Friday, 6 November 2026 — ಸಾತ್ವಿಕ ನುಡಿ

ಸಾತ್ವಿಕ ನುಡಿ

ಕನ್ನಡ ಸುದ್ದಿ ಅಂತರ್ಜಾಲ

ಹೊಸ ಸುದ್ದಿ
ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ತ್ಯಾಜುವಳ್ಳಿಯಲ್ಲಿ ಉದ್ದೇಶಿತ ಶ್ರೀ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ.! ಇದೀಗ ಬಂದ ಸುದ್ದಿ ಜಮಖಂಡಿಯಲ್ಲಿ ಕೆ.ಎಂ. ಸತೀಶ್ ಗೌಡ ಅವರಿಗೆ ‘ಸಾಧನ ಸಿರಿ’ ಪ್ರಶಸ್ತಿ ಪ್ರದಾನ.! ಜಿಲ್ಲಾ ಸುದ್ದಿ ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ ಜಿಲ್ಲಾ ಸುದ್ದಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಸದ ಬಿ.ವೈ ರಾಘವೇಂದ್ರ ಬೆಂಬಲ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ತ್ಯಾಜುವಳ್ಳಿಯಲ್ಲಿ ಉದ್ದೇಶಿತ ಶ್ರೀ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ.! ಇದೀಗ ಬಂದ ಸುದ್ದಿ ಜಮಖಂಡಿಯಲ್ಲಿ ಕೆ.ಎಂ. ಸತೀಶ್ ಗೌಡ ಅವರಿಗೆ ‘ಸಾಧನ ಸಿರಿ’ ಪ್ರಶಸ್ತಿ ಪ್ರದಾನ.!
ಜಿಲ್ಲಾ ಸುದ್ದಿ

ಯುವ ಸಂಘಟನೆಗೆ ಹೊಸ ಸಾರಥಿ: ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಯುವ ಸಂಯೋಜಕರಾಗಿ ಟಿ.ಡಿ. ಗೀತೇಂದ್ರ ನೇಮಕ

Sathish munchemane
ವರದಿ: Sathish munchemane ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 105 ವೀಕ್ಷಣೆಗಳು

ಬೆಂಗಳೂರು, ನ.5: ಶಿವಮೊಗ್ಗ ಜಿಲ್ಲೆಯ ಯುವಕರನ್ನು ಸಂಘಟಿಸಿ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಟಿ.ಡಿ. ಗೀತೇಂದ್ರ ಅವರಿಗೆ ವಹಿಸಲಾಗಿದೆ. ಭಾರತ್ ಜೋಡೋ ಯುವ ಸಂಘದ ನೂತನ ಜಿಲ್ಲಾ ಯುವ ಸಂಯೋಜಕರಾಗಿ ನೇಮಕಗೊಂಡಿರುವ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಅಭಿನಂದಿಸಿ ಶುಭ ಹಾರೈಸಿದರು.

ಯುವಕರಲ್ಲಿ ಸಂಘಟನಾ ಶಕ್ತಿ ಬೆಳೆಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಭಾರತ್ ಜೋಡೋ ಯುವ ಸಂಘ (BJYS) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಆಶಯಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಇದೀಗ ಗೀತೇಂದ್ರ ಅವರ ಹೆಗಲೇರಿದೆ.

ನೇಮಕದ ಬಳಿಕ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಯುವಕರು ಕೇವಲ ಉದ್ಯೋಗ ಮತ್ತು ವೈಯಕ್ತಿಕ ಬದುಕಿಗೆ ಸೀಮಿತವಾಗದೆ ಸಮಾಜದ ಅಭಿವೃದ್ಧಿಯಲ್ಲಿಯೂ ಸಕ್ರಿಯ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯ ಯುವಕರನ್ನು ಒಗ್ಗೂಡಿಸಿ, ಅವರಿಗೆ ಸಾಮಾಜಿಕ ಸೇವೆ, ಜನಪರ ಚಟುವಟಿಕೆ ಹಾಗೂ ಸಂಘಟನಾ ಕಾರ್ಯಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಗೀತೇಂದ್ರ ಅವರಿಗೆ ಪ್ರೋತ್ಸಾಹ ನೀಡಿದರು.

ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡಾಗ ಸಮಾಜದಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತ್ ಜೋಡೋ ಯುವ ಸಂಘವು ಯುವಕರಿಗೆ ಉತ್ತಮ ವೇದಿಕೆಯಾಗಬೇಕು ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು.

ಗೀತೇಂದ್ರ ಅವರ ನೇಮಕದಿಂದ ಶಿವಮೊಗ್ಗ ಜಿಲ್ಲೆಯ ಯುವ ಸಂಘಟನೆಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಜಿಲ್ಲೆಯ ವಿವಿಧ ಭಾಗಗಳ ಯುವಕರನ್ನು ಸಂಘಟಿಸಿ, ಸರ್ಕಾರದ ಯೋಜನೆಗಳ ಆಶಯಗಳನ್ನು ಜನರಿಗೆ ತಲುಪಿಸುವುದು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದು ಅವರ ಮುಂದಿರುವ ಪ್ರಮುಖ ಜವಾಬ್ದಾರಿಗಳಾಗಿವೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್, ಒಬಿಸಿ ರಾಜ್ಯ ಘಟಕದ ಸಂಯೋಜಕ ಜಿ.ಡಿ. ಮಂಜುನಾಥ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಶರತ್ ಮರಿಯಪ್ಪ ಉಪಸ್ಥಿತರಿದ್ದರು.

ಮುಖ್ಯ ಸಂಪಾದಕರು (Chief Editor) ✍️ 734 ಲೇಖನಗಳು

Sathish munchemane

Sathish munchemane ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment