ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಗಿ ಅಧಿಕಾರ ವಹಿಸಿಕೊಂಡ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಬುಧವಾರ ಖಾತೆ ಹಂಚಿಕೆ ಮಾಡಿ ಅದರ ಅಧಿಕೃತ ಪಟ್ಟಿಯನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಲೋಕಭವನಕ್ಕೆ ರವಾನಿಸಲಾಗಿದೆ. ರಾಜ್ಯಪಾಲರು ಪಟ್ಟಿಗೆ ಅಂಕಿತ ಹಾಕುತ್ತಿದ್ದಂತೆ ಪಟ್ಟಿಯಲ್ಲಿರುವ ಮಂತ್ರಿಗಳಿಗೆ ಖಾತೆಗಳು ಅಧಿಕೃತವಾಗಲಿವೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಯಾರಿಗೆ ಯಾವೆಲ್ಲ ಖಾತೆಗಳನ್ನು ನೀಡಿ ಅಂತಿಮಗೊಳಿಸಿದ್ದಾರೆ. ಈ ಮೂಲಕ ಯಾರಿಗೆ ಯಾವ ಖಾತೆ ಸಿಗುತ್ತದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಆದರೆ ಸದ್ಯ 13 ಮಂದಿಗೆ ಮಾತ್ರವೇ ಖಾತೆಗಳು ಸಿಕ್ಕಿವೆ. ಖಾತೆ ಹಂಚಿಕೆಯ ಸಂಪೂರ್ಣ ಮಾಹಿತಿ , ಪಟ್ಟಿ ಮುಂದಿದೆ..
ನೂತನ ಯಾವ ಸಚಿವರಿಗೆ ಯಾವ ಖಾತೆ?
1. ಚಲುವರಾಯಸ್ವಾಮಿ- ಕೃಷಿ ಇಲಾಖೆ
2. ಎಚ್.ಸಿ. ಬಾಲಕೃಷ್ಣ – ಸಣ್ಣ ನೀರಾವರಿ ಇಲಾಖೆ
3. ಕೆ.ಎಚ್. ಮುನಿಯಪ್ಪ- ಸಾಮಾಜಿಕ ಕಲ್ಯಾಣ ಇಲಾಖೆ
4. ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
5. ಕೆ.ಎಸ್. ಬಸವಂತಪ್ಪ- ಬಂದರು ಮೀನುಗಾರಿಕೆ ಇಲಾಖೆ
6. ಮಧುಬಂಗಾರಪ್ಪ- ಪ್ರಾಥಮಿಕ ಶಿಕ್ಷಣ ಇಲಾಖೆ
7. ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
8. ಜಮೀರ್ ಅಹಮದ್ ಖಾನ್ – ವಸತಿ ಇಲಾಖೆ
9. ಲಕ್ಷ್ಮಣ್ ಸವದಿ- ಸಹಕಾರ ಇಲಾಖೆ
10. ಅಜಯ್ ಸಿಂಗ್- ಅರಣ್ಯ ಇಲಾಖೆ
11. ಎಸ್, ಎಸ್ ,ಮಲ್ಲಿಕಾರ್ಜುನ – ಗಣಿ ಮತ್ತು ಭೂ ವಿಜ್ಞಾನ
12. ರಿಜ್ವಾನ್ ಅರ್ಷದ್- ಆಹಾರ ಇಲಾಖೆ
13. ಪುಟ್ಟರಂಗ ಶೆಟ್ಟಿ-ಪಶುಸಂಗೋಪನೆ
ಇನ್ನೂ ಯು .ಟಿ ಖಾದರ್ ಅವರಿಗೆ ಆರೊಗ್ಯ ಇಲಾಖೆ ಜೊತೆ ಹೆಚ್ಚುವರಿ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಜವಾಬ್ದಾರಿ ನೀಡಲಾಗಿದೆ.
ಖಾತೆಗೆ ಹಂಚಿಕೆಗೆ ಕಾಯುತ್ತಿರುವ ಬಾಕಿ ಸಚಿವರು
1. ಶಿವಲಿಂಗೇ ಗೌಡ
2. ಬಿ.ನಾಗೇಂದ್ರ
3. ನರೇಂದ್ರ ಸ್ವಾಮಿ
4. ರುದ್ರಪ್ಪ ಲಮಾಣಿ
5. ಶಿವರಾಜ್ ತಂಗಡಗಿ
6. ವಿಜಯಾನಂದ ಕಾಶಪ್ಪನವರ್
7. ಟಿ.ರಘುಮೂರ್ತಿ