ಮೋದಲನೆ ಮೀಟಿಂಗ್ನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನವನ್ನು 16 ಆಗಸ್ಟ್ ರಂದು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಬಿ.ಜೆ.ಪಿ. ಪ್ರಮುಖರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿ, ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಚರ್ಚಿಸಿ ರೂಪರೇಷೆಗಳನ್ನು ಅಂತಿಮಗೊಳಿಸಿದರು. ಕಾರ್ಯಡಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು. ಜೊತೆಗೆ, ಸಾರ್ವಜನಿಕರ ಭಾಗವಹಿಸುವಿಕೆ, ಸೇವಾ ಚಟುವಟಿಕೆಗಳು ಹಾಗೂ ಕಾರ್ಯಕ್ರಮದ ವ್ಯವಸ್ಥೆಗಳ ಕುರಿತು ಸಲಹೆ–ಸೂಚನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಸಭೆಯಲ್ಲಿ ದೀನದಯಾಳು, ಜಗದೀಶ್, ಮಾಲತೇಶ್, ದಿವಾಕರ ಶೆಟ್ಟರ್, ಸಂತೋಷ ಬಳ್ಳಕೆರೆ, ನಾಗರಾಜ್ ತಮ್ಮಡಿಹಳ್ಳಿ, ಸಮನ್ವಯ ಕಾಶಿ, ಅಬ್ದುಲ್ ಘನ್ನಿ, ಎನ್. ಮಹೇಶ್, ವೀರಭದ್ರಪ್ಪ ಪೂಜಾರಿ, ಹೆಚ್.ಕೆ. ರಾಜಶೇಖರ, ಸಂತೋಷ ಹೋಳಲೂರು, ಟಿ.ಬಿ. ಜಗದೀಶ್, ಪ್ರಭಾಕರ್ ಸೇರಿದಂತೆ ಹಲವು ಬಿ.ಜೆ.ಪಿ. ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯ ಅಂತ್ಯದಲ್ಲಿ ಜನ್ಮದಿನದ ಅಂಗವಾಗಿ ಸಮಾಜಕ್ಕೆ ಉಪಯುಕ್ತವಾಗುವ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಣೆಯನ್ನು ಅರ್ಥಪೂರ್ಣವಾಗಿಸಲು ಎಲ್ಲರೂ ಒಮ್ಮತ ವ್ಯಕ್ತಪಡಿಸಿದರು.








