Thursday, 29 October 2026 — ಸಾತ್ವಿಕ ನುಡಿ

ಸಾತ್ವಿಕ ನುಡಿ

ಕನ್ನಡ ಸುದ್ದಿ ಅಂತರ್ಜಾಲ

ಹೊಸ ಸುದ್ದಿ
ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ತ್ಯಾಜುವಳ್ಳಿಯಲ್ಲಿ ಉದ್ದೇಶಿತ ಶ್ರೀ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ.! ಇದೀಗ ಬಂದ ಸುದ್ದಿ ಜಮಖಂಡಿಯಲ್ಲಿ ಕೆ.ಎಂ. ಸತೀಶ್ ಗೌಡ ಅವರಿಗೆ ‘ಸಾಧನ ಸಿರಿ’ ಪ್ರಶಸ್ತಿ ಪ್ರದಾನ.! ಜಿಲ್ಲಾ ಸುದ್ದಿ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಲಂಕೇಶ್ ಪತ್ರಿಕೆ ಮಾಡುತ್ತಿತ್ತು: ಕತ್ತಿಗೆ ಚನ್ನಪ್ಪ ಲೋಕಲ್ ಸುದ್ದಿ ಹುಟ್ಟುಹಬ್ಬದ ಸಂಭ್ರಮಕ್ಕೆ ಮಾನವೀಯ ಸ್ಪರ್ಶ: ಮೆಗ್ಗಾನ್ ಆಸ್ಪತ್ರೆಯಲ್ಲಿ 600 ಮಂದಿಗೆ ಅನ್ನದಾಸೋಹ ಜಿಲ್ಲಾ ಸುದ್ದಿ ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ ಇದೀಗ ಬಂದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಗೌರವ: ಶ್ರೀಚಂದ್ರಕಾಂತ್, ಜೇಸುದಾಸ್ ಅವರಿಗೆ ಅಭಿನಂದನೆ ಇದೀಗ ಬಂದ ಸುದ್ದಿ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್. ಜಿಲ್ಲಾ ಸುದ್ದಿ ಮಲೆನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಶಿವಮೊಗ್ಗ ದಸರಾ ಇದೀಗ ಬಂದ ಸುದ್ದಿ ತ್ಯಾಜುವಳ್ಳಿಯಲ್ಲಿ ಉದ್ದೇಶಿತ ಶ್ರೀ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ.! ಇದೀಗ ಬಂದ ಸುದ್ದಿ ಜಮಖಂಡಿಯಲ್ಲಿ ಕೆ.ಎಂ. ಸತೀಶ್ ಗೌಡ ಅವರಿಗೆ ‘ಸಾಧನ ಸಿರಿ’ ಪ್ರಶಸ್ತಿ ಪ್ರದಾನ.! ಜಿಲ್ಲಾ ಸುದ್ದಿ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಲಂಕೇಶ್ ಪತ್ರಿಕೆ ಮಾಡುತ್ತಿತ್ತು: ಕತ್ತಿಗೆ ಚನ್ನಪ್ಪ ಲೋಕಲ್ ಸುದ್ದಿ ಹುಟ್ಟುಹಬ್ಬದ ಸಂಭ್ರಮಕ್ಕೆ ಮಾನವೀಯ ಸ್ಪರ್ಶ: ಮೆಗ್ಗಾನ್ ಆಸ್ಪತ್ರೆಯಲ್ಲಿ 600 ಮಂದಿಗೆ ಅನ್ನದಾಸೋಹ
ಜಿಲ್ಲಾ ಸುದ್ದಿ

ಶಿವಮೊಗ್ಗದ ಮೈ ಜಿಮ್ ನಲ್ಲಿ ಆಯುಧ ಪೂಜೆ ಸಂಭ್ರಮ: ಪವರ್ ಲಿಫ್ಟಿಂಗ್, ಕಾರ್ಡಿಯೋ ವಿಜೇತರಿಗೆ ಬಹುಮಾನ ವಿತರಣೆ

Sathish munchemane
ವರದಿ: Sathish munchemane ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 220 ವೀಕ್ಷಣೆಗಳು

ಶಿವಮೊಗ್ಗ: ನಗರದ ಪ್ರತಿಷ್ಠಿತ ಕಿರಣ್ಸ್ ಮೈ ಜಿಮ್ ನಲ್ಲಿ ಆಯುಧ ಪೂಜೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಪವರ್ ಲಿಫ್ಟಿಂಗ್ ಹಾಗೂ ಕಾರ್ಡಿಯೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಕಾರಿಯಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅಭಿನಂದಿಸಿದರು. ಇವರೊಂದಿಗೆ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಭಾರತೀಯ ಅವರು ಕೂಡ ವಿಜೇತ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಿದರು

ಜಿಮ್ ಎಂದರೆ ಶಿಸ್ತಿನ ಪ್ರತೀಕ: ಕಿರಣ್ ಸಾಗರ್

ಪ್ರಸ್ತಾವಿಕವಾಗಿ ಮಾತನಾಡಿದ ಜಿಮ್ ಮಾಲೀಕ ಕಿರಣ್ ಸಾಗರ್ ಅವರು, “ಜಿಮ್ ಎಂದರೆ ಕೇವಲ ದೇಹವನ್ನು ಬಲಿಷ್ಠಗೊಳಿಸುವ ಸ್ಥಳವಲ್ಲ. ಅದು ಶಿಸ್ತು, ಆತ್ಮವಿಶ್ವಾಸ, ತಾಳ್ಮೆ ಮತ್ತು ಗುರಿ ಸಾಧಿಸುವ ಮನೋಬಲವನ್ನು ಬೆಳೆಸುವ ದೇವಸ್ಥಾನ. ಇಂದು ಗೆಲುವು ಸಾಧಿಸಿದ ಪ್ರತಿಯೊಬ್ಬ ಸದಸ್ಯರು ತಮ್ಮ ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ASP ಸಾಹೇಬರು ಆಗಮಿಸಿರುವುದು ನಮ್ಮೆಲ್ಲ ಸದಸ್ಯರಿಗೆ ಮತ್ತಷ್ಟು ಪ್ರೇರಣೆ ನೀಡಿದೆ” ಎಂದು ಹೇಳಿದರು.

*ದಿನಕ್ಕೆ ಒಂದು ಗಂಟೆ ಆರೋಗ್ಯಕ್ಕೆ ಮೀಸಲಿಡಿ: ASP ಕಾರಿಯಪ್ಪ ಕರೆ*

ಬಳಿಕ ಮಾತನಾಡಿದ ASP ಕಾರಿಯಪ್ಪ ಅವರು, “ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಕಾರ್ಯ ಒತ್ತಡಗಳ ನಡುವೆಯೂ ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ದೇಹದ ಆರೋಗ್ಯ ಮತ್ತು ಶಿಸ್ತಿಗಾಗಿ ಮೀಸಲಿಡಬೇಕು. ಪ್ರತಿನಿತ್ಯ ಜಿಮ್ ನಲ್ಲಿ ಪಾಲ್ಗೊಳ್ಳುವುದು ಅತ್ಯಂತ ಮುಖ್ಯ. ಎಲ್ಲ ವಿಜೇತರಿಗೆ ಅಭಿನಂದನೆಗಳು. ಇಂತಹ ಆರೋಗ್ಯಕರ ಸ್ಪರ್ಧೆಗಳನ್ನು ನಿರಂತರವಾಗಿ ಆಯೋಜಿಸಿ ದೈಹಿಕ ಚಟುವಟಿಕೆಗೆ ಉತ್ತೇಜನ ನೀಡುತ್ತಿರುವ ಮಾಲೀಕರಾದ ಕಿರಣ್ ಸಾಗರ್, ಲಕ್ಷ್ಮಿ ಹಾಗೂ ತರಬೇತುದಾರರಾದ ಚೇತನ್, ಗಂಗಾಧರ್, ಕಾರ್ತಿಕ್ ಮತ್ತು ಕಾರ್ತಿಕ್ ಎಸ್. ನಾಯಕ್ ಅವರ ಕಾರ್ಯ ಶ್ಲಾಘನೀಯ” ಎಂದು ಶುಭ ಹಾರೈಸಿದರು.

ವಿಜೇತರ ಪಟ್ಟಿ:

ಹಿರಿಯ ಪುರುಷರ ವಿಭಾಗ – ಪವರ್ ಲಿಫ್ಟಿಂಗ್:

ಪ್ರಥಮ – ತನೂಜ್ (260 ಕೆ.ಜಿ.), ದ್ವಿತೀಯ – ಮಹೇಶ್ (250 ಕೆ.ಜಿ.), ತೃತೀಯ – ನಾಮದೇವ್ (245 ಕೆ.ಜಿ.)

ಕಿರಿಯ ಪುರುಷರ ವಿಭಾಗ – ಪವರ್ ಲಿಫ್ಟಿಂಗ್:

ಪ್ರಥಮ – ಅಂಕಿತ್, ದ್ವಿತೀಯ – ಅಮೋಘ, ತೃತೀಯ – ಮಂಜುನಾಥ್

ಹಿರಿಯ ಮಹಿಳೆಯರ ವಿಭಾಗ – ಕಾರ್ಡಿಯೋ:

ಪ್ರಥಮ – ಅರ್ಚನಾ, ದ್ವಿತೀಯ – ರೇಖಾ, ತೃತೀಯ – ಶಿಲ್ಪಾ

ಕಿರಿಯ ಮಹಿಳೆಯರ ವಿಭಾಗ – ಕಾರ್ಡಿಯೋ:

ಪ್ರಥಮ – ಲಾವಣ್ಯ, ದ್ವಿತೀಯ – ಮುಸ್ಕಾನ್, ತೃತೀಯ – ಅರ್ಚನಾ

ಕಾರ್ಯಕ್ರಮದಲ್ಲಿ ಜಿಮ್ ನ ಎಲ್ಲ ಸದಸ್ಯರು, ಸ್ಪರ್ಧಾಳುಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಮುಖ್ಯ ಸಂಪಾದಕರು (Chief Editor) ✍️ 732 ಲೇಖನಗಳು

Sathish munchemane

Sathish munchemane ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment