Thursday, 12 November 2026 — ಸಾತ್ವಿಕ ನುಡಿ

ಸಾತ್ವಿಕ ನುಡಿ

ಕನ್ನಡ ಸುದ್ದಿ ಅಂತರ್ಜಾಲ

ಹೊಸ ಸುದ್ದಿ
ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ ಇದೀಗ ಬಂದ ಸುದ್ದಿ ಡಿಸಿ ಕಚೇರಿ ಬಳಿ ಮರ ಏರಿ ರೈತ ನಾಗರಾಜ್ ಆತ್ಮಹತ್ಯೆಗೆ ಯತ್ನ! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ
ಇದೀಗ ಬಂದ ಸುದ್ದಿ

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಯುವ ಕಾಂಗ್ರೆಸ್ ನಾಯಕ ಹೆಚ್.ಪಿ. ಗಿರೀಶ್ ನೇಮಕ

Sathish munchemane
ವರದಿ: Sathish munchemane ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 79 ವೀಕ್ಷಣೆಗಳು

ಕರ್ನಾಟಕ ಸರ್ಕಾರವು ಶಿವಮೊಗ್ಗದ ಯುವ ಕಾಂಗ್ರೆಸ್ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಸಂಘಟಕರಾದ ಹೆಚ್.ಪಿ. ಗಿರೀಶ್ ಅವರನ್ನು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನಾಗಿ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರೇ  ಪದನಿಮಿತ ಅಧ್ಯಕ್ಷರಾಗಿದ್ದಾರೆ

ಕಾಂಗ್ರೆಸ್ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹೆಚ್.ಪಿ. ಗಿರೀಶ್ ಅವರ ಪಕ್ಷನಿಷ್ಠೆ, ಸಂಘಟನಾ ಸಾಮರ್ಥ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಈ ಜವಾಬ್ದಾರಿ ನೀಡಲಾಗಿದೆ.

ಚಿಕ್ಕ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಂದ ಪ್ರೇರಿತರಾಗಿ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು, ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ.

ಜಿಲ್ಲೆ, ರಾಜ್ಯ  ಮಟ್ಟದಲ್ಲಿ ಯುವ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ವಿನೂತನ ಹೋರಾಟಗಳು, ಜನಪರ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದಾರೆ. ಯುವಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಸಾರ್ವಜನಿಕ ವಿಚಾರಗಳಲ್ಲಿ ನಿರಂತರವಾಗಿ ಹೋರಾಟ ನಡೆಸುವ ಮೂಲಕ ಪಕ್ಷದ ಸಂಘಟನೆಯಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.

ಬಸವಣ್ಣನವರ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಆಶಯಗಳನ್ನು ಪ್ರತಿಬಿಂಬಿಸುವ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯಲ್ಲಿ ನಿರ್ದೇಶಕರಾಗಿ ನೇಮಕಗೊಂಡಿರುವುದು ಅವರ ರಾಜಕೀಯ ಮತ್ತು ಸಾಮಾಜಿಕ ಸೇವೆಗೆ ಸಂದ ಗೌರವವಾಗಿದೆ.

ಈ ಹೊಸ ಜವಾಬ್ದಾರಿಯ ಮೂಲಕ ಬಸವ ಕಲ್ಯಾಣದ ಅಭಿವೃದ್ಧಿ ಹಾಗೂ ಮಂಡಳಿಯ ಆಶಯಗಳ ಈಡೇರಿಕೆಗೆ ಹೆಚ್.ಪಿ. ಗಿರೀಶ್ ಅವರು ಇನ್ನಷ್ಟು ಪರಿಣಾಮಕಾರಿಯಾಗಿ ಶ್ರಮಿಸಲಿ ಎಂಬುದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಆಶಯವಾಗಿದೆ.

ಹೆಚ್.ಪಿ. ಗಿರೀಶ್ ಅವರ ನೇಮಕಕ್ಕೆ ಪಕ್ಷತೀತಾವಾಗಿ ಶಿವಮೊಗ್ಗ ಜನತೆ ಮತ್ತು ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಮುಖ್ಯ ಸಂಪಾದಕರು (Chief Editor) ✍️ 736 ಲೇಖನಗಳು

Sathish munchemane

Sathish munchemane ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment