ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಮಂಡ್ಲಿಯ ಸರ್ಕಾರಿ ಶಾಲೆ ಮಕ್ಕಳು: ಶಿಕ್ಷಣ ಸಚಿವರೇ ಇತ್ತ ಗಮನಿಸಿ
ಶಿವಮೊಗ್ಗ: ಶಿಕ್ಷಣ ಸಚಿವರ ತವರು ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲೇ ಸರ್ಕಾರಿ ಶಾಲೆಯ ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಮರದ ಕೆಳಗೆ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಹೌದು! ಇಲ್ಲಿನ ಎನ್.ಟಿ.ರಸ್ತೆಯ ನ್ಯೂ ಮಂಡ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಯಾವ ಕುಗ್ರಾಮದ ಸರ್ಕಾರಿ ಶಾಲೆಗಳಿಗಿಂತ ಕಡೆಯಾಗಿದೆ. ಶಾಲೆಯಲ್ಲಿ ಶಿಕ್ಷಕರಿದ್ದಾರೆ, ಅದಕ್ಕೆ ತಕ್ಕಂತೆ ಮಕ್ಕಳೂ ಇದ್ದಾರೆ. ಆದರೆ, ಮಕ್ಕಳಿಗೆ ಪಾಠ ಮಾಡಲು ಕೊಠಡಿಗಳೇ ಇಲ್ಲ! ಹತ್ತಾರು ವರ್ಷಗಳಿಂದ ಶಿಥಿಲಗೊಂಡ ಕಟ್ಟಡದಲ್ಲೆ ಶಾಲೆ ನಡೆಯುತ್ತಿತ್ತು. 3-4 ವರ್ಷಗಳಿಂದ ಮಳೆಗಾಲದಲ್ಲಿ … Read more