ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗ ಲೋಕಸಭಾ ಟಿಕೆಟ್ ಶಿವಣ್ಣನಿಗೆ ಆಫರ್!!??

On: December 11, 2023 8:52 AM
Follow Us:
---Advertisement---

ಬೆಂಗಳೂರು: ಲೋಕಸಭಾ ಚುನಾವಣೆಗೆ ರೆಡಿಯಾಗು ಎಂದು ಹೇಳುವ ಮೂಲಕ ನಟ ಶಿವರಾಜ್ ಕುಮಾರ್ ಗೆ ಟಿಕೆಟ್ ಆಫರ್ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಆಹ್ವಾನಕ್ಕೆ ಶಿವರಾಜ್ ಕುಮಾರ್ ವೇದಿಕೆಯಲ್ಲಿಯೇ ನಯವಾಗಿ ನಿರಾಕರಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಶಿವರಾಜ್ ಕುಮಾರ್ ಗೆ ಲೋಕಸಭೆಗೆ ರೆಡಿಯಾಗು, ಟಿಕೆಟ್ ನೀಡುತ್ತೇನೆ ಎಂದು ರಾಜಕೀಯಕ್ಕೆ ಆಹ್ವಾನಿಸಿದ್ದರು.

ಡಿಸಿಎಂ ಆಹ್ವಾನಕ್ಕೆ ವೇದಿಕೆಯಲ್ಲಿಯೇ ಉತ್ತರಿಸಿದ ಶಿವಣ್ಣ, ನಮ್ಮದೇನಿದ್ದರೂ ಮೇಕಪ್ ಹಾಕೋದು ಸಿನಿಮಾ ಮಾಡೋದು ಅಷ್ಟೇ ಎಂದಿದ್ದಾರೆ.

ಶಿವಣ್ಣ ರೆಡಿಯಾಗಿ ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ ರಾಜಕೀಯಕ್ಕೆ ಅಂತ ಬೇರೆಯವರೇ ಇದ್ದಾರೆ. ನನ್ನ ತಂದೆ ಕೊಟ್ಟ ಬಳುವಳಿ ಒಂದೇ ಏನೆ ಆದ್ರೂ ಬಣ್ಣ ಹಚ್ಚಿ ಆಕ್ಟ್ ಮಾಡಿ ಅಂತ…. ಹಾಗಾಗಿ ರಾಜಕೀಯದ ಯೋಚನೆ ಇಲ್ಲ ಎಂದರು. ಪೊಲಿಟಿಕ್ಸ್ ಗೆ ಅಂತ ಬೇರೆ ಜನ ಇದಾರೆ. ಇನ್ನು ಗೀತಾ ಬೇಕಿದ್ದರೆ ರಾಜಕೀಯಕ್ಕೆ ಹೋಗಲಿ.

ಒಳ್ಳೆ ಕೆಲಸಮಾಡ್ತಾರೆ ಅಂದ್ರೆ ಯಾರು ಮಾಡಿದರೇನು ಒಳ್ಳೆಯದಾಗಬೇಕು ಅಷ್ಟೆ. ಪತ್ನಿ ರಾಜಕೀಯದಲ್ಲಿ ಇಷ್ಟವಿದೆ ಎಂದು ಹೇಳಿದರೆ ಪತ್ನಿ ಆಸೆ ನೆರವೇರಿಸಬೇಕಿದ್ದು ಗಂಡನ ಕರ್ತವ್ಯ ಹಾಗಾಗಿ ಅವರು ಬೇಕಿದ್ದರೆ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿ. ಹಿಂದೆ ನಿಂತು ಪ್ರೋತ್ಸಾಹಿಸುತ್ತೇನೆ ಎಂದು
ಡಾ. ಶಿವರಾಜಕುಮಾರ್ ರವರು ಹೇಳಿದರು.

Sathish munchemane

Join WhatsApp

Join Now

 

Read More