ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ವಿಧಾನಸಭಾ  ಕ್ಷೇತ್ರದಲ್ಲಿ ಮುಂದಿನ ಚುನಾವಣೆ ತಾಲಿಮ್  ಶೂರು..! ಅಖಾಡಕ್ಕೆ ಯಾರು..!?  

On: September 3, 2025 6:17 PM
Follow Us:
---Advertisement---

ಈಗಲೇ ಚುನಾವಣೆ ನಡೇದರೆ ರಾಜಕೀಯ ಜಲ್ಕ್,.

ಶಿವಮೊಗ್ಗ ಕ್ಷೇತ್ರವು ಕರ್ನಾಟಕದ ರಾಜಕೀಯ ನಕ್ಷೆಯಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿದೆ. ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಊಹಾಪೋಹಗಳು ಪ್ರಾರಂಭವಾಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಹೊಸ ಪಕ್ಷವಾಗಿ ಹೊರಹೊಮ್ಮುವ ರಾಷ್ಟ್ರಭಕ್ತ ಬಳಗ—all set for high voltage battle.

ಬಿಜೆಪಿ – ಚನ್ನಬಸಪ್ಪ ಮತ್ತೆ ರಣರಂಗಕ್ಕೆ?

ಬಿಜೆಪಿ ಪಕ್ಷವು ಶಿವಮೊಗ್ಗವನ್ನು ತನ್ನ ಭದ್ರಕೋಟೆಯಂತೆ ನೋಡಿಕೊಂಡಿದೆ. ಪಕ್ಷದ ಹಿರಿಯ ಮುಖಂಡ ಚನ್ನಬಸಪ್ಪ ಅವರನ್ನು ಮತ್ತೊಮ್ಮೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚು ಎಂದುಹೇಳಲಾಗುತ್ತಿದೆ. ಅವರ ಸಂಘಟನಾ ಶಕ್ತಿ, ಹಿನ್ನಲೆ ಅನುಭವ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳು ಅವರಿಗೆ ಪ್ಲಸ್ ಆಗಬಹುದು. ಆದರೆ ಪಕ್ಕದ ಶಿಕಾರಿಪುರದ ಮಿಸಲಾತಿ ಬದಲಾದರೆ  ಯುವ ಮುಖಂಡರ ಒತ್ತಡ ಬಿಜೆಪಿ ಎದುರಿಸಬೇಕಾದ ಸವಾಲಾಗಿದೆ.

ಕಾಂಗ್ರೆಸ್ – ಸಿ.ಎಸ್. ಷಡಾಕ್ಷರಿ ಅಚ್ಚರಿ ಅಸ್ತ್ರ

ಕಾಂಗ್ರೆಸ್ ಪಕ್ಷವು ಶಿವಮೊಗ್ಗ ಕ್ಷೇತ್ರದಲ್ಲಿ ತನ್ನ ಬಲವರ್ಧನೆಗಾಗಿ ಅಚ್ಚರಿ ಅಸ್ತ್ರವನ್ನೇ ಡಿ.ಕೆ. ಶಿವಕುಮಾರ ಪ್ರಯೋಗಿಸಬಹುದು. ಎಂದು  ಶಿವಮೊಗ್ಗದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.!  ಸರ್ಕಾರಿ ನೌಕರರ ರಾಜ್ಯ ಅಧ್ಯಕ್ಷಸಿ.ಎಸ್ ಷಡಾಕ್ಷರಿ ಅವರನ್ನು ಅಭ್ಯರ್ಥಿ ಮಾಡುವ ಚರ್ಚೆ ನಡೆಯುತ್ತಿದೆ. ಅವರುಸ್ಪರ್ಧಿಸಿದರೆ  ಶಿವಮೊಗ್ಗದಲ್ಲಿ   ಭಾರೀ ರಾಜಕೀಯ ಸಂಗ್ರಾಮ ಅಗುವುದರಲ್ಲಿ ಸಂದೇಹವಿಲ್ಲ.ಅವರ ಸಂಘಟನಾ ಶಕ್ತಿ ಹಾಗೂ ಪ್ರಭಾವವು ಕಾಂಗ್ರೆಸ್‌ಗೆ ಬಲ ನೀಡಬಹುದು. ಅದರೆ ಅವರು ಎಲ್ಲೂ ಮತನಾಡಿಲ್ಲ ಅವರ ಅಭಿಮಾನಿಗಳು ಚುನಾವಣೆ  ನಿಲ್ಲವದು ಖಚಿತ  ಎನ್ನುತ್ತಾರೆ. ಆದರೆ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆ ಇನ್ನೂ ಬಲಗೊಳ್ಳಬೇಕಿದೆ. ಸ್ಥಳೀಯ ಮಟ್ಟದ ಕಾಂಗ್ರೆಸ್ನಾಯಕರು  ಸಿ.ಎಸ್. ಷಡಾಕ್ಷರಿ ಅವರಿಗೆ ಸಹಾಕರ ನೀಡುತ್ತಾರ ಎಂಬುವುದೆ ಯಕ್ಷ ಪ್ರಶ್ನೆ ಯಾಗಿದೆ..!

ಶಿವಮೊಗ್ ಕಾಂಗ್ರೆಸ್ ಪಕ್ಷದಿಂದ ಹೆಚ್.ಸಿ. ಯೋಗೀಶ್ ಅವರ ಹೆಸರು,

 ಮುನ್ನಲೆಯಲಿದ್ದು ಹಿಂದಿನ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದರೂ ಸೋಲಿನಾಸ್ಪದರಾದರು. ಇದೀಗ ಯುವ ಪೀಳಿಗೆಯ ಬೆಂಬಲವನ್ನುಗಳಿಸುತ್ತಾ ಸಂಘಟನೆಯ ತಾಲೀಮು ನಡೆಸುತ್ತಿರುವ ಯೋಗೀಶ್, ಪಕ್ಷದ ಪ್ರಮುಖ ಮುಖಂಡರೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಂಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠ ಅಭ್ಯರ್ಥಿಯಾಗಿ ಅವರನ್ನು ಮುಂದಿರಿಸಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.

ಜೆಡಿಎಸ್ – ಕೆ.ಬಿ. ಪ್ರಸನ್ನಕುಮಾರ ಮತ್ತೊಮ್ಮೆ ಕಣಕ್ಕಿಳಿದರೆ…

ಜೆಡಿಎಸ್ ಪಕ್ಷವು ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಹಿನ್ನಲೆಯಿಲ್ಲದಿದ್ದರೂ, ಕೆ.ಬಿ. ಪ್ರಸನ್ನಕುಮಾರ ಅವರಂತಹ ಅಭ್ಯರ್ಥಿ ಮೂಲಕ ಸಮುದಾಯ ಆಧಾರಿತ ಮತಗಳನ್ನು ಸೆಳೆಯಲು ಯತ್ನಿಸಬಹುದು. ಜೆಡಿಎಸ್ ಗೆಲುವಿನ ಸಾಧ್ಯತೆ ಕಡಿಮೆ ಇದ್ದರೂ, ಮತವಿಂಗಡಣೆಯ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಇಬ್ಬರಿಗೂ ತಲೆನೋವು ತರಬಹುದು.

ರಾಷ್ಟ್ರಭಕ್ತ ಬಳಗ – ಕಾಂತೇಶ್ ಅಚ್ಚರಿ ಮುಖ

ಹೊಸ ಪಕ್ಷದ ಮೂಲಕ ರಾಷ್ಟ್ರಭಕ್ತ ಬಳಗವು ಶಿವಮೊಗ್ಗದ ರಾಜಕೀಯಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಕೆ.ಈ. ಕಾಂತೇಶ್ ಅವರ ಹೆಸರನ್ನು ಮುಂದುವರಿಸಲಾಗುತ್ತಿದ್ದು, ಅವರು ಸಾಮಾಜಿಕ ಚಟುವಟಿಕೆಗಳ ಮೂಲಕ ಜನಪ್ರಿಯರಾಗಿದ್ದಾರೆ. ಬದಲಾವಣೆಯ ಆಶೆಯನ್ನು ಹೊತ್ತು ತರುವ ಮುಖವಾಡ ಅವರಿಗೆ ಸಹಕಾರಿಯಾಗಬಹುದು. ಆದರೆ ಹೊಸ ಪಕ್ಷದಿಂದ ಗೆಲುವು ಸಾಧಿಸಿಲು ಅವರ ತಂದೆ ಶಿವಮೊಗ್ಗದಲ್ಲಿ ಪಕ್ಷ  ಕಟ್ಟಿ ಬೆಳೆಸಿದ್ದರು ಕೋನೆ ಹಂತದಲ್ಲಿ ಪಕ್ಷ ಬಿಟ್ಟು ರುವ ಕಾರಣ ಶಿವಮೊಗ್ಗ ಜನತೆ ಈ ಸರಿ ಕೈಹಿಡಿಯ ಬಹುದು ಎನ್ನುತ್ತಾರೆ ಶಿವಮೊಗ್ಗ ಜನತೆ.

ಶಿವಮೊಗ್ಗ ಕ್ಷೇತ್ರದ ಚುನಾವಣೆಯು ತ್ರಿಕೋಣಾತ್ಮಕ ಅಥವಾ ಚತುಷ್ಕೋಣಾತ್ಮಕ ಪೈಪೋಟಿ ತಾಳುವ ಲಕ್ಷಣಗಳು ಸ್ಪಷ್ಟವಾಗಿವೆ. ಬಿಜೆಪಿ ತನ್ನ ಬಲದಿಂದ ಮುನ್ನಡೆ ಸಾಧಿಸಲು ಬಯಸುತ್ತಿದ್ದು, ಕಾಂಗ್ರೆಸ್ ಅಚ್ಚರಿ ಕಾರ್ಡ್ ಆಡಲು ಸಿದ್ಧವಾಗಿದೆ. ಜೆಡಿಎಸ್ ಹಾಗೂ ರಾಷ್ಟ್ರಭಕ್ತ ಬಳಗವು ಸಮೀಕರಣ ಬದಲಿಸುವ ಶಕ್ತಿ ಹೊಂದಿವೆ.

ಜನರ ನಿರೀಕ್ಷೆ – ನಿರ್ಣಾಯಕ ಅಂಶ

ಈ ಬಾರಿ ಯುವಕರ ಭವಿಷ್ಯ, ಉದ್ಯೋಗಾವಕಾಶಗಳು, ಜನಸಮಾನ್ಯರ ಸಮಸ್ಯೆ, ಸ್ಥಳೀಯ ಅಭಿವೃದ್ಧಿ—all key deciding factors. ಯಾವ ಅಭ್ಯರ್ಥಿ ಜನಮನ ಗೆಲ್ಲಬಲ್ಲನೋ, ಅವನ ಪಾಲಿಗೆ ಗೆಲುವಿನ ಬಾಗಿಲು ತೆರೆದುಕೊಳ್ಳಲಿದೆ ಪ್ರಿಯ ಓದುಗರೇ, ಶಿವಮೊಗ್ಗ ರಾಜಕೀಯವು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯಕ್ಕೆ ಹೊಸ ಚರ್ಚಾ ಕೇಂದ್ರವಾಗುವುದು ಖಚಿತ. ಅಂತಿಮ ತೀರ್ಪು ಜನರ ಕೈಯಲ್ಲಿದೆ.

ಎನ್ ಅಂತಿರಾ..!      

                        ✍️ಸತೀಶ್ ಮುಂಚೆಮನೆ

Join WhatsApp

Join Now

Join Telegram

Join Now