ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಚಿತ್ರದುರ್ಗ ಹಿರಿಯೂರು ‎ ಬಸ್‌ಗೆ ಬೆಂಕಿ: 20ಕ್ಕೂ ಹೆಚ್ಚು ಸುಟ್ಟು ಕರಕಲು.;?

On: December 25, 2025 8:54 AM
Follow Us:
---Advertisement---

ಭೀಕರ ಅಪಘಾತಕ್ಕೂ ಮುನ್ನ ಆ 10 ಸೆಕೆಂಡುಗಳ ಕಾಲ ಏನಾಯ್ತು? ಅಪಘಾತಕ್ಕೆ ಅದೇ ಕಾರಣ!

ಬೇಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಆ ಬಸ್‌ನಲ್ಲಿದ್ದವರಿಗೆ ಅದು ಕೊನೆಯ ಪ್ರಯಾಣ ಆಗುತ್ತೆ ಅಂತ ಯಾರೂ ಅನ್ಕೊಂಡಿರಲಿಲ್ಲ. ‘ಸೀ ಬರ್ಡ್’ (Sea Bird) ಕಂಪನಿಯ ಸ್ಲೀಪರ್ ಕೋಚ್ ಬಸ್ ರಾತ್ರಿ 12 ಗಂಟೆಗೆ ಬೆಂಗಳೂರು ಬಿಟ್ಟಿತ್ತು. ಎಲ್ಲರೂ ಆರಾಮಾಗಿ ನಿದ್ದೆಗೆ ಜಾರಿದ್ರು.

‎ಆದ್ರೆ ಚಿತ್ರದುರ್ಗದ ಹತ್ತಿರ ಬರ್ತಿದ್ದಂಗೆ ವಿಧಿಯಾಟವೇ ಬದಲಾಗಿತ್ತು. ರಾತ್ರಿ 2:45ರ ಸುಮಾರಿಗೆ ಸಂಭವಿಸಿದ ಭೀಕರ ‘ಅಪಘಾತ’ (Accident) ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೇವಲ ಹತ್ತೇ ಹತ್ತು ಸೆಕೆಂಡ್‌ನಲ್ಲಿ ಬಸ್ ಪೂರ್ತಿ ‘ಫೈರ್’ (Fire) ಆಗಿ, ನಿದ್ದೆಯಲ್ಲಿದ್ದವರು ಚಿರನಿದ್ರೆಗೆ ಜಾರಿದ್ದಾರೆ.

ಹತ್ತೇ ಹತ್ತು ಸೆಕೆಂಡ್‌ನಲ್ಲಿ ಮುಗೀತು ಕಥೆ!

‎ಈ ಘೋರ ದುರಂತ ನಡೆದಿದ್ದು ಕೇವಲ 10 ಸೆಕೆಂಡುಗಳಲ್ಲಿ! ವಿರುದ್ಧ ದಿಕ್ಕಿನಿಂದ ಬಂದ ಕಂಟೈನರ್ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ರಸ್ತೆ ದಾಟಿ ಬಂದು ಬಸ್‌ಗೆ ಅಪ್ಪಳಿಸಿದೆ. ಕಣ್ಣು ಮುಚ್ಚಿ ತೆಗೆಯೋದ್ರೊಳಗೆ ಲಾರಿಯಿಂದ ಹಬ್ಬಿದ ಬೆಂಕಿ ಬಸ್‌ ಅನ್ನೂ ಆವರಿಸಿಕೊಂಡಿದೆ. ಪ್ರಯಾಣಿಕರು ಎಚ್ಚರಗೊಂಡು ಏನಾಗ್ತಿದೆ ಅಂತ ನೋಡೋ ಅಷ್ಟರಲ್ಲೇ ಬಸ್ ಅಗ್ನಿಗೋಳವಾಗಿತ್ತು. ಆ 10 ಸೆಕೆಂಡ್ ಯಮಪಾಶವಾಗಿ ಪರಿಣಮಿಸಿತ್ತು.

ಡೀಸೆಲ್ ಟ್ಯಾಂಕ್‌ಗೆ ಗುದ್ದಿದ ಯಮಸ್ವರೂಪಿ ಲಾರಿ!

‎ಸೀ ಬರ್ಡ್ ಸಿಬ್ಬಂದಿ ಹೇಳೋ ಪ್ರಕಾರ, ಅವರ ಬಸ್‌ನಲ್ಲಿ ಒಟ್ಟು 29 ಜನ ಪ್ರಯಾಣಿಕರು ಇದ್ರು. ಆ ಕಡೆಯಿಂದ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ಬಸ್‌ನ ಡೀಸೆಲ್ ಟ್ಯಾಂಕ್ ಬಳಿಯೇ ಜೋರಾಗಿ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು, ತಕ್ಷಣವೇ ಡೀಸೆಲ್ ಟ್ಯಾಂಕ್ ಒಡೆದು ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲಿ ಇಡೀ ಬಸ್ ದಗದಗನೆ ಹೊತ್ತಿ ಉರಿದಿದೆ.

ನಿದ್ದೆಯಲ್ಲೇ ಬೂದಿಯಾದ ಅಮಾಯಕ ಜೀವಗಳು

ರಾತ್ರಿ ಸಮಯ ಆಗಿದ್ದರಿಂದ ಬಹುತೇಕ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ರು. ಬೆಂಕಿ ಹತ್ತಿದ ತಕ್ಷಣ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಎಚ್ಚರ ಆದ್ರೂ ಕೂಡ ಬೆಂಕಿಯ ಕೆನ್ನಾಲಿಗೆಗೆ ಹೆದರಿ ಪ್ರಯಾಣಿಕರಿಗೆ ಕೆಳಗೆ ಇಳಿಯೋಕೆ ಆಗಿಲ್ಲ. ಬಸ್‌ನಲ್ಲಿದ್ದವರು ಕಿರುಚಾಡುತ್ತಾ, ಸಹಾಯಕ್ಕಾಗಿ ಅಂಗಲಾಚುತ್ತಾ ನಿದ್ದೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಕನಿಷ್ಠ 20 ಜನ ಸಜೀವ ದಹನ ಆಗಿರೋ ಶಂಕೆ ವ್ಯಕ್ತವಾಗಿದ್ದು, ನೋಡುವವರ ಎದೆಯೊಡೆದಂತಿದೆ.

ಕೆಲವರಿಗೆ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರ ಕಥೆ ಏನಾಯ್ತು ಅನ್ನೋದೇ ಈಗ ಆತಂಕದ ವಿಷಯ. ಬಸ್‌ನಲ್ಲಿದ್ದ 16 ಜನರ ಬಗ್ಗೆ ಮಾಹಿತಿ ಸಿಕ್ಕಿದೆ, ಆದ್ರೆ ಇನ್ನುಳಿದವರ ಗುರುತು ಪತ್ತೆ ಹಚ್ಚೋದೇ ಕಷ್ಟವಾಗಿದೆ.

‎ಕ್ಷಣಾರ್ಧದಲ್ಲಿ ಅಸ್ಥಿಪಂಜರದಂತಾದ ಬಸ್ ಬೆಂಕಿಯ ತೀವ್ರತೆ ಎಷ್ಟಿತ್ತು ಅಂದ್ರೆ, ಐಷಾರಾಮಿ ಸ್ಲೀಪರ್ ಕೋಚ್ ಬಸ್ ಕೆಲವೇ ನಿಮಿಷಗಳಲ್ಲಿ ಸುಟ್ಟು ಕರಕಲಾಗಿ ಬರೀ ಅಸ್ಥಿಪಂಜರದಂತೆ ನಿಂತಿದೆ. ರಸ್ತೆ ಮಧ್ಯೆ ಉರಿಯುತ್ತಿದ್ದ ಬಸ್ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವಷ್ಟರಲ್ಲೇ ಆಗಬಾರದು ಆಗೋಗಿತ್ತು. ಆ ದೃಶ್ಯ ನೋಡಿದ್ರೆ ಎಂಥ ಕಲ್ಲು ಮನಸ್ಸು ಕೂಡ ಕರಗುತ್ತೆ.

‎ಕ್ರಿಸ್‌ಮಸ್‌ಗೆ ಬೆಂಗಳೂರಿನಿಂದ ಹೊರಟವರು ಇನ್ನೇನು ಮನೆ ಸೇರ್ತೀವಿ ಅಂತ ಅನ್ಕೊಂಡಿದ್ರು. ಆದ್ರೆ ವಿಧಿ ಲಿಖಿತವೇ ಬೇರೆ ಇತ್ತು. ಕೇವಲ 10 ಸೆಕೆಂಡುಗಳ ಒಂಥರಾ ತಪ್ಪು, ಎಷ್ಟೋ ಕುಟುಂಬಗಳನ್ನ ಅನಾಥ ಮಾಡಿದೆ. ಈ ದುರಂತಕ್ಕೆ ನಿಜವಾದ ಕಾರಣ ಯಾರು? ಲಾರಿ ಡ್ರೈವರಾ ಅಥವಾ ಹಣೆಬರಹವಾ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಗುತ್ತಿಲ್ಲ.

Sathish munchemane

Join WhatsApp

Join Now

 

Read More