ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಉದ್ಯಮ–ಉದ್ಯೋಗ ಸೃಷ್ಟಿಯಲ್ಲಿ ‎ವಿಶ್ವಮಟ್ಟದ ಗುರುತು ಮೂಡಿಸಿದ ರುದ್ರೇಗೌಡರಿಗೆ 76ನೇ ವಸಂತ.! ‎

On: January 9, 2026 8:23 PM
Follow Us:
---Advertisement---

ಸಾಮಾನ್ಯ ಬದುಕಿನೊಳಗೆ ಅಸಾಮಾನ್ಯ ಸಾಧನೆಗಳನ್ನು ಅಳವಡಿಸಿಕೊಂಡ ವ್ಯಕ್ತಿತ್ವವೇ ಶ್ರೀಯುತ ರುದ್ರೇಗೌಡರು. ಶಿಸ್ತು, ಸಾದುತನ, ಸೌಮ್ಯತೆ, ಸರಳತೆ, ಪ್ರಾಮಾಣಿಕತೆ ಹಾಗೂ ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಎಂಬ ಮೌಲ್ಯಗಳನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿರುವ ಅವರು 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಯಾವುದೇ ಹುದ್ದೆ, ಸ್ಥಾನಮಾನಕ್ಕಿಂತ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದ ರುದ್ರೇಗೌಡರು, ಕೆ.ಪಿ.ಎಸ್.ಸಿ.  ಸರ್ಕಾರದ ಹುದ್ದೆ ದೊರೆತ ಸಂದರ್ಭದಲ್ಲೂ ಹಣದ ಲಾಲಸೆಗೆ ಒಳಗಾಗದೆ, ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ದೊರಕಿಸಿಕೊಡುವಲ್ಲಿ ನಿಸ್ವಾರ್ಥ ಹಾಗೂ ಮೌನ ಸೇವೆ ಸಲ್ಲಿಸಿದರು. ಈ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನವನ್ನು ಗಳಿಸಿದರು.

ಸಾವಿರಾರು ಕುಟುಂಬಗಳ ಬದುಕಿಗೆ ಸ್ಥಿರತೆ ನೀಡುವಂತೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದ ಅವರು, ಶ್ರಮಾಧಾರಿತ ಬದುಕಿನ ಮೌಲ್ಯವನ್ನು ಕಾರ್ಯರೂಪದಲ್ಲಿ ಸಾಬೀತುಪಡಿಸಿದ ಸಾಮಾಜಿಕ ನಾಯಕನಾಗಿದ್ದಾರೆ.

ಅವಕಾಶಕ್ಕಾಗಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ, ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸ್ಪಷ್ಟ ದೃಷ್ಟಿಕೋನದೊಂದಿಗೆ ಕೆಲಸ ಮಾಡಿದ ರುದ್ರೇಗೌಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಮನ್ವಯ ಸಾಧಿಸಿ ಮಾಚೇನಹಳ್ಳಿ ಕೈಗಾರಿಕಾ ವಲಯಕ್ಕೆ ರಸ್ತೆ, ವಿದ್ಯುತ್, ನೀರು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಇದರಿಂದಾಗಿ ಜಿಲ್ಲೆಯ ಅನೇಕ ನಿರುದ್ಯೋಗಿ ಯುವಕರಿಗೆ ಉದ್ಯೋಗದ ದಾರಿ ತೆರೆಯಿತು.

ಶಿವಮೊಗ್ಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲು ಅಗತ್ಯವಾದ ಅನುಕೂಲಕರ ವಾತಾವರಣ ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದ್ದ ಅವರು, ಸ್ಥಳೀಯ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವ ಜೊತೆಗೆ ವಿದೇಶಿ ವ್ಯಾಪಾರ ಸಂಪರ್ಕಗಳನ್ನು ಕಲ್ಪಿಸಿದರು. ಇದರ ಫಲವಾಗಿ ಹಲವು ವಿದೇಶಿ ಕಂಪನಿಗಳು ಶಿವಮೊಗ್ಗದತ್ತ ಆಕರ್ಷಿತರಾಗಿ ಬಂದಿದ್ದು, ಗೌಡರ ಶಾಂತಲ ಫೌಂಡ್ರಿ ವಿದೇಶಗಳಲ್ಲಿಯೂ ವಿಶ್ವಖ್ಯಾತಿಯ ಮನ್ನಣೆ ಪಡೆಯುವಂತೆ ಮಾಡಿದರು.

ಉದ್ಯಮ ಕ್ಷೇತ್ರದಲ್ಲಿ ಶಿವಮೊಗ್ಗವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸುವಲ್ಲಿ ರುದ್ರೇಗೌಡರ ಕೊಡುಗೆ ಮಹತ್ವದ್ದಾಗಿದೆ.

ವಿಶ್ವಗುರು ಬಸವೇಶ್ವರರ ಕಾಯಕ–ದಾಸೋಹ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಅವರು, ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದಾರೆ.

ಯುವಪೀಳಿಗೆಯ ಸಬಲೀಕರಣವೂ ರುದ್ರೇಗೌಡರ ಸೇವೆಯ ಪ್ರಮುಖ ಅಂಶವಾಗಿದೆ ಶಿಕ್ಷಣ, ಸ್ವಾವಲಂಬನೆ, ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳ ಕುರಿತು ಯುವಕರಿಗೆ ದಿಕ್ಕು ತೋರಿಸುವ ಮೂಲಕ ಅನೇಕರು ತಮ್ಮ ಜೀವನದಲ್ಲಿ ದೃಢ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಿದವರು. ವಯಸ್ಸಿನ ಮಿತಿ ಇಲ್ಲದೆ, ಇಂದಿಗೂ ಸಮಾಜಮುಖಿ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಚುರುಕಾಗಿ ತೊಡಗಿರುವುದು ಅವರ ಕಾರ್ಯಶೈಲಿಯ ವಿಶಿಷ್ಟತೆ.

ಮಾನವೀಯ ಸೇವೆ, ಉದ್ಯಮಾಭಿವೃದ್ಧಿ ಹಾಗೂ ಸಾರ್ವಜನಿಕ ಬದುಕಿಗೆ ಸಲ್ಲಿಸಿದ ಅಪಾರ ಕೊಡುಗೆಗಾಗಿ ಅನೇಕ ಗೌರವಗಳು ಲಭಿಸಿದ್ದರೂ, ಜನರ ಪ್ರೀತಿ ಮತ್ತು ವಿಶ್ವಾಸವನ್ನೇ ತಮ್ಮ ದೊಡ್ಡ ಪ್ರಶಸ್ತಿಯೆಂದು ಭಾವಿಸುವ ಸರಳತೆ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.

76ನೇ ಹುಟ್ಟುಹಬ್ಬದ ಈ ಸಂದರ್ಭದಲ್ಲಿ, ಸಮಾಜ ಹಾಗೂ ಉದ್ಯಮ ಕ್ಷೇತ್ರಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ಈ ಹಿರಿಯ ನಾಯಕನಿಗೆ ದೀರ್ಘ ಆಯುಷ್ಯ, ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಸೇವಾ ಅವಕಾಶಗಳು ದೊರಕಲಿ ಎಂಬ ಶುಭಾಶಯಗಳು ವಿವಿಧ ವಲಯಗಳಿಂದ ವ್ಯಕ್ತವಾಗುತ್ತಿವೆ.

Sathish munchemane

Join WhatsApp

Join Now

 

Read More