ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕೊನೆಗೂ ಜಿ.ಪಂ, ತಾ.ಪಂ ಚುನಾವಣೆಗೆ ಮುಹೂರ್ತ ಫಿಕ್ಸ್: ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಿದ ರಾಜ್ಯ ಸರ್ಕಾರ

On: October 8, 2026 9:36 AM
Follow Us:
---Advertisement---

ಕೊನೆಗೂ ಹಲವು ವರ್ಷಗಳಿಂದ ಬಾಕಿ ಇದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸುವ ಮೂಲಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಅಕ್ಟೋಬರ್ 6 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು. 2027 ರ ಜನವರಿ ಮೊದಲ ವಾರದಲ್ಲಿ ಚುವಾವಣೆ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಿದ್ದು, ಮಹಿಳೆಯರಿಗೆ ಶೇ.50 ರಷ್ಟು ಸ್ಥಾನ ನೀಡಲಾಗಿದೆ.

ರಾಜ್ಯದಲ್ಲಿ ಒಟ್ಟು 31 ಜಿಲ್ಲೆಗಳ 1,129 ಜಿಲ್ಲಾ ಪಂಚಾಯಿತಿ ಸ್ಥಾನ ಹಾಗೂ 3,656 ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಬುಧವಾರ ಅಧಿಕೃತ ಕರಡು ಅಧಿಸೂಚನೆ ಹೊರಡಿಸಿದೆ.

ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನ:

ರಾಜ್ಯದಲ್ಲಿ 31 ಜಿಲ್ಲೆಗಳಿಂದ ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು, ಈ ಪೈಕಿ ಎಸ್‌ಸಿ, ಎಸ್‌ಟಿ, ಹಿಂದೂಳಿದ ವರ್ಗ ಎ, ಬಿ ವರ್ಗವಾರು ಮೀಸಲಾತಿ ಪ್ರಕಟಿಸಿದೆ. ಪರಿಶಿಷ್ಟ ಜಾತಿ 225, ಪರಿಶಿಷ್ಟ ಪಂಗಡಕ್ಕೆ 102 ಸ್ಥಾನ ಮೀಸಲಿಡಲಾಗಿದೆ. ಇನ್ನು ಹಿಂದುಳಿದ ವರ್ಗ ಎ-183, ಹಿಂದುಳಿದ ವರ್ಗ ಬಿ-43 ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳನ್ನು ನಿಗಧಿಪಡಿಸಲಾಗಿದೆ.

ತಾಲೂಕು ಪಂಚಾಯಿತಿಗೂ ಮೀಸಲಾತಿ ಪ್ರಕಟ

ರಾಜ್ಯದಲ್ಲಿ ಒಟ್ಟು 3,656 ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳಿವೆ. ಈ ಪೈಕಿ ಪರಿಶಿಷ್ಟ ಜಾತಿಗೆ 733, ಪರಿಶಿಷ್ಟ ಪಂಗಡಕ್ಕೆ 394 ಸ್ಥಾನ ಮೀಸಲಿಡಲಾಗಿದೆ. ಹಾಗೇ ಹಿಂದುಳಿದ ವರ್ಗ ಅ-508, ಹಿಂದುಳಿದ ವರ್ಗ ಬ-111 ಸ್ಥಾನ, ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳು ಮೀಸಲಿಡಲಾಗಿದೆ.

ಒಟ್ಟಾರೆ ಅವಧಿ ಮುಗಿದು 6 ವರ್ಷಗಳ ನಂತರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಭರವಸೆ ಮೂಡಿದ್ದು, ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಚುನಾವಣಾ ಕಾವು ನಿಧಾನಕ್ಕೆ ಏರಲಿದೆ.

ಮಹಿಳೆಯರಿಗೆ ಶೆ.50 ಮೀಸಲು ಒಟ್ಟು ಸ್ಥಾನಗಳ ಪೈಕಿ ಎಲ್ಲಾ ವರ್ಗದಿಮದಲೂ ಸೇರಿ ಮಹಿಳೆಯರಿಗೆ ಶೇ.50 ಸ್ಥಾನ ಮೀಸಲಿರಿಸಲಾಗಿದೆ. 1,129 ಜಿಲ್ಲಾ ಪಾಂಚಾಯತಿ ಸ್ಥಾನಗಳ ಪೈಕಿ ಅರ್ಧದಷ್ಟು ಅಂದರೆ 571 ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗಿದೆ. 3,656 ತಾಲೂಕು ಪಂಚಾಯತಿ ಸ್ಥಾನಗಳ ಪೈಕಿ ಶೇ.50 ರಷ್ಟು ಅಂದರೆ 1,905 ಮಹಿಳೆಯರಿಗೆ ನಿಗಧಿಪಡಿಸಲಾಗಿದೆ.

2027 ಜನವರಿ ಮೊದಲ ವಾರದಲ್ಲೇ ಎಲೆಕ್ಷನ್

ಸ್ಥಳೀಯ ಆಡಳಿವಾದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬಗ್ಗೆ ಮಂಗಳವಾರದ ನಡೆದಿದ್ದ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಜನವರಿ ಮೊದಲ ವಾರದಲ್ಲಿ ಅಂದರೆ ಜನವರಿ 15ರೊಳಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಾಗಿ ಮತಪೆಟ್ಟಿಗೆಗಳನ್ನು ಬಳಸಲು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಈ ಬಾರಿ ನಡೆಯುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಇವಿಎಂ ಮಷಿನ್‌ ಬದಲಾಗಿ ಬ್ಯಾಲೆಟ್ ಪೇಪರ್‌ ಬಳಕೆಯಾಗಲಿದೆ.

ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆ: ಶೇ.50ಕ್ಕೂ ಹೆಚ್ಚು ಸ್ಥಾನಗಳು ಮಹಿಳೆಯರಿಗೆ ಮೀಸಲುಯ ,656 ಸದಸ್ಯ ಸ್ಥಾನಗಳನ್ನ ನಿಗದಿಪಡಿಸಲಾಗಿದೆ. ಈ ಪೈಕಿ 1,905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹೀಗಾಗಿ ತಾಲೂಕು ಪಂಚಾಯಿತಿ ಹಂತದಲ್ಲಿಯೂ ಮಹಿಳೆಯರಿಗೆ ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳು ಮೀಸಲಾಗಿವೆ. ತಾಲೂಕು ಪಂಚಾಯಿತಿಯ 3,656 ಸ್ಥಾನಗಳ ವರ್ಗವಾರು ಹಂಚಿಕೆ ಹೀಗಿದೆ:

ವರ್ಗ ಒಟ್ಟು ಸ್ಥಾನ ಮಹಿಳೆಯರಿಗೆ ಮೀಸಲು
ಪರಿಶಿಷ್ಟ ಜಾತಿ (SC) 733 429
ಪರಿಶಿಷ್ಟ ಪಂಗಡ (ST) 394 287
ಹಿಂದುಳಿದ ವರ್ಗ-A 508 306
ಹಿಂದುಳಿದ ವರ್ಗ-B 111 64
ಸಾಮಾನ್ಯ ವರ್ಗ 1,910 819
ಒಟ್ಟು 3,656 1,905

ಈ ಅಂಕಿ-ಅಂಶಗಳು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ವಿವಿಧ ಸಾಮಾಜಿಕ ವರ್ಗಗಳ ಜೊತೆಗೆ ಮಹಿಳೆಯರಿಗೂ ದೊಡ್ಡ ಪ್ರಮಾಣದ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಎಂಬುದನ್ನ ತೋರಿಸುತ್ತವೆ.

ಮಹಿಳೆಯರಿಗೆ 50% ಮೀಸಲಾತಿಯ ಹಿನ್ನೆಲೆ ಏನು?

ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಕಾನೂನುಬದ್ಧ ವ್ಯವಸ್ಥೆ ಇದೆ. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವೂ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ, 2010ರ ಅಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಒದಗಿಸಿರುವುದನ್ನ ದಾಖಲಿಸಿದೆ. ತಾಲೂಕು ಪಂಚಾಯಿತಿ ಮೀಸಲಾತಿಗೆ ಸಂಬಂಧಿಸಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಸೆಕ್ಷನ್ 123ರಲ್ಲೂ ಮಹಿಳೆಯರಿಗೆ ಮೀಸಲಾತಿ ಹಾಗೂ ಕ್ಷೇತ್ರಗಳ ರೋಟೇಷನ್‌ಗೆ ಸಂಬಂಧಿಸಿದ ನಿಯಮಗಳಿವೆ. ವಿವಿಧ ವರ್ಗಗಳಿಗೆ ಮೀಸಲಾದ ಸ್ಥಾನಗಳಲ್ಲಿಯೂ ಮಹಿಳೆಯರಿಗೆ ಕನಿಷ್ಠ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಇದೆ. ಮೀಸಲಾತಿಯನ್ನ ವಿವಿಧ ಕ್ಷೇತ್ರಗಳಿಗೆ ರೋಟೇಷನ್ ಆಧಾರದ ಮೇಲೆ ಹಂಚಿಕೆ ಮಾಡುವ ವ್ಯವಸ್ಥೆಯೂ ಕಾನೂನಿನಲ್ಲಿ ಇದೆ. ಹೀಗಾಗಿ ಒಂದು ಚುನಾವಣೆಯಲ್ಲಿ ನಿರ್ದಿಷ್ಟ ವರ್ಗ ಅಥವಾ ಮಹಿಳೆಯರಿಗೆ ಮೀಸಲಾಗಿರುವ ಕ್ಷೇತ್ರ ಮುಂದಿನ ಚುನಾವಣೆಯಲ್ಲೂ ಅದೇ ವರ್ಗಕ್ಕೆ ಮೀಸಲಾಗಿರಬೇಕು ಎಂಬ ನಿಯಮವಿಲ್ಲ.

ಚುನಾವಣೆಗೆ ದಾರಿ ಸುಗಮ

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಮೀಸಲಾತಿ ಅಂತಿಮಗೊಳಿಸಿರುವುದು ಚುನಾವಣಾ ಪ್ರಕ್ರಿಯೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಮುಂದೆ ಸರ್ಕಾರವು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ವಾರ್ಡ್ ರಚನೆ ಮತ್ತು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿತ್ತು. ಇದೀಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಅಧಿಸೂಚನೆಯೂ ಪ್ರಕಟವಾಗಿರುವುದರಿಂದ ಮುಂದಿನ ಹಂತದ ಚುನಾವಣಾ ಪ್ರಕ್ರಿಯೆಗೆ ದಾರಿ ಮತ್ತಷ್ಟು ಸುಗಮವಾಗಿದೆ. ಇತ್ತೀಚೆಗೆ ಸಚಿವ ಬಸವರಾಜ ರಾಯರೆಡ್ಡಿ ಅವರು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಡಿಸೆಂಬರ್‌ ವೇಳೆಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಆದರೆ ಚುನಾವಣೆಯ ಅಧಿಕೃತ ದಿನಾಂಕವನ್ನ ರಾಜ್ಯ ಚುನಾವಣಾ ಆಯೋಗವೇ ಪ್ರಕಟಿಸಬೇಸರ್ಕರ.

Sathish munchemane

Join WhatsApp

Join Now

 

Read More

Leave a Comment