ಅ.25ರಿಂದ ಅ.28ರವರೆಗೆ ಕರ್ನಾಟಕ – ಗೋವಾ ಪಂದ್ಯಾವಳಿ
ಶಿವಮೊಗ್ಗ: ನವುಲೆ ಕೆರೆಯ ಪಕ್ಕದಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಅಕ್ಟೋಬರ್ 25ರಿಂದ 28ರವರೆಗೆ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಾವಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ಪಿಚ್ ಮತ್ತು ಮೈದಾನದಲ್ಲಿ ನೀರು ನಿಂತುಕೊಳ್ಳದಂತೆ ಕೆಎಸ್‌ಸಿಎ ಅಧಿಕಾರಿಗಳು ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ. ನವುಲೆ ಕೆರೆ ತುಂಬಿದರೂ ನೀರು ಮೈದಾನಕ್ಕೆ ಹರಿಯದಂತೆ ಪೈಪ್ ಮೂಲಕ ಹೊರಹಾಕುವ ವ್ಯವಸ್ಥೆ ಮಾಡಲಾಗಿದೆ.
ಅತ್ಯಾಧುನಿಕ ಸ್ಟೇಡಿಯಂ ಅಗತ್ಯ.!
ಶಿವಮೊಗ್ಗ ಕ್ರಿಕೆಟ್ ಅಭಿಮಾನಿಗಳಿಗೆ ಸೂಕ್ತವಾದ ಆಸನ ವ್ಯವಸ್ಥೆ ಹಾಗೂ ಸುಸಜ್ಜಿತವಾದ ಕ್ರೀಡಾಂಗಣದ ಅಗತ್ಯವಿದೆ.
ಮಾನ್ಯ ಸಂಸದ ಬಿ.ವೈ.ರಾಘವೇಂದ್ರ ರವರೆ ಗಮನಹರಿಸಿ.

ಈ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ರವರು ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಚರ್ಚಿಸಿ ಹೊಸ ಸ್ಟೇಡಿಯಂ ನಿರ್ಮಾಣಕ್ಕಾಗಿ ಕೇಂದ್ರದಿಂದ ಅನುದಾನ ಪಡೆಯುವ ಪ್ರಕ್ರಿಯೆಯನ್ನು ಮುಂದುವರೆಸಬೇಕು ನಗರದ ಸಾಗರ ರಸ್ತೆಯ ಸಿಂಹಾದಾಮದ ಎದುರು ಸುಮಾರು 45 ಎಕರೆ ಭೂಮಿಯನ್ನು ಕೇಲೋ ಇಂಡಿಯಾ ಸ್ಟೇಡಿಯಂಗೆ ಗುರುತಿಸಲಾಗಿತ್ತು ಕಾರಣಾಂತರಗಳಿಂದ ಅದು ಸದ್ಯಕ್ಕೆ ಸ್ಥಗಿತವಾಗಿದೆ ಎಂದು ತಿಳಿದುಬಂದಿದ್ದು ಈಗಾಲಾದರು ಅದಕ್ಕೆ ಚಾಲನೆ ನೀಡಿ ಹೋಸಮೈದಾನಕ್ಕೆಈಗಾಲದರು ಡಿ.ಎಸ್ಅರುಣ್ ಅವರ ಅವದಿಯಲ್ಲಿ ಕ್ರೀಡಾ ಅಭಿಮಾನಿಗಳು ಕುರಲು ಒಳ್ಳೆಯ ಅಸನ ವ್ಯವಸ್ಥೆಯ ಒಳ್ಳೆಯ ಜನಮಾನಸದಲ್ಲಿ ಉಳಿಯುವ ಸುಸಜ್ಜಿತವಾದ ಮೈದಾನ ಅಗಲಿ ಎಂಬುವುದು ಕ್ರಿಡಾ ಆಸಕ್ತರ ಮನವಿ.
ಪ್ರಾಕ್ಟಿಸ್ ಆರಂಭಿಸಿದ ತಾರಾ ಆಟಗಾರರು:

ಕರ್ನಾಟಕ ಮತ್ತು ಗೋವಾ ತಂಡಗಳು ಈಗಾಗಲೇ ಶಿವಮೊಗ್ಗ ತಲುಪಿದ್ದು, ಕಳೆದ ಎರಡು ದಿನಗಳಿಂದ ನವುಲೆ ಮೈದಾನದಲ್ಲಿ ನೆಟ್ ಪ್ರಾಕ್ಟಿಸ್ ನಡೆಸುತ್ತಿವೆ. ಮೈದಾನದ ಪ್ರವೇಶದ್ವಾರದಲ್ಲೇ ಬ್ಯಾಟಿಂಗ್ ನೆಟ್‌ಗಳನ್ನು ಹಾಕಲಾಗಿದ್ದು, ಒಳಭಾಗದಲ್ಲಿ ಬೌಲಿಂಗ್ ಹಾಗೂ ವ್ಯಾಯಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.
ಕರ್ನಾಟಕ ತಂಡ:
ಮಯಾಂಕ್ ಅಗರ್‌ವಾಲ್ (ನಾಯಕ), ಕರುಣ್ ನಾಯರ್ (ಉಪನಾಯಕ), ಸ್ಮರಣ್.ಆರ್, ಶ್ರೀಜಿತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ, ಯಶೋವರ್ಧನ್, ಅಭಿಲಾಷ್ ಶೆಟ್ಟಿ, ವಂಕಟೇಶ್.ಎಂ, ನಿಕಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಅನೀಶ್.ಕೆ.ವಿ, ಮಹಸಿನ್ ಖಾನ್, ಶಿಖರ್ ಶೆಟ್ಟಿ.
ಗೋವಾ ತಂಡ:
ದೀಪರಾಜ್ ಗಾಂವ್ಕರ್ (ನಾಯಕ), ಲಲಿತ್ ಯಾದವ್, ಸಮರ್ ದುಬಾಷಿ (ವಿಕೆಟ್ ಕೀಪರ್), ಸುಯಾಷ್ ಪ್ರಭುದೇಸಾಯಿ, ಮಂಥನ್, ಕಶ್ಯಾಪ್ ಬಾಕ್ಲೆ, ದರ್ಶನ್ ಮಿಸಲಾಲ್, ಮೋಹಿತ್ ರೇಡ್ಕರ್, ಅಭಿನವ್ ತೇಜ್ರಾಣಾ, ಅರ್ಜುನ್ ತೆಂಡೂಲ್ಕರ್, ಹಿರಾಂಪ್ ಪರಾಬ್, ವಿಕಾಸ್ ಸಿಂಗ್, ಇಶಾನ್ ಗಡೇಕರ್, ರಾಜಶೇಖರ್ ಹರಿಕಾಂತ್, ವಿಜೇಶ್ ಪ್ರಭು ದೇಸಾಯಿ, ವಾಸೂಕಿ ಕೌಶಿಕ್, ಸ್ನೇಹಲ್.
ಪಂದ್ಯಾವಳಿಯ ವೇಳಾಪಟ್ಟಿ:
ಪಂದ್ಯವು ಅಕ್ಟೋಬರ್ 25ರಂದು ಬೆಳಗ್ಗೆ 8.45ಕ್ಕೆ ಉದ್ಘಾಟನೆಗೊಂಡು, ಬೆಳಗ್ಗೆ 9.30ರಿಂದ ಮಧ್ಯಾಹ್ನ 12.00ರವರೆಗೆ ಮೊದಲ ಸೆಷನ್, ನಂತರ 12.40ರಿಂದ 2.40ರವರೆಗೆ ಎರಡನೇ ಸೆಷನ್, ಹಾಗೂ ಮಧ್ಯಾಹ್ನ 3.00ರಿಂದ ಸಂಜೆ 4.30ರವರೆಗೆ ಅಂತಿಮ ಸೆಷನ್ ನಡೆಯಲಿದೆ.
ಮಳೆಯ ನಡುವೆಯೂ ರಣಜಿಗೆ ಸಜ್ಜಾದ ಶಿವಮೊಗ್ಗ ಪಿಚ್!
ನವುಲೆ ಕೆರೆಯ ಪಕ್ಕದ ಮೈದಾನದಲ್ಲಿ ಮಳೆಯ ತೊಂದರೆ ಇಲ್ಲದೇ ಪಂದ್ಯ ಯಶಸ್ವಿಯಾಗಿ ನಡೆಯುವ ವಿಶ್ವಾಸವನ್ನು ಕೆಎಸ್‌ಸಿಎ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
 







