ಶಿವಮೊಗ್ಗ ಜಿಲ್ಲೆಯ ತ್ಯಾಜುವಳ್ಳಿಯಲ್ಲಿ ಉದ್ದೇಶಿತ ಶ್ರೀ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ಯೋಜನೆಯ ಜಮೀನು ಮಂಜೂರಾತಿ ಪ್ರಕ್ರಿಯೆಯ ಪ್ರಗತಿ ಪರಿಶೀಲನಾ ಸಭೆ.
ಶಿವಮೊಗ್ಗ ಜಿಲ್ಲೆಯ ಹರನಹಳ್ಳಿ ಹೋಬಳಿಯ ತ್ಯಾಜುವಳ್ಳಿ ಗ್ರಾಮದ ಸರ್ವೆ ನಂಬರ್ 60 ಮತ್ತು 27 ರ ಜಮೀನಿನಲ್ಲಿ ಶ್ರೀ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಕನಿಷ್ಠ 25 ಎಕರೆ ಹಾಗೂ ಗರಿಷ್ಠ ಲಭ್ಯವಿರುವ ಸರ್ಕಾರಿ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ಸಂಬಂಧಿಸಿದಂತೆ, *ಶ್ರೀ ಕಂಠೀರವ ಸ್ಟುಡಿಯೋದ ಮಾನ್ಯ ಅಧ್ಯಕ್ಷರಾದ ಶ್ರೀ ಮಹಬೂಬ್ ಪಾಷ* ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕೃತ ಸಮಾಲೋಚನಾ ಸಭೆ ನಡೆಸಲಾಯಿತು. ಸಭೆಯಲ್ಲಿ *ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಪ್ರಭುಲಿಂಗ ಕವಲಿಕಟ್ಟಿ, ಭಾ.ಆ.ಸೇ., ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಅಭಿಷೇಕ್ ವಿ., ಕೆ.ಎ.ಎಸ್., ತಹಶೀಲ್ದಾರ್ ಶ್ರೀ ರಾಜೀವ್ ಕುಮಾರ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ (AD) ಶ್ರೀ ಮಾರುತಿ* ಅವರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಯಿತು.
ಸ್ಟುಡಿಯೋ ಯೋಜನೆಗೆ ಗರಿಷ್ಠ ಪ್ರಮಾಣದ ಜಮೀನು ಒದಗಿಸಲು ಬದ್ಧತೆ ವ್ಯಕ್ತಪಡಿಸಿದ ಜಿಲ್ಲಾಡಳಿತವು, ಮುಂದಿನ ಒಂದು ವಾರದೊಳಗೆ ಸಮಗ್ರ ಪರಿಶೀಲನಾ ವರದಿ ಹಾಗೂ ಅಧಿಕೃತ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸುವುದಾಗಿ ತಿಳಿಸಿದೆ.
*ಶ್ರೀ ಮಹಬೂಬ್ ಪಾಷ*
*ಅಧ್ಯಕ್ಷರು*
ಶ್ರೀ ಕಂಠೀರವ ಸ್ಟುಡಿಯೋ
*ಕರ್ನಾಟಕ ಸರ್ಕಾರದ ಉದ್ಯಮ*
*ಬೆಂಗಳೂರು*






