ಆಗಸ್ಟ್ 2023 ರಿಂದ ಶಿವಮೊಗ್ಗದಲ್ಲಿ ವಿಮಾನ ಹರಾಟ ಬಿ ವೈ ಆರ್

0
112
  • ಸಾತ್ವಿಕ ನುಡಿ, ಶಿವಮೊಗ್ಗ
    ಆಗಸ್ಟ್ 2023 ರಿಂದ ಶಿವಮೊಗ್ಗದಲ್ಲಿ ವಿಮಾನ ಹರಾಟ ಬಿ ವೈ ಆರ್
    ವಿಮಾನ ಹಾರಾಟ-ನಾಲ್ಕು ಮಾರ್ಗಕ್ಕೆ ಕೇಂದ್ರ ಒಪ್ಪಿಗೆ-ಬಿವೈಆರ್ ರಾಘವೇಂದ್ರ,
    ವಿಮಾನ ನಿಲ್ದಾಣ ಫೆ.27 ಲೋಕಾರ್ಪಣೆಗೊಂಡು 158 ನೇ ವಿಮಾನ ನಿಲ್ದಾಣವಾಗಿ ಶಿವಮೊಗ್ಗ ಏರ್‌ಪೋರ್ಟ್ ನಿರ್ಮಾಣಗೊಂಡಿತ್ತು. ನಿಲ್ದಾಣದ ಮೂಲಸೌಕರ್ಯ ಆದ ಮೇಲೆ ಸುಮಾರು ಎರಡು ವರ್ಷ ತೆಗೆದುಕೊಳ್ಳಲಾಯಿತು. ಈಗ ಆ.11 ಕ್ಕೆ ಇಂಡಿಗೋ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ನಮ್ಮ ನಿಲ್ದಾಣ ಮೂಲಸೌಕಾರ್ಯ 2009 ರಲ್ಲಿ ಆರಂಭವಾಯಿತು. ಆಗ 1200 ಮೀಟರ್ ಇತ್ತು. ಈಗ 3400 ಮೀಟರ್ ದೊಡ್ಡ ವಿಮಾನ ನಿಲ್ದಾಣ ಆಗಿದೆ. ರಾಜಕೀಯ ಮುಖಂಡರ ವಿಮಾನ ಹಾರಾಟ ಲ್ಯಾಂಡಿಂಗ್ ಆಗಿದೆ ಇನ್ನು ಮುಂದೆ ಸಾರ್ವಜನಿಕ ಬಳಕೆ ಆಗಲಿದೆ ಎಂದರು.

ಆ. ೧೧ ಕ್ಕೆ ಇಂಡಿಗೋ ಏರ್ ಲೈನ್ಸ್ ನಿಂದ ಮೊದಲ ವಿಮಾನ ಹಾರಾಟ ಶಿವಮೊಗ್ಗ-ಬೆಂಗಳೂರಿನ ನಡುವೆ ಹಾರಾಟ ನಡೆಯಲಿದೆ. ಇದರ ಸಮಯ ಇನ್ನೂ ಅಧಿಕೃತವಾಗಿ ಹಾರಾಟದ ಸಮಯ ನಿಗದಿಯಾಗಿಲ್ಲ. ಆದರೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಬಿಟ್ಟು 11-00 ಕ್ಕೆ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ಹೊರಟು ಮಧ್ಯಾಹ್ನ 2-30 ಕ್ಕೆ ತಲುಲಿದೆ. ಇದು ಅಧಿಕೃತ ಘೋಷಣೆ ಆಗಬೇಕಿದೆ ಎಂದರು.

ಉಡಾನ್ ಯೋಜನೆಯ ಆರ್ ಸಿಎಸ್ ಲೈನ್ ನಲ್ಲಿ ಪ್ರಾಣಿಕರ ಸೀಟವೊಂದಕ್ಕೆ ಸಬ್ಸಿಡಿ ನೀಡಿ ವರ್ಷಕ್ಜೆ 2.5 ಕೋಟಿ ರೂ. ಹಣ ಸಬ್ಸಿಡಿ ದೊರೆಯುತ್ತಿದೆ. 2022 ಫೆ.9 ಕ್ಕೆ ಏವಿಯಷನ್ ಮಿನಿಸ್ಟರ್ ನ್ನ ಭೇಟಿ ಮಾಡಿ 11 ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನೀಡಬೇಕೆಂದು ಮನವಿ ನೀಡಲಾಗಿತ್ತು. ಈಗ ಉಡಾನ್ 5.0 ದಲ್ಲಿ ನಾಲ್ಕು ರೂಟ್ ಗಳಲ್ಲಿ ವಿಮಾನ ಹಾರಾಟ ನಡೆಯಲಿದೆ. ಶಿವಮೊಗ್ಗ-ಗೋವಾ, ಶಿವಮೊಗ್ಗ-ಹೈದ್ರಾಬಾದ್-ದೆಹಲಿ ನಡುವೆ ಹಾಗೂ ದೆಹಲಿ- ಶಿವಮೊಗ್ಗ-ಚೆನ್ಬೈ ನಡುವೆ ವಿಮಾನ ಹಾರಾಟಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.

ಹೈದ್ರಾಬಾದ್ ಶಿವಮೊಗ್ಗ ಶಿವಮೊಗ್ಗ ಗೋವಾ-ಶಿವಮೊಗ್ಗದಿಂದ ತಿರುಪತಿ-ತಿರುಪತಿಯಿಂದ ಶಿವಮೊಗ್ಗ ಹೈದರಾಬಾದ್ ಗೆ, ಮತ್ತು ದೆಹಲಿಯಿಂದ ಶಿವಮೊಗ್ಗ ಶಿವಮೊಗ್ಗದಿಂದ ಚೆನ್ಬೈ ನಡುವಿನ ಮಾರ್ಗದ ಟೆಂಡರ್ ಕರೆಯಲಾಗಿದೆ. ಈ ವಿಮಾನದ ಇಂಧನಕ್ಕೆ, ರೆಂಟ್ ನಲ್ಲಿ ಕನ್ಸಿಷನ್ ಸಿಗಲಿದೆ ಈ ಮಾರ್ಗದಲ್ಲಿ ಅನುದಾನ ದೊರೆಯಲಿದೆ. ನಷ್ಟವಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ವಿಮಾನ ಹಾರಾಟ ಆಗಸ್ಟ್ ಕೊನೆಯ ತಿಂಗಳಲ್ಲಿ ಹಾರಾಡುವ ನಿರೀಕ್ಷೆ ಇದೆ ಸಾತ್ವಿಕ ನುಡಿಪತ್ರಿಕೆ ಯು
ಬಿ.ವೈ .ಆರ್ ಗೇ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶವಿದೆಯೇ ಎಂದು ಕೇಳಿದಾಗ ಬೆಂಗಳೂರಿನ ಕಂಪನಿಗೆ ಟೆಂಡರ್ ಆಗಿದ್ದು
ಅವರು ಈಗಾಗಲೇ ಸೆಕ್ಯೂರಿಟಿ ಏಜೆನ್ಸಿಯನ್ನು ಸ್ಥಳೀಯರಿಗೆ ನೀಡಿದ್ದಾರೆ ಮುಂದೆ ಕಾದು ನೋಡಬೇಕು
ಎಂದರು ಪತ್ರಿಕೆ ಡಿ ಗ್ರೂಪ್ ನೌಕರರು ಆದರೂ ಉದ್ಯೋಗ ಸಿಗಬಹುದೇ ಎಂದಾಗ ಕಾದು ನೋಡಬೇಕೆಂಬ ಉತ್ತರ ನೀಡಿದರು.