ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಪರೀಕ್ಷೆಯಲ್ಲಿ ಕಾಫಿ ಚೀಟಿ ತಂದ ಸಾವು ನ್ಯಾಯವೇ!!?

On: December 5, 2023 4:06 PM
Follow Us:
---Advertisement---

ಕಾಫಿ ಚೀಟಿ ತಂದ ಸಾವು ಈ ಸಾವು ನ್ಯಾಯವೇ??

ಕಾಲೇಜಿನ ಕಟ್ಟದಿಂದ ಬಿದ್ದು ವಿದ್ಯಾರ್ಥಿನಿ ಸಾವು! ಶಿಕ್ಷಣ ಸಂಸ್ಥೆಯ ಎದುರು ಪೋಷಕರ ಆಕ್ರೋಶ

ಶಿವಮೊಗ್ಗದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿ ಶಾಲೆ ಕಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾಳೆ. 

ಶಿವಮೊಗ್ಗದ ಕುವೆಂಪು ರಸ್ತೆ ಸಮೀಪ ಇರುವ ಆದಿಚುಂಚನಗಿರಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ.  ಮೇಘನಾ ಎಂಬ 18 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಮೂಲ ವಿನೋಬಾ ನಗರ ವಾಸಿಯಾಗಿದ್ದು ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ನಲ್ಲಿ ತಂದೆ ತಾಯಿ ತೋಟ ನೋಡಿಕೊಂಡಿದ್ದರು ವಿದ್ಯಾರ್ಥಿನಿಗೆ ಇಲ್ಲೇ ಹಾಸ್ಟೆಲ್ ವ್ಯವಸ್ಥೆ ಮಾಡಿದ್ದರು,

ಇವತ್ತು ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆ ಬರೆಯುವಾಗ ಮೇಘನಾ ಹತ್ತಿರ ಚೀಟಿ ದೊರಕಿದ್ದು ಉಪನ್ಯಾಸಕಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ರೂಮಿನಿಂದ ಹೊರಗಡೆ ಕಳಿಸಿದ್ದು 10 ನಿಮಿಷದ ನಂತರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುತ್ತಾರೆ,
ಅದಾದ ನಂತರ ಮನನೊಂದ ವಿದ್ಯಾರ್ಥಿನಿ ವಾಶ್ ರೂಂಗೆ ಹೋಗುವುದಾಗಿ ಹೇಳಿ ಐದನೇ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕಾಲೇಜಿನವರ ವಾದವಾಗಿದ್ದು ಆದರೆ ಪೋಷಕರು ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ತುಂಬಾ ಟಾರ್ಚರ್ ನೀಡುತ್ತಿದ್ದಾರು ಎಂದು ಪೋಷಕರ ಆರೋಪವಾಗಿದೆ, ಈ ಪ್ರಕರಣವು ಪೊಲೀಸ್ ತನಿಕೆಯಿಂದ ಹೆಚ್ಚಿನ ಮಾಹಿತಿ ಬರಬೇಕಾಗಿದೆ.

ಸದ್ಯ ಸ್ಥಳದಲ್ಲಿ ವಿದ್ಯಾರ್ಥಿನಿಯ ಕುಟುಂಬಸ್ಥರು ,ಸಂಬಂಧಿಗಳು  ಕಾಲೇಜಿನ ಬಳಿ ಜಮಾಯಿಸಿದ್ದು ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರು ನಿಯೋಜನೆಗೊಂಡಿದ್ದಾರೆ

Sathish munchemane

Join WhatsApp

Join Now

 

Read More