- ಶಿವಮೊಗ್ಗದಲ್ಲಿ ಚರ್ಚ್ ಫಾದರ್‍ನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ:
ಸಾತ್ವಿಕ ನುಡಿ
ಶಿವಮೊಗ್ಗ: ಪ್ರತಿಷ್ಟಿತ ಚರ್ಚ್ ನ ಫಾದರ್ ತನ್ನದೇ ಶಿಕ್ಷಣ ಸಂಸ್ಥೆಯಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ಬಂಧನಕ್ಕೊಳಗಾಗಿದ್ದು, ಆತನ ವಿರುದ್ಧ ಪೋಕ್ಸೋ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಸಿದ್ಧ ಚರ್ಚ್ ಇದಾಗಿದ್ದು, ಆರೋಪಿ ಫ್ರಾನ್ಸಿಸ್ ಫರ್ನಾಂಡಿಸ್ ನ್ನ ಶಿವಮೊಗ್ಗ ಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬುಧವಾರ ಬೆಳಕಿಗೆ ಬಂದಿದ್ದು ಪ್ರಕರಣವನ್ನು ಮುಚ್ಚಿ ಹಾಕಲು ಸತತ ಪ್ರಯತ್ನ ಫಲ ಕೊಡದೆ ಇಂದು ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರಿಂದ ಆರೋಪಿಯ್ನು ಬಂಧಿಸಿ, ಮಧ್ಯಾಹ್ನ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ನಂತರ ಸಂಜೆ ವೇಳೆಗೆ ನ್ಯಾಯಾಲಕ್ಕೆ ಆರೋಪಿಯನ್ನ ಹಾಜರು ಪಡಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಬಿ.ಹೆಚ್.ರಸ್ತೆಯ ಚರ್ಚ್ ಮುಂಭಾಗ ಹಾಗೂ ಕೋಟೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು. ಹಾಗೂ ಯಾವುದೇ ಒತ್ತಡಕ್ಕೊಳಗಾಗದೇ ಪಾರದರ್ಶಕ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್‌ನ ಸುರೇಶ್ ಬಾಬು ಮಾತನಾಡಿ ಮಾತನಾಡಿ, ಶಿವಮೊಗ್ಗದ ಪ್ರತಿಷ್ಠಿತ ಕ್ರಿಶ್ಚಿಯನ್ ಕಾಲೇಜಿನ ಪ್ರಾಂಶುಪಾಲರೂ ಆಗಿರುವ, ಚರ್ಚ್ ಫಾದರ್, ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈಕೆ ಅಪ್ರಾಪ್ತಳಾಗಿದ್ದು,  ಕೋಟೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ ಎಂದರು.
ಸಂಘಟನೆ ವತಿಯಿಂದ ಚರ್ಚ್ ಮುಂಭಾಗ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಈತನಿಗೆ ಕಠಿಣ ಶಿಕ್ಷೆಯಾಗಬೇಕು. ಯಾವುದೇ ಪ್ರಭಾವಕ್ಕೆ ಒಳಗಾಗದೇ ಪೊಲೀಸರು ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಗತ್ ಸೇನೆಯ ಸಂತೋಷ್, ವಿಶ್ವ ಹಿಂದೂ ಪರಿಷದ್, ಬಜರಂಗದಳದ ಕಾರ್ಯಕರ್ತರಾದ ನಾಗೇಶ್, ಅಂಕುಶ್, ಕಿಟ್ಟಿ, ಕಲ್ಲೇಶ್ ನಾಯ್ಕ, ಅರ್ಜುನ್, ಯರೇಕೊಪ್ಪ ತಾಂಡದ ಚಂದ್ರನಾಯ್ಕ, ಗಿರೀಶ್ ಮೊದಲಾದವರು ಇದ್ದರು.
 





