ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಯಶವಂತ್‍ಗೆ ನಿತ್ಯವೂ ಪರಿಸರ ದಿನಾಚರಣೆ

On: June 5, 2023 3:58 PM
Follow Us:
---Advertisement---

ಇಂದು ವಿಶ್ವ ಪರಿಸರ ದಿನಾಚರಣೆ. ಹಲವಾರು ಸಂಘ-ಸಂಸ್ಥೆಗಳು, ಸಮಾಜ ಸೇವಕರು ಗಿಡ ನೆಟ್ಟು ಒಂದು ಫೋಟೋ ತೆಗೆದು ಸ್ಟೇಟಸ್ ಗೆ ಹಾಕುವ ಮೂಲಕ ಪರಿಸರ ದಿನಾಚರಣೆ ಆಚರಿಸಿದೆವೆಂದು ಬೀಗಿ ಸುಮ್ಮನಾಗುತ್ತಾರೆ. ಆದರೆ, ಇಲ್ಲೊಬ್ಬ ಪರಿಸರ ಪ್ರೇಮಿ ಗಿಡ ನೆಟ್ಟು ಅವುಗಳನ್ನು ಪೋಷಿಸುವ ಕಾರ್ಯವನ್ನು ವರ್ಷಪೂರ್ತಿ ಮಾಡುತ್ತಾ, ವರ್ಷವಿಡೀ ಪರಿಸರ ದಿನಾಚರಣೆ ಆಚರಿಸುತ್ತಾ ಬಂದಿದ್ದಾರೆ.

ಹೌದು, ಶಿವಮೊಗ್ಗದ ಹೊಸಮನೆಯ ನಿವಾಸಿ ಯಶವಂತ್ ಸುಮಾರು 2 ವರ್ಷದಿಂದ ಈ ಕಾಯಕದಲ್ಲಿ ನಿರತರಾಗಿದ್ದಾರೆ. ಮೂಲತಃ ಗುತ್ತಿಗೆದಾರರಾಗಿ ಜೀವನೋಪಾಯ ಕಂಡುಕೊಂಡಿರುವ ಇವರು, ಮಳೆಗಾಲದ ಆರಂಭದ ಮೊದಲ 60 ದಿನಗಳ ಕಾಲ ವಿವಿಧೆಡೆ ಗಿಡಗಳನ್ನು ನೆಡುವುದಲ್ಲದೇ ಬೇಸಿಗೆಯಲ್ಲಿ ಅವುಗಳಿಗೆ ನೀರುಣಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
ಕಳೆದ ಹತ್ತುವರ್ಷಗಳ ಹಿಂದೆಯೇ ನನಗೆ ಇಂತಹ ಕೆಲಸ ಮಾಡಬೇಕೆಂಬ ಬಯಕೆ ಇತ್ತು. ಆದರೆ, ಅಂದು ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರಿಂದ ಆಗಿರಲಿಲ್ಲ. ಈಗ ಅರಣ್ಯ ಇಲಾಖೆಯಿಂದ ಪ್ರತಿ ಗಿಡಕ್ಕೆ 30 ರೂ.ಗಳನ್ನು ಹಾಗೂ ಖಾಸಗಿ ನರ್ಸರಿಗಳಿಂದ 50 ರೂ.ನಂತೆ ಸ್ವಂತ ಹಣ ಕೊಟ್ಟು ವಿವಿಧ ರೀತಿಯ ಸಸಿಗಳನ್ನು ತಂದು ನೆಟ್ಟು ಪೋಷಿಸುತ್ತಿದ್ದೇನೆ ಎನ್ನುತ್ತಾರೆ. ವಿಶೇಷವೆಂದರೆ ಇದಕ್ಕೆ ಯಾವುದೇ ಸರ್ಕಾರೇತರ ಸಂಸ್ಥೆಯ ಅಥವಾ ಸರ್ಕಾರದ ಸಹಕಾರ ಪಡೆಯದೇ ತಮ್ಮದೇ ಸ್ವಂತ ದುಡಿಮೆಯ ಹಣವನ್ನು ಬಳಸುತ್ತಿದ್ದಾರೆ.

7500 ಗಿಡ ನೆಟ್ಟು ಪೋಷಿಸುವ ಗುರಿ:
ಕಳೆದ ವರ್ಷ ನಗರದ ಬೊಮ್ಮನಕಟ್ಟೆ, ಪುನೀತ್ ರಾಜ್‍ಕುಮಾರ್ ರಸ್ತೆ, ಕೆಳದಿ ಚೆನ್ನಮ್ಮ ಪಾರ್ಕ್ ಸೇರಿದಂತೆ ನಗರದ ಹಲವೆಡೆ 4500 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಈ ಬಾರಿ 7500 ಗಿಡಗಳನ್ನು ನೆಡುವ ಗುರಿ ಹೊಂದಿದ್ದಾರೆ.
ತಮ್ಮ ಸ್ವಂತ ದುಡಿಮೆಯನ್ನು ವಿನಿಯೋಗಿಸಿ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಅಪರೂಪದ ವ್ಯಕ್ತಿತ್ವದ ಯಶವಂತ್ ಅವರ ಕಾರ್ಯಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸಿ, ಅವರಿಗೆ ‘ಸಾತ್ವಿಕ ನುಡಿ’ ಪತ್ರಿಕೆಯ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Sathish munchemane

Join WhatsApp

Join Now

 

Read More