902.

Join WhatsApp

Join Now

Join Telegram

Join Now