ರಸ್ತೆ ನಿನ್ನ ಅಪ್ಪನದಾ? – ಸಾರ್ವಜನಿಕರಿಗೆ ದಿಕ್ಕಿಲ್ಲದ ಶಿವಮೊಗ್ಗ ಮಹಾನಗರ ಪಾಲಿಕೆ!
ಶಿವಮೊಗ್ಗ ನಗರದ ಹೃದಯ ಭಾಗವಾಗಿರುವ ಕುವೆಂಪು ರಸ್ತೆ ಇತ್ತೀಚೆಗೆ ಒಂದು ವಿಚಿತ್ರ ಕೃತ್ಯದ ಮೂಲಕ ಸುದ್ದಿಯಲ್ಲಿದೆ.
ಈ ಹೋಟೆಲ್‍ನ ಹೆಸರು “GRUB MONKEYS” – ‘ತಿನ್ನುವ ಮಂಗಗಳು’ ಎಂಬ ಅರ್ಥ ಬರುವಂತೆ ಇದೆ! ಇದು ತಾವು ನೀಡುತ್ತಿರುವ ಸೇವೆಯ ತಳಮಟ್ಟವನ್ನೇ ತೋರುತ್ತದೆ. ಸಾರ್ವಜನಿಕ ಸ್ಥಳವನ್ನು ಕಬಳಿಸಿ ಹೀಗೆ ದುಡ್ಡು ಮಾಡಿ ಎಂಜಾಯ್ ಮಾಡುವವರು ಈ ನಗರಕ್ಕಾಗಿ ಹೇಗೆ ಧನ್ಯರು?
“GRUB MONKEYS” ಎಂಬ ಖಾಸಗಿ ಹೋಟೆಲ್ನವರು ತಮ್ಮ ಅಂಗಡಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ, ಸಾರ್ವಜನಿಕ ರಸ್ತೆಯ ಭಾಗವನ್ನೇ ತಮ್ಮ ಸ್ವತ್ತಾಗಿ ಪರಿಗಣಿಸಿ ಅಲ್ಲಿ ಕಬ್ಬಿಣದ ಬೇಲಿ ಹಾಕಿದ್ದಾರೆ!
ಜನತೆ ತನ್ನದೇನಾದರೂ ಒಂದು ಸಣ್ಣ ದ್ವಿಚಕ್ರ ವಾಹನ ನಿಲ್ಲಿಸಿದರೆ, ಅಲ್ಲಿನ ಸಿಬ್ಬಂದಿಯು ಜಗಳಕ್ಕೆ ಇಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕುವೆಂಪು ರಸ್ತೆ ನಗರದಲ್ಲಿ ಜನಸಂಚಾರ ಹೆಚ್ಚು ಇರುವ ಮಾರ್ಗವಾಗಿದೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಹಿಂಭಾಗಕ್ಕೂ ಇದು ಪ್ರಮುಖ ಸಂಪರ್ಕ ಮಾರ್ಗವಾಗಿದೆ. ದಿನಂಪ್ರತಿ ಸಾವಿರಾರು ಜನರು, ರೋಗಿಗಳ ಸಂಬಂಧಿಕರು ಇಲ್ಲಿ ಓಡಾಡುತ್ತಿದ್ದಾರೆ. ಇಂತಹ ರಸ್ತೆಯಲ್ಲಿ ಕೇವಲ ಕೆಲ ನಿಮಿಷ ದ್ವಿಚಕ್ರ ವಾಹನ ನಿಲ್ಲಿಸಿದರೆ ಕೂಡ ಜಗಳ, ಅವಮಾನ ಎದುರಿಸಬೇಕಾಗಿದೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳೆ “ನೀವು ಯಾರಿಗಾಗಿ ಕೆಲಸ ಮಾಡುತ್ತಿದ್ದೀರಿ? ಸಾರ್ವಜನಿಕರಿಗಾಗಿ ಅಲ್ಲವೇ?” ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಪೋನ್ ಕರೆಗಳನ್ನು ಮೋದಲು ಸ್ವಕರಿಸಿ ಶಿವಾನಂದ ರವರೆ.?ground-level ನಲ್ಲಿ ನಡೀತಿರುವ ಕ್ರಿಯೆಗಳು ಇದಕ್ಕೆ ವಿರುದ್ಧವಾದ ಚಿತ್ರಣವನ್ನು ನೀಡುತ್ತಿವೆ. ಸಾರ್
ಇದರಿಂದಾಗಿ ಮಹಾನಗರಪಾಲಿಕೆ ತಕ್ಷಣವೇ ಎಚ್ಚೆತ್ತು, ಸಾರ್ವಜನಿಕ ಹಿತದೃಷ್ಟಿಯಿಂದ ಈ ರೀತಿಯ ಅಕ್ರಮ ತಡೆಯೊಡ್ಡಬೇಕು. ಇಲ್ಲವಾದರೆ, ನಾಗರಿಕರು ಮಹಾನಗರ ಪಾಲಿಕೆ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.