ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ವಸೂಲಿ ಶಿಸ್ತು ಪಾಲನೆ ಮೂಲಕ ಸಹಕಾರ ಸಂಘಗಳಉಳಿವು ಅಗತ್ಯ ಆರ್.ಎಂ.ಮಂಜುನಾಥಗೌಡ.! ‎

On: December 30, 2025 5:42 PM
Follow Us:
---Advertisement---

ಶಿವಮೊಗ್ಗ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ಜಿಲ್ಲಾ ವಿಶೇಷ ಸಹಕಾರ ತರಬೇತಿ ಶಿಬಿರವನ್ನು  ಉದ್ಘಾಟನೆಯನ್ನು ಶಿವಮೊಗ್ಗ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರು ಹಾಗೂ ಸಹಕಾರ ರತ್ನ ಡಾ.ಆ‌ರ್.ಎಂ.ಮಂಜುನಾಥಗೌಡರು ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತ  ನಬಾರ್ಡ್ ಸಾಲ ವ್ಯವಸ್ಥೆ, ವಸೂಲಿ ಶಿಸ್ತು ಪಾಲನೆ ಮೂಲಕ ಸಹಕಾರ ಸಂಘಗಳ ಉಳಿವು ಅಗತ್ಯ: ನಬಾರ್ಡ್ ಬಡ್ಡಿದರ, ಸಾಲ ವಸೂಲಿ ಮತ್ತು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ (ಪಿಎಸಿಎಸ್) ಭವಿಷ್ಯದ ಬಗ್ಗೆ ಮಹತ್ವದ ಸಲಹೆಗಳನ್ನು ನೀಡಿದರು.

‎ನಬಾರ್ಡ್ ಮೊದಲು 18% ಬಡ್ಡಿಗೆ ಸಾಲ ನೀಡುತ್ತಿದ್ದು, ನಂತರ 16% ಆಗಿ ಇತ್ತೀಚೆಗೆ 9% ಅಗಿ ಮತ್ತಷ್ಟು ಕಡಿಮೆಯಾಗಿದೆ.

ಆದರೆ ಮುಂದಿನ ದಿನಗಳಲ್ಲಿ ನಬಾರ್ಡ್ ಸಾಲ ನೀಡುವುದನ್ನು ನಿಲ್ಲಿಸಿದರೆ, ಸಹಕಾರ ಸಂಘಗಳು ರೈತರಿಗೆ ಸಾಲ ಹಾಗೂ ಕೃಷಿ ಉಪಕರಣಗಳನ್ನು ಹೇಗೆ ಒದಗಿಸುತ್ತವೆ ಎಂಬುದನ್ನು ಈಗಲೇ ಚಿಂತಿಸಬೇಕು ಎಂದು ಹೇಳಿದರು.

ರೈತರಿಗೆ ಕೃಷಿ ಉಪಕರಣ ಒದಗಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು ಕೆಲವು ಸಹಕಾರ ಸಂಘಗಳು ಸದಸ್ಯರಿಗೆ ಅತೀ ಕಡಿಮೆ ದರದಲ್ಲಿ ಮಚ್ಚು ಸೇರಿದಂತೆ ವಿವಿಧ ಕೃಷಿ ಉಪಕರಣಗಳನ್ನು ಒದಗಿಸುತ್ತಿರುವುದು ಸಂತೋಷದ ಸಂಗತಿ. ಹಿಂದೆ ಆರ್ಥಿಕ ಸಂಕಷ್ಟದಲ್ಲಿದ್ದ ಕೆಲವು ಸಂಘಗಳು ಇಂದು ಉತ್ತಮ ಸ್ಥಿತಿಗೆ ಬಂದಿವೆ. ಸಹಕಾರ ಸಂಘಗಳು ಮಾಲ್‌ಗಳಂತೆ ಕಾರ್ಯನಿರ್ವಹಿಸಬೇಕು. ಎಂ.ಎಸ್.ಸಿ ಮತ್ತು ಸಿ.ಎಸ್.ಸಿ ಕೇಂದ್ರಗಳು ಸಕ್ರಿಯವಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಡಿಮೆ ವ್ಯವಹಾರ ನಡೆಸುವ ಕೆಲವು ಸಂಘಗಳು ನಾಲ್ಕು ಕೋಟಿ ರೂ.ಗಳಷ್ಟು ಸಾಲ ನೀಡಿದ್ದರೂ, ಸಾಲ ವಸೂಲಿ ಸಮರ್ಪಕವಾಗಿ ಆಗದ ಸ್ಥಿತಿ ಇದೆ. ಸಾಲ ಉಸಿರಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಕಾರ್ಯದರ್ಶಿಗಳಿಗೆ ಹೆಚ್ಚಿನ ಸಂಬಳ ನೀಡಿರುವ ಉದಾಹರಣೆಗಳನ್ನು ಉಲ್ಲೇಖಿಸಿ,ಹಣದದುರುಪಯೋಗವಾಗದಂತೆ ಎಚ್ಚರ ವಹಿಸಬೇಕೆಂದರು.

ನಿರ್ದೇಶಕರು ಇಲ್ಲಿ ಪಡೆದ ಮಾಹಿತಿಯನ್ನು ತಮ್ಮ ತಮ್ಮ ಸಂಘಗಳಲ್ಲಿ ಚರ್ಚಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ನಷ್ಟಕ್ಕೆ ಹೋಗುವ ಸಾಧ್ಯತೆ ಇದೆ. ನಿರ್ದೇಶಕರಾಗುವುದು ಅಧಿಕಾರವಲ್ಲ, ಅದು ಸೇವೆ ಮಾಡುವ ಅವಕಾಶ ಎಂದು ಹೇಳಿದರು. ಹಿಂದಿನ ದಿನಗಳಲ್ಲಿ ಅಧ್ಯಕ್ಷರು ಮತ್ತು ಸಿಬ್ಬಂದಿ ಅಲ್ಪ ಸಂಬಳಕ್ಕೆ ಸೇವೆ ಸಲ್ಲಿಸುತ್ತಿದ್ದ ಉದಾಹರಣೆ ನೀಡಿ ಸಭಿಕರಲ್ಲಿ ನಗೆ ಚಟಾಕಿ ಹಾರಿಸಿದರು.

‎ಸಾಲ ನೀಡುವಾಗ ರೈತ ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿದ್ದಾನೆಯೇ ಎಂಬುದನ್ನು ಅರಿತುಕೊಳ್ಳಬೇಕು ತಮ್ಮ ಅಂಗಡಿ ನಡೆಸುವಂತೆ ಸೊಸೈಟಿ ನಡೆಸಬೇಕು ಬಡ್ಡಿ ವಿಧಿಸದೇ ಇದ್ದರೆ ಸಂಘಗಳನ್ನು ನಡೆಸುವುದು ಕಷ್ಟವಾಗುತ್ತದೆ  ಕೆಲವು ಸಂಘಗಳಿಗೆ ಕಚೇರಿಯೇ ಇಲ್ಲದೆ ಗೋದಾಮುಗಳಲ್ಲಿ ವ್ಯವಹಾರ ನಡೆಯುತ್ತಿರುವುದು ಆತಂಕಕಾರಿ ಎಂದು ಹೇಳಿದರು.

‎ತೆಲಂಗಾಣದಲ್ಲಿ ಲಕ್ಷಾಂತರ ಎಕರೆ ಅಡಿಕೆ ಬೆಳೆ ಬೆಳೆಯುತ್ತಿರುವುದರಿಂದ, ಅದು ಮಾರುಕಟ್ಟೆಗೆ ಬಂದರೆ ಕರ್ನಾಟಕದಲ್ಲಿ ಅಡಿಕೆ ಬೆಲೆ ಕುಸಿಯುವ ಸಾಧ್ಯತೆ ಇದೆ ಆದ್ದರಿಂದ ರೈತರು ಬೆಳೆ ವೈವಿಧ್ಯೀಕರಣಕ್ಕೆ ಒತ್ತು ನೀಡಬೇಕು ನೀವು ನೀಡಿದ ಸಾಲ ಶೇ.100 ರಷ್ಟು ವಸೂಲಾಗಬೇಕು ಈ ರೀತಿಯ ಚಿಂತನೆಯೊಂದಿಗೆ ಪ್ರಾಥಮಿಕ ಸಹಕಾರ ಸಂಘಗಳನ್ನು ಉಳಿಸುವ ಪ್ರಯತ್ನ ಮಾಡಬೇಕು. ನಬಾರ್ಡ್ 9.5% ಬಡ್ಡಿ ವಿಧಿಸುತ್ತಿದ್ದು, ನಬಾರ್ಡ್‌ಗೆ ನಾವು ಈಗಾಗಲೇ 100 ಕೋಟಿ ರೂ. ಬಡ್ಡಿ ಕಟ್ಟಿದ್ದೇವೆ. ಆದರೆ ಕೆಲವು ಸಂಘಗಳು ಇನ್ನೂ ಡಿಸಿಸಿ ಬ್ಯಾಂಕ್‌ಗೆ ಸಾಲ ತೀರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು

‎ಉದಾಹರಣೆಯಾಗಿ,ನಿರ್ದೆಶಕರ ಪ್ರೆಶ್ನೆಗೆ ಉದಾಹರಣೆ ನೀಡಿ ಹಿಂದೆ ಜೈಲ್ ಸರ್ಕಲ್ನಲ್ಲಿ  ಕೋತಂಬರಿ ಸಪ್ಪು ಕರಿಬೆ ಸಪ್ಪುಗೆ 10 ರೂಗೆ ತೆಗೆದುಕೋಡೆ ಅದೆ ಡಿ.ಹೆಚ್ ಶಂಕರಮುರ್ತಿಯವರು ಅವರ ಹತ್ತಿರ ಚರ್ಚೆ ಮಾಡಿ 15 ಕಟ್ಟಿಗೆ ಹತ್ತು ರೂ ಗೆ ತೆಗೆದುಕೋಂಡರು ಉದಹಾರಣೆ ನೀಡಿ ನಗೆ ಚಟಾಕಿ ಹಾರಿಸಿದರು

ನಮ್ಮ ಕಾಲದಲ್ಲಿ ಎಸ್ ಎಸ್.ಎಲ್.ಸಿ.ಯಲ್ಲಿ  ಆಕಳಿಗೆ ಎಷ್ಟು ಕಾಲು ಎಂದರೆ ನಾಲ್ಕು ಕಾಲು ಎಂದು ಪರಿಕ್ಷೆಯಲ್ಲಿ ಬರದರೆ ಮಾಕ್ಸ್ ಈಗ ಮೂರು ಕಾಲು ಎಂದು ಬರದರೆ ಅರ್ದ ಮಾಕ್ಸ್ ನೀಡುತ್ತಾರೆ ಹಿಗೆ  ಹಾಗಾಗಿ ಈ ಪರಿಕ್ಷೆಗಳಲ್ಲಿ ಜಾಸ್ತಿ ಮಾಕ್ಸ್ ಬರುತ್ತದೆ ಎಂದರು.ಇಂದಿನ ಶಿಕ್ಷಣ ವ್ಯವಸ್ಥೆಯಲ್ಲೂ ಅಂಕಗಳ ದಯಾಳುತನದ ಬಗ್ಗೆ ವ್ಯಂಗ್ಯವಾಡಿ ಸಭಿಕರನ್ನು ನಗಿಸಿದರು.

ರೈತರಿಗೆ ನಿಯಮಗಳ ಬಗ್ಗೆ ತಿಳಿಸಿ, ಅನುಭವದ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು. ಸಹಕಾರ ಸಂಘಗಳು ಉಳಿಯಬೇಕು ಎಂಬುದೇ ನಮ್ಮ ಗುರಿ ಎಂದು ತಿಳಿಸಿದರು.

‎ಇದೇ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕಿನ ಇಬ್ಬರನ್ನು ಗಣರಾಜೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಈ ಗೌರವ ದೊರೆಯಬೇಕು ಎಂದರು.

ಸಹಕಾರ ಸಂಘಗಳಲ್ಲಿ ನಾಯಕತ್ವ ಮತ್ತು ವ್ಯವಹಾರ ವೈವಿಧ್ಯೀಕರಣ ಅವಶ್ಯಕತೆ –

‎ ಶ್ರೀ ವಸಂತ ನಾಯ್ಕ ರಾಷ್ಟ್ರೀಯ ಸಹಕಾರಿ ತರಬೇತಿ ಪರಿಷತ್ (ನಿವೃತ್ತ) ನಿರ್ದೇಶಕರಾದ ಶ್ರೀ ವಸಂತ ನಾಯ್ಕ ಬಿ.

ಅವರು ಸಹಕಾರ ಸಂಘಗಳಲ್ಲಿ ನಾಯಕತ್ವದ ಮಹತ್ವ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವ್ಯವಹಾರ ವೈವಿಧ್ಯೀಕರಣದ ಅಗತ್ಯತೆಯ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, 2006–07ರಲ್ಲಿ ಪ್ರೊಫೆಸರ್ ವೈದ್ಯನಾಥ್ ಅವರು ಸಾವಿರ ಕೋಟಿ ರೂಪಾಯಿ ಮೌಲ್ಯದ ಸಹಕಾರ ಸಂಘಗಳಿಗೆ ಮುನ್ನಡಿ ಬರೆದಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ನಬಾರ್ಡ್ ಸಂಸ್ಥೆ ಸಹಕಾರ ಸಂಘಗಳಿಗೆ ನೀಡುತ್ತಿರುವ ಹಣವನ್ನು ಕಡಿಮೆ ಮಾಡಿದೆ ಎಂದು ಹೇಳಿದರು.

‎ಭಾರತ ಸರ್ಕಾರ ಸಹಕಾರ ಸಂಘಗಳ ಉನ್ನತೀಕರಣಕ್ಕಾಗಿ ರಚಿಸಿದ್ದ ಏಳು ಸದಸ್ಯರ ಸಮಿತಿಯಲ್ಲಿ ತಾನು ಸದಸ್ಯನಾಗಿದ್ದೆ ಎಂದು ತಿಳಿಸಿದ ಅವರು, ವಿವಿಧ ದೇಶಗಳಲ್ಲಿ ಸಹಕಾರ ಸಂಘಗಳ ಕುರಿತು ತರಬೇತಿ ನೀಡಿದ ಅನುಭವವನ್ನೂ ಹಂಚಿಕೊಂಡರು.

‎ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಿಗೆ ನಾಯಕತ್ವದ ಅರ್ಥವನ್ನು ವಿವರಿಸುತ್ತಾ, ನಮ್ಮನ್ನು ಸಮಾಜ ಯಾವಾಗ ಗುರುತಿಸತೊಡಗುತ್ತದೋ, ಆಗ ನಾವು ನಾಯಕರು ಆಗುತ್ತೇವೆ ಎಂದರು. ಸಂಘದಲ್ಲಿ ಸದಸ್ಯತ್ವ, ಹಣ, ಮಾನವ ಸಂಪನ್ಮೂಲ ಮತ್ತು ಆಸ್ತಿ ಇವೆ. ಇವೆಲ್ಲವನ್ನು ಲಾಭದಾಯಕವಾಗಿ ನಿರ್ವಹಿಸಲು ಸದಸ್ಯರು ನಮ್ಮನ್ನು ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

‎ಈ ಹಿಂದೆ ರಾಜ್ಯದಲ್ಲಿ 20,800 ಪ್ರಾಥಮಿಕ ಸಹಕಾರ ಸಂಘಗಳಿದ್ದರೂ, ಕಚೇರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು ಕೇವಲ 5,500 ಸಂಘಗಳು ಮಾತ್ರ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಫಾಲೋವರ್‌ಶಿಪ್ ಇರುವ ಕಡೆ ಲೀಡರ್‌ಶಿಪ್ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

‎ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕೆ.ಆರ್. ನಾರಾಯಣನ್, ಡಾ. ವೆಂಕಟರಮಣ, ಶರದ್ ಪವಾರ್, ಅಮಿತ್ ಶಾ ಸೇರಿದಂತೆ ಹಲವರು ಸಹಕಾರ ಕ್ಷೇತ್ರದ ನಾಯಕರಾಗಿದ್ದಾರೆ ಎಂದು ಉದಾಹರಿಸಿದರು.

ನಾಯಕನಾಗಿ ಪ್ರಾಥಮಿಕ ಸಹಕಾರ ಸಂಘದ ಸದಸ್ಯರಾದ ಮೇಲೆ ನಮ್ಮ ದೂರದೃಷ್ಟಿ ಏನು ಎಂಬ ಅರಿವು ಇರಬೇಕು ಎಂದು ಸಲಹೆ ನೀಡಿದರು. 1904ರಲ್ಲಿ ಸಹಕಾರ ಸಂಘ ಸ್ಥಾಪನೆಯಾದಾಗ ಗ್ರಾಮಸ್ಥರು ಸರ್ಕಾರದಿಂದ ಕೆರೆ ನಿರ್ಮಾಣ, ಸಾರಿಗೆ ವ್ಯವಸ್ಥೆ ಹಾಗೂ ರೈಲು ಸಂಪರ್ಕವನ್ನು ಕೇಳುತ್ತಿದ್ದರು ಎಂಬ ಇತಿಹಾಸವನ್ನೂ ಸ್ಮರಿಸಿದರು.

‎ಸಹಕಾರ ಸಂಘದ ಉದ್ದೇಶ ಪ್ರೇರಣೆ ನೀಡುವುದಾಗಿರಬೇಕು. ಇತರರನ್ನು ಹುರಿದುಂಬಿಸುವ ಗುಣ ನಿರ್ದೇಶಕರಲ್ಲಿ ಇರಬೇಕು. ಉತ್ತಮ ವಾಗ್ಮಿತ್ವ, ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಸಾಮರ್ಥ್ಯ, ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದ್ದವನೇ ನಾಯಕನಾಗುತ್ತಾನೆ ಎಂದು ಹೇಳಿದರು.

‎ವಿಶ್ವಾಸ, ಮುಂದಾಲೋಚನೆ, ಸವಾಲುಗಳನ್ನು ಎದುರಿಸುವ ಶಕ್ತಿ ಹಾಗೂ ನಮ್ಮ ದುರ್ಬಲತೆಗಳನ್ನು ಅರಿತುಕೊಳ್ಳುವ ಮನೋಭಾವ ಇದ್ದರೆ ಮಾತ್ರ ನಾಯಕತ್ವ ಸಾಧಿಸಬಹುದು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿಜವಾದ ಮಾಲೀಕರು ಸದಸ್ಯರೇ ಎಂದು ಅವರು ಸ್ಪಷ್ಟಪಡಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರು ಆದ ಶ್ರೀ ಎಸ್.ಕೆ.ಮರಿಯಪ್ಪ, ಯೂನಿಯನ್ನಿನ ನಿರ್ದೇಶಕರು ಹಾಗೂ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಶ್ರೀ ಹೆಚ್.ಬಿ.ದಿನೇಶ್ ಬುಳ್ಳಾಪುರ, ಮತ್ತೋರ್ವ ಯೂನಿಯನ್ನಿನ ನಿರ್ದೇಶಕರಾದ ಶ್ರೀ ನರಸಿಂಹ ಸಿ.ಗಂಧದಮನೆ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಶಿವಮೊಗ್ಗ ಉಪವಿಭಾಗ ಶ್ರೀ ಶ್ರೀನಿವಾಸ ಟಿ.ವಿ.ಇವರುಗಳು ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More